For Quick Alerts
  ALLOW NOTIFICATIONS  
  For Daily Alerts

  ಮಾರ್ಚ್ 29ಕ್ಕೆ ತೆರೆಕಾಣಲಿವೆ 9 ಸಿನಿಮಾಗಳು: ನಿಮ್ಮ ಆಯ್ಕೆ ಯಾವುದು?

  |

  ಕನ್ನಡ ಚಿತ್ರರಂಗದಲ್ಲಿ ವಾರದಿಂದ ವಾರಕ್ಕೆ ಸಿನಿಮಾಗಳ ರಿಲೀಸ್ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈ ಶುಕ್ರವಾರದ ಸಿನಿಸಂತೆಗೆ ಈ ವಾರ ಒಂಬತ್ತು ಕನ್ನಡ ಸಿನಿಮಾಗಳು ಬರುತ್ತಿವೆ.

  ಪ್ರತಿವಾರ ಹೆಚ್ಚು ಅಂದ್ರೆ ಆರೇಳು ಸಿನಿಮಾಗಳು ರಿಲೀಸ್ ಆಗುತ್ತಿದ್ದವು. ಆದ್ರೆ ಈ ಬಾರಿ ದಾಖಲೆ ಮಟ್ಟಕ್ಕೆ ಒಂಬತ್ತು ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿವೆ. ಯೋಗರಾಜ್ ಭಟ್ಟರ 'ಪಂಚತಂತ್ರ' ಮತ್ತು ಒಂದು ಮಕ್ಕಳ ಸಿನಿಮಾ ಸೇರಿದಂತೆ ಒಟ್ಟು 9 ಚಿತ್ರಗಳು ಗಾಂಧಿನಗರದ ಬಾಗಿಲು ತಟ್ಟುತ್ತಿವೆ.

  ಬಾಲಿವುಡ್ ನಿಂದ ಆಫರ್ ಪಡೆದ 'ಪಂಚತಂತ್ರ' ನಟಿ ಸೊನಾಲ್

  ಈ ವಾರ ಭಾರಿ ನಿರೀಕ್ಷೆ ಮೂಡಿಸಿರುವ ಸಿನಿಮಾ ಭಟ್ಟರ 'ಪಂಚತಂತ್ರ'. ಹಾಡುಗಳ ಮತ್ತು ಟ್ರೈಲರ್ ಮೂಲಕ ಕುತೂಹಲ ಕೆರಳಿಸಿರುವ ಪಂಚತಂತ್ರದ ಜೊತೆಗೆ ರಗಡ್, ಲಂಡನ್ ನಲ್ಲಿ ಲಂಬೋದರ, ಯದಾ ಯದಾ ಹೀ ಧರ್ಮಸ್ಯ, ಗಂಧದಕುಡಿ, ಹನಿಗಳು, ರಣಕಣಕ, ರವಿಹಿಸ್ಟರಿ ಮತ್ತು ಧರ್ಮಾಪುರಿ ಸಿನಿಮಾಗಳು ರಿಲೀಸ್ ಆಗುತ್ತಿವೆ. ಈ ಚಿತ್ರಗಳ ಬಗ್ಗೆ ಸಣ್ಣ ವಿವರ ಮುಂದೆ ಓದಿ...

  'ರಗಡ್' ಆಗಿ ಬರ್ತಿದ್ದಾರೆ 8 ಪ್ಯಾಕ್ ವಿನೋದ್ ಪ್ರಭಾಕರ್

  'ರಗಡ್' ಆಗಿ ಬರ್ತಿದ್ದಾರೆ 8 ಪ್ಯಾಕ್ ವಿನೋದ್ ಪ್ರಭಾಕರ್

  ವಿನೋದ್ ಪ್ರಭಾಕರ್ ಅಭಿನಯದ ರಗಡ್ ಸಿನಿಮಾ ಇದೇ ತಿಂಗಳು 29ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗುತ್ತಿದೆ. ಯುವ ನಿರ್ದೇಶಕ ಮಹೇಶ್ ಗೌಡ ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ. 8 ಪ್ಯಾಕ್ ನಲ್ಲಿ ಮಿಂಚಿರುವ ವಿನೋದ್ ಗೆ ನಾಯಕಿಯಾಗಿ ಚೈತ್ರಾ ರೆಡ್ಡಿ ಕಾಣಿಸಿಕೊಂಡಿದ್ದಾರೆ.

  ಗಾಂಧಿನಗರದಲ್ಲಿ ಲಂಡನ್ ಲಂಬೋದರ

  ಗಾಂಧಿನಗರದಲ್ಲಿ ಲಂಡನ್ ಲಂಬೋದರ

  ಈ ವಾರ ರಿಲೀಸ್ ಆಗುತ್ತಿರುವ ಚಿತ್ರಗಳಲ್ಲಿ 'ಲಂಡನ್ ನಲ್ಲಿ ಲಂಬೋದರ' ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಬಿಗ್ ಬಾಸ್ ಖ್ಯಾತಿಯ ಶ್ರುತಿ ಪ್ರಕಾಶ್ ನಾಯಕಿಯಾಗಿ ಅಭಿನಯಿಸಿರುವ ಚೊಚ್ಚಲ ಸಿನಿಮಾ. ನಾಯಕನಾಗಿ ಯುವ ಪ್ರತಿಭೆ ಸಂತೋಷ್ ಕಾಣಿಸಿಕೊಂಡಿದ್ದಾರೆ. ರಾಜ್ ಸೂರ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ಹಾಡುಗಳು ಮತ್ತು ಟ್ರೈಲರ್ ಮೂಲಕ ಗಮನ ಸೆಳೆದಿರುವ 'ಲಂಡನ್ ನಲ್ಲಿ ಲಂಬೋದರ' ಪ್ರೇಕ್ಷಕರ ಮನಗೆಲ್ಲುತ್ತಾ ಕಾದು ನೋಡಬೇಕು.

