Don't Miss!
- Sports
U-19 ಮಹಿಳಾ ಟಿ20 ವಿಶ್ವಕಪ್ ಗೆದ್ದ ಭಾರತ ಮಹಿಳಾ ತಂಡಕ್ಕೆ ಬಹುಮಾನ ಘೋಷಿಸಿದ ಜಯ್ ಶಾ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡ ಚಿತ್ರಗಳಿಗೆ ಅನ್ಯಾಯ: ಕೆರಳಿದ ನೀನಾಸಂ ಸತೀಶ್.!
Recommended Video

ಎಲ್ಲರನ್ನೂ ವಿಶಾಲ ಮನಸ್ಸಿನಿಂದ ಬಿಗಿದಪ್ಪಿಕೊಳ್ಳುವ ಕನ್ನಡಿಗರ ಮೇಲೆ ನಿರಂತರವಾಗಿ ದಬ್ಬಾಳಿಕೆ, ಅನ್ಯಾಯ ನಡೆಯುತ್ತಲೇ ಇದೆ. ಕರ್ನಾಟಕದಲ್ಲಿ ಕನ್ನಡಕ್ಕಿಂತ ಬೇರೆ ಭಾಷೆಗಳಿಗೆ ಬೆಲೆ ಜಾಸ್ತಿ. ಕರುನಾಡಿನ ಮೂಲೆ ಮೂಲೆಯಲ್ಲೂ ಕನ್ನಡ ಚಿತ್ರಗಳಿಗಿಂತ ಪರಭಾಷೆಯ ಚಿತ್ರಗಳಿಗೆ ಮಾರ್ಕೆಟ್ ಹೆಚ್ಚು. ದುರಂತ ಎನಿಸಿದರೂ, ಇದೇ ವಾಸ್ತವ.!
ಕರ್ನಾಟಕದಲ್ಲಿ ಪರಭಾಷೆಯ ಸಿನಿಮಾಗಳು ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡಿವೆ. ಆದ್ರೆ, ಕನ್ನಡ ಚಿತ್ರಗಳು 'ಕೋಟಿ' ಕ್ಲಬ್ ಸೇರುವುದು ತೀರಾ ಅಪರೂಪ.
ಮೊನ್ನೆ ಮೊನ್ನೆಯಷ್ಟೇ ರಿಲೀಸ್ ಆದ 'ಅಯೋಗ್ಯ' ಚಿತ್ರವನ್ನೇ ತೆಗೆದುಕೊಳ್ಳಿ... ಅಪ್ಪಟ ಮಂಡ್ಯ ಸೊಗಡಿನಲ್ಲಿ ತಯಾರಾಗಿರುವ ಈ ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಿಡುಗಡೆ ಆದ ಒಂಬತ್ತು ದಿನಗಳಲ್ಲಿ ಹತ್ತು ಕೋಟಿ ಕಲೆಕ್ಷನ್ ಮಾಡಿರುವ 'ಅಯೋಗ್ಯ' ಚಿತ್ರಕ್ಕೆ ಹೈದರಾಬಾದ್ ನಲ್ಲಿ ನೋ ಸ್ಕ್ರೀನ್ ಬೋರ್ಡ್ ಬಿದ್ದಿದೆ.
ತೆಲುಗಿನ ಎಲ್ಲಾ ಚಿತ್ರಗಳೂ ಕರ್ನಾಟಕದ ಲೆಕ್ಕವಿಲ್ಲದಷ್ಟು ಥಿಯೇಟರ್ ಗಳಲ್ಲಿ ತೆರೆ ಕಾಣುತ್ತೆ. ಕೋಟ್ಯಾಂತರ ರೂಪಾಯಿ ಕಲೆಕ್ಷನ್ ಮಾಡುತ್ತೆ. ಇಲ್ಲಿ ಪರಭಾಷಾ ಚಿತ್ರಗಳ ಹಾವಳಿಯಿಂದ ಕನ್ನಡ ಚಿತ್ರಗಳಿಗೆ ಥಿಯೇಟರ್ ಗಳ ಕೊರತೆ ಎದುರಾಗಿದೆ. ಆದ್ರೆ, ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೀಗಿಲ್ಲ.!
ಪರರಾಜ್ಯಗಳಲ್ಲಿ ಆಯಾ ಭಾಷೆಗಳ ಚಿತ್ರಗಳಿಗೆ ಮೊದಲ ಪ್ರಾಮುಖ್ಯತೆ. ಬಳಿಕ ಬೇರೆ ಭಾಷೆಯ ಚಿತ್ರಗಳಿಗೆ ಅವಕಾಶ. ಹೈದರಾಬಾದ್ ನಲ್ಲಿ 'ಅಯೋಗ್ಯ' ಚಿತ್ರಕ್ಕೆ ಎರಡು ಶೋ ಕೊಡಲು ಅಲ್ಲಿನ ವಾಣಿಜ್ಯ ಮಂಡಳಿ ಹಿಂದೆ ಮುಂದೆ ನೋಡ್ತಿದ್ಯಂತೆ.
ಎಂಥಾ ಪರಿಸ್ಥಿತಿ ಬಂತು ನೋಡಿ, ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಜಾಗ ಇಲ್ಲ. ಬೇರೆ ರಾಜ್ಯಗಳಲ್ಲೂ ಅವಕಾಶ ಇಲ್ಲ. ಹೀಗೆ ಆದರೆ ಕನ್ನಡಿಗರ ಸ್ಥಿತಿ ಗೋವಿಂದ.! ಇದೇ ಕಾರಣಕ್ಕೆ ನಟ ನೀನಾಸಂ ಸತೀಶ್ ಸಿಕ್ಕಾಪಟ್ಟೆ ಗರಂ ಆಗಿದ್ದಾರೆ. ಮುಂದೆ ಓದಿರಿ....

ಕನ್ನಡಿಗರ ಸ್ಥಿತಿ
''ಹೈದರಾಬಾದ್ ನ ಮಲ್ಟಿಪ್ಲೆಕ್ಸ್ ಗಳಲ್ಲಿ ನಮ್ಮ 'ಅಯೋಗ್ಯ' ಸಿನಿಮಾದ ಎರಡು ಶೋ ಹಾಕಲು ಅಲ್ಲಿನ ಫಿಲ್ಮ್ ಚೇಂಬರ್ ಪರ್ಮಿಷನ್ ತೆಗೆದುಕೊಳ್ಳಬೇಕಂತೆ. ಇಲ್ಲಿ ಅವರ ಸಿನಿಮಾ ಶೋಗಳು ಲೆಕ್ಕವಿಲ್ಲದ ಹಾಗೆ ಓಡುತ್ತಿದೆ. ನಮ್ಮ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಕರ್ನಾಟಕದಲ್ಲಿ ನಮ್ಮ ಚಿತ್ರಗಳಿಗಿಂತ ಪರಭಾಷೆಯ ಚಿತ್ರಗಳಿಗೆ ಹೆಚ್ಚು ಶೋಗಳನ್ನ ನೀಡಲಾಗುತ್ತಿದೆ. ಇದು ನಮ್ಮ ಕನ