For Quick Alerts
  ALLOW NOTIFICATIONS  
  For Daily Alerts

  ಆಸೆ ಬಿಟ್ಬಿಡಿ.! ಇನ್ಮುಂದೆಯೂ ಮಲ್ಟಿಪ್ಲೆಕ್ಸ್ ಗಳಲ್ಲಿ 200.ರೂಗೆ ಟಿಕೆಟ್ ಸಿಗಲ್ಲ.!

  By Bharath Kumar
  |

  'ಮಲ್ಟಿಪ್ಲೆಕ್ಸ್'ಗಳಲ್ಲಿ ಏಕರೂಪ ಟಿಕೆಟ್ ದರ ನೀತಿ ಜಾರಿಯಾಗಿದ್ದು, ಇನ್ಮುಂದೆ ಎಲ್ಲ ಚಿತ್ರಮಂದಿರಗಳಲ್ಲೂ ಟಿಕೆಟ್ ಬೆಲೆ ಗರಿಷ್ಟ 200 ರೂಪಾಯಿ ಎಂದು ಸರ್ಕಾರ ಅಧಿಕೃತವಾಗಿ ಆದೇಶ ಮಾಡಿದೆ. ಆದ್ರೆ, ನಿಮಗೆಲ್ಲ ಗೊತ್ತಿರಲಿ, ಸರ್ಕಾರ ಆದೇಶ ಮಾಡಿದಂತೆ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂಪಾಯಿಗೆ ಟಿಕೆಟ್ ಸಿಗಲ್ಲ.[ಸಿನಿಮಾ ಟಿಕೆಟ್ ದರ ಗರಿಷ್ಠ 200 ರು, ಆದೇಶ ಜಾರಿ, ಆದರೆ...]

  ಹೌದು, 200 ರೂಪಾಯಿ ಟಿಕೆಟ್ ಅಂದಾಕ್ಷಣ ಎಲ್ಲರೂ ಖುಷಿಯಾಗಿದ್ದರು. ಯಾವಾಗ ಜಾರಿಯಾಗುತ್ತೆ, ಯಾವಾಗ 200 ರೂಪಾಯಿಗೆ ಸಿನಿಮಾ ನೋಡುವುದು ಎಂಬ ಕಾತುರ ಜನಗಳನ್ನ ಕಾಡುತ್ತಿತ್ತು. ಕೊನೆಗೂ ಸರ್ಕಾರ 200 ರೂಪಾಯಿ ಟಿಕೆಟ್ ನೀತಿಗೆ ಸಹಿ ಹಾಕಿ ಜಾರಿ ಮಾಡಿಯೇ ಬಿಟ್ಟಿತ್ತು. ಆದ್ರೆ, ಇದರಿಂದ ಖುಷಿಯಾಗಿದ್ದ ಜನರು ಮತ್ತೆ ಬೇಸರ ಮಾಡಿಕೊಳ್ಳುವಂತಾಗಿದೆ.

  ಅಷ್ಟಕ್ಕೂ, ಸರ್ಕಾರ ಆದೇಶ ಮಾಡಿದ್ದರೂ, 200 ರೂಪಾಯಿ ಟಿಕೆಟ್ ಯಾಕೆ ಸಿಗಲ್ಲ ಅಂತ ಮುಂದೆ ಓದಿ.....