  'ಪಂಚತಂತ್ರ'ದೊಂದಿಗೆ ಬರ್ತಿದ್ದಾರೆ ಭಟ್ರು

  'ಪಂಚತಂತ್ರ'ದೊಂದಿಗೆ ಬರ್ತಿದ್ದಾರೆ ಭಟ್ರು

  ಈ ವಾರ ರಿಲೀಸ್ ಆಗುತ್ತಿರುವ ಸಿನಿಮಾಗಳಲ್ಲಿ ನಿರ್ದೇಶಕ ಯೋಗರಾಜ್ ಭಟ್ ಅವರ 'ಪಂಚತಂತ್ರ ಸಿನಿಮಾ ಭಾರಿ ನಿರೀಕ್ಷೆ ಹುಟ್ಟಿಹಾಕಿದೆ. ಹಾಡುಗಳು ಮತ್ತು ಟ್ರೈಲರ್ ಮೂಲಕ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ಯುವ ಪ್ರತಿಭೆಗಳಾದ ವಿಹಾನ್ ಗೌಡ, ಅಕ್ಷರಾ ಗೌಡ, ಸೋನಲ್ ಮಾಂತೇರೊ ಅಭಿನಯಿಸಿರುವ 'ಪಂಚತಂತ್ರ' ಪ್ರೇಕ್ಷಕರ ಮನಗೆಲ್ಲುತ್ತಾ ಅನ್ನುವುದು ಇದೇ ವಾರ ಗೊತ್ತಾಗಲಿದೆ.

  ಪಂಚ ಅಂಶಗಳ ಜೊತೆಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಭಟ್ಟರು

  ಯದಾ ಯದಾ ಹೀ ಧರ್ಮಸ್ಯ

  ಯದಾ ಯದಾ ಹೀ ಧರ್ಮಸ್ಯ

  ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ ಅಭಿನಯದ 'ಯದಾ ಯದಾ ಹೀ ಧರ್ಮಸ್ಯ' ಸಿನಿಮಾ ಸಹ ಈ ವಾರ ರಿಲೀಸ್ ಆಗುತ್ತಿರುವ 9 ಸಿನಿಮಾಗಳ ಲಿಸ್ಟ್ ನಲ್ಲಿದೆ. ಮೊದಲ ಬಾರಿಗೆ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ವಿಜಯ್ ರಾಘವೇಂದ್ರ ಜೊತೆಗೆ ಪ್ರಜ್ವಲ್ ದೇವರಾಜ್ ಸಹ ಅಭಿನಯಿಸಿದ್ದಾರೆ. ಸಾಯಿ ಕುಮಾರ್ ವಿಲನ್ ಆಗಿ ನಟಿಸಿದ್ದಾರೆ. ಯುವ ಪ್ರತಿಭೆ ವಿರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ.

  'ಚೌಕ' ನಂತರ ಒಟ್ಟಿಗೆ ಬರ್ತಿದ್ದಾರೆ ವಿಜಯ್ ರಾಘವೇಂದ್ರ ಮತ್ತು ಪ್ರಜ್ವಲ್

  ಮಕ್ಕಳ ಸಿನಿಮಾದ ಜೊತೆಗೆ ಇನ್ನೂ 4 ಸಿನಿಮಾಗಳು

  ಮಕ್ಕಳ ಸಿನಿಮಾದ ಜೊತೆಗೆ ಇನ್ನೂ 4 ಸಿನಿಮಾಗಳು

  ಸಂತೊಷ್ ಶೆಟ್ಟಿ ನಿರ್ದೇಶದ ಗಂಧದಕುಡಿ ಮಕ್ಕಳ ಸಿನಿಮಾ ಇದೆ ವಾರ ತೆರೆಗೆ ಬರುತ್ತಿದೆ. ಇದರ ಜೊತೆಗೆ ನಾಗೇಶ್ ಕುಣಿಗಲ್ ಕಥೆ, ನಿರ್ದೇಶನ, ಸಾಹಿತ್ಯ ಬರೆದು ನಿರ್ಮಿಸಿ ನಿರ್ದೇಶನ ಮಾಡಿರುವ 'ಹನಿಗಳು' ಸಿನಿಮಾ. ಸುಧಾಕರ್ ಬನ್ನಂಜೆ ನಿರ್ದೇಶನದ ಪಕ್ಕಾ ಲವ್ ಸ್ಟೋರಿಯ 'ರಣಕಣಕ', ಹೇಮಂತ್ ನಾಯ್ಕ್ ನಿರ್ದೇಶನದ 'ಧರ್ಮಾಪುರ' ಮತ್ತು ನಿರ್ದೇಶಕ ಮಧುಚಂದ್ರ ನಿರ್ದೇಶನದ 'ರವಿ ಹಿಸ್ಟರಿ' ಸಿನಿಮಾಗಳು ತೆರೆಗೆ ಬರುತ್ತಿವೆ. ವಿಶೇಷ ಅಂದರೆ ಈ ಎಲ್ಲಾ ಸಿನಿಮಾಗಳು ಹೊಸಬರ ಸಿನಿಮಾಗಳಾಗಿವೆ.

  ಕನ್ನಡದ 'ಗಂಧದ ಕುಡಿ' ಹಿಂದಿಯಲ್ಲಿ 'ಚಂದನ್ ವನ್': ಮಾರ್ಚ್ 29ಕ್ಕೆ ತೆರೆಗೆ

  English summary
  Nine kannada movies will release on March 29. Panchatantra, Londonalli lambodara, Ragad are most expected movies are in these nine movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X