  ಸರ್ಕಾರ 200ರೂ ಟಿಕೆಟ್ ದರ ಆದೇಶ ಮಾಡಿದ್ದು ನಿಜ

  ಸರ್ಕಾರ 200ರೂ ಟಿಕೆಟ್ ದರ ಆದೇಶ ಮಾಡಿದ್ದು ನಿಜ

  ಮಲ್ಟಿಪ್ಲೆಕ್ಸ್ ಮತ್ತು ಇತರೆ ಚಿತ್ರಮಂದಿರಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂಪಾಯಿ ಎಂದು ಸರ್ಕಾರ ಆದೇಶ ಮಾಡಿರುವುದು ನಿಜ. ಇದರಲ್ಲಿ ಯಾವುದೇ ಅನುಮಾನ ಬೇಡ. ಬಜೆಟ್ ಮಂಡನೆ ವೇಳೆ ಕೊಟ್ಟ ಭರಸವೆಯಂತೆ ಸರ್ಕಾರ ನಡೆದುಕೊಂಡಿದೆ. ಆದ್ರೆ, ಆ ಸೌಲಭ್ಯ ಸಿಗಲ್ಲ ಅಷ್ಟೇ.[ಟಿಕೆಟ್ ದರ 200 ರೂ ನಿಗದಿ: ಆದ್ರೆ, ಜಗ್ಗೇಶ್ ಆಸೆಯೇ ಬೇರೆ ಇದೆ!]

  200ರೂ ಟಿಕೆಟ್ ಯಾಕೆ ಸಿಗಲ್ಲ?

  200ರೂ ಟಿಕೆಟ್ ಯಾಕೆ ಸಿಗಲ್ಲ?

  ಸರ್ಕಾರದ ಆದೇಶದಂತೆ ಪ್ರೇಕ್ಷಕರ ಕೈಗೆ 200 ರೂಪಾಯಿ ಟಿಕೆಟ್ ಸಿಗುವುದು ದೂರದ ಮಾತು. ಯಾಕಂದ್ರೆ, ಸರ್ಕಾರ ಹೇಳಿರುವುದು 'ಟಿಕೆಟ್ ಬೆಲೆ' 200 ರೂಗಿಂತ ಹೆಚ್ಚಾಗಲ್ಲ ಅಂತ. ಆದ್ರೆ, ತೆರಿಗೆ ಹಣ ಪಾವತಿಸಬಾರದು ಎಂದು ಹೇಳಿಲ್ಲ ಅಲ್ವಾ!['ಮಲ್ಟಿಪ್ಲೆಕ್ಸ್'ಗಳಲ್ಲಿ ರೂ.200 ಟಿಕೆಟ್ ದರ: ಇನ್ನೆರೆಡು ದಿನಗಳಲ್ಲಿ ಅಧಿಕೃತ]

  200ರೂ ಟಿಕೆಟ್ ಜೊತೆ ತೆರಿಗೆ ಪಾವತಿಸಿ

  200ರೂ ಟಿಕೆಟ್ ಜೊತೆ ತೆರಿಗೆ ಪಾವತಿಸಿ

  ಹೌದು, ಟಿಕೆಟ್ ದರ 200 ರೂಪಾಯಿಗಿಂತ ಕಡಿಮೆ ನಿಗದಿಯಾಗುವುದು ಖಚಿತ. ಆದ್ರೆ, ಅದರ ಜೊತೆಗೆ ಟ್ಯಾಕ್ಸ್ ಪಾವತಿಸಲೇಬೇಕು ಎಂಬುದು ಅಷ್ಟೇ ನಿಖರ ಮತ್ತು ವಾಸ್ತವ. ಹೀಗಾಗಿ 200ರೂ ಜೊತೆಗೆ ಹೆಚ್ಚಿನ ಟ್ಯಾಕ್ಸ್ ಕಟ್ಟಲೇಬೇಕು.[ಮೇ ತಿಂಗಳಿಂದ 'ಮಲ್ಟಿಪ್ಲೆಕ್ಸ್'ಗಳಲ್ಲಿ 200 ರೂ ಟಿಕೆಟ್ ಕಡ್ಡಾಯ: ಸಿದ್ದರಾಮಯ್ಯ]

  ಹಾಗಾದ್ರೆ, ಟಿಕೆಟ್ ಬೆಲೆ ಎಷ್ಟು?

  ಹಾಗಾದ್ರೆ, ಟಿಕೆಟ್ ಬೆಲೆ ಎಷ್ಟು?

  ಹೆಚ್ಚು ಕಡಿಮೆ ಟಿಕೆಟ್ ದರ 180 ರಿಂದ 190 ಆದ್ರೂ + ಮನರಂಜನಾ ತೆರಿಗೆ ಶೇ 30 + ಸೇವಾ ತೆರಿಗೆ ಶೇ 15 + ಹೆಚ್ಚುವರಿ ಸೆಸ್ ಗಳು ಸೇರಿದರೆ ಸಿನಿಮಾ ಟಿಕೆಟ್ ಬೆಲೆ 250 ರಿಂದ 260 ರೂಪಾಯಿವರೆಗೂ ಆಗಲಿದೆ.['ಮಲ್ಟಿಪ್ಲೆಕ್ಸ್'ಗಳಲ್ಲಿ ಇನ್ನೂ ಸಿಗುತ್ತಿಲ್ಲ 200 ರೂಗೆ ಸಿನಿಮಾ ಟಿಕೆಟ್]

  200 ರೂ ಟಿಕೆಟ್ ಆಸೆ ಬಿಟ್ಬಿಡಿ?

  200 ರೂ ಟಿಕೆಟ್ ಆಸೆ ಬಿಟ್ಬಿಡಿ?

  ಮಲ್ಟಿಪ್ಲೆಕ್ಸ್ ಲೆಕ್ಕಾಚಾರಗಳನ್ನ ಕೂಡಿ ಕಳೆದರು 200 ರೂಪಾಯಿಗೆ ಟಿಕೆಟ್ ಸಿಗುವುದು ಬಹುತೇಕ ಅನುಮಾನ. ಈ ಮೇಲೆ ತಿಳಿಸಿದಂತೆ ಟಿಕೆಟ್ ದರದ ಜೊತೆ ಟ್ಯಾಕ್ಸ್ ಸೇರಿದ್ರು 200 ಟಿಕೆಟ್ ಸಿಗಲ್ಲ. ಹಾಗಾದ್ರೆ, ಪ್ರೇಕ್ಷಕರ ಆಸೆಗೆ ತಣ್ಣಿರು ಎರೆಚಿದಂತೆ.

  ಐ-ಮಾಕ್ಸ್, 4ಡಿ ಎಕ್ಸ್ ಅನ್ವಯವಿಲ್ಲ

  ಐ-ಮಾಕ್ಸ್, 4ಡಿ ಎಕ್ಸ್ ಅನ್ವಯವಿಲ್ಲ

  ಐ-ಮಾಕ್ಸ್ ಮತ್ತು 4ಡಿ ಎಕ್ಸ್ ಚಿತ್ರಮಂದಿರಗಳನ್ನು ಗರಿಷ್ಠ ಪ್ರವೇಶ ದರ ಮಿತಿಯಿಂದ ಹೊರತುಪಡಿಸಲಾಗಿದೆ. ಇನ್ನು ಮಲ್ಟಿಪ್ಲೆಕ್ಸ್ ಗಳಲ್ಲಿ ಗೋಲ್ಡ್ ಕ್ಲಾಸ್ ಸ್ಕ್ರೀನ್ ಮತ್ತು ಗೋಲ್ಡ್ ಕ್ಲಾಸ್ ಸೀಟುಗಳನ್ನು ಒಟ್ಟು ಸೀಟುಗಳ ಶೇ.10 ರಷ್ಟು ಮೀರದಂತೆ ಹೊರತುಪಡಿಸಲಾಗಿದೆ.['ಮಲ್ಟಿಫ್ಲೆಕ್ಸ್'ಗಳಿಗೆ ಸಿದ್ದು ಸರ್ಕಾರ ಶಾಕ್: ಚಿತ್ರಪ್ರೇಮಿಗಳಿಗೆ 'ಸಿನಿಮಾ ಭಾಗ್ಯ']

  ಸರ್ಕಾರ ಆದೇಶಕ್ಕೂ ಮುಂಚೆನೂ ಇದೆ ಬೆಲೆ ಇತ್ತು!

  ಸರ್ಕಾರ ಆದೇಶಕ್ಕೂ ಮುಂಚೆನೂ ಇದೆ ಬೆಲೆ ಇತ್ತು!

  ಎಲ್ಲರಿಗೂ ತಿಳಿದಿರುವಾಗೆ, ರಾಜ್ಯ ಸರ್ಕಾರ ಆದೇಶ ಮಾಡುವುದಕ್ಕೂ ಮೊದಲು ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳ ಬೆಲೆ ವಾರದ ದಿನಗಳಲ್ಲಿ 150 ರಿಂದ 200 ರವರೆಗೂ ಇತ್ತು. ವಾರಾಂತ್ಯದಲ್ಲಿ ಮತ್ತು ಪ್ರೈಮ್ ಟೈಮ್ ನಲ್ಲಿ ಟಿಕೆಟ್ ಬೆಲೆ 250 ಮೀರುತ್ತಿತ್ತು. ಅದರಲ್ಲೂ ದೊಡ್ಡ ನಟರ ಸಿನಿಮಾಗಳು ಟಿಕೆಟ್ ಆರಂಭದಲ್ಲಿ 200ರೂ ಗಡಿದಾಟುತ್ತಿತ್ತು. ಈಗಲೂ ಹೆಚ್ಚು ಕಡಿಮೆ ಅದೇ ಪರಿಸ್ಥಿತಿ ಕಾಣುತ್ತಿದೆ. ಮತ್ತೆ ಇದರಲ್ಲಿ ವಿಶೇಷತೆ ಏನಿದೆ?

  ಪರಭಾಷೆ ಚಿತ್ರಗಳಿಗೆ ಅನುಕೂಲವಾಯಿತು ಅಷ್ಟೇ!

  ಪರಭಾಷೆ ಚಿತ್ರಗಳಿಗೆ ಅನುಕೂಲವಾಯಿತು ಅಷ್ಟೇ!

  ಸ್ವಲ್ಪ ಆಳವಾಗಿ ನೋಡುವುದಾದರೇ, ಮಲ್ಟಿಪ್ಲೆಕ್ಸ್ ಗಳಲ್ಲಿ ಪರಭಾಷಾ ಚಿತ್ರಗಳಿಗೆ ಟಿಕೆಟ್ ಬೆಲೆ ದುಬಾರಿಯಾಗಿತ್ತು. 300, 400, 500 ರೂಪಾಯಿವರೆಗೂ ಮಾರಾಟವಾಗುತಿತ್ತು. ಬಹುಶಃ ಇನ್ಮುಂದೆ ಪರಭಾಷಾ ಚಿತ್ರಪ್ರೇಮಿಗಳಿಗೆ ಈ ಯೋಜನೆ ಸಹಕಾರಿಯಾಗಬಹುದು.

  200 ಟಿಕೆಟ್ ಸಿಗಬೇಕಾದ್ರೆ ಹೀಗಾಗ್ಬೇಕು?

  200 ಟಿಕೆಟ್ ಸಿಗಬೇಕಾದ್ರೆ ಹೀಗಾಗ್ಬೇಕು?

  ಜನರ ನಿರೀಕ್ಷೆ ಹಾಗೂ ಸರ್ಕಾರದ ಆದೇಶದ ಅನ್ವಯ ಟಿಕೆಟ್ ದರ 200 ರೂಗೆ ಸಿಗಬೇಕಾದ್ರೆ, ಗರಿಷ್ಟ ದರ 150 ರೂಪಾಯಿ ಮಾಡಬೇಕು. ಆಗ ಟ್ಯಾಕ್ಸ್ ಸೇರಿ 200 ರೂಪಾಯಿ ಆಗುತ್ತೆ. ಆದ್ರೀಗ, 200ರೂ ಘೋಷಣೆ ಮಾಡಿರುವುದರಿಂದ ಟ್ಯಾಕ್ಸ್ ಸೇರಿ 250ಕ್ಕೂ ಹೆಚ್ಚು ಬೆಲೆ ನೀಡಬೇಕಾಗುತ್ತೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

  English summary
  The Rs 200 cap on multiplex tickets has finally been notified by the state government. But 200 ticket may end up costing over the cap as the government order states the cap is exclusive of taxes.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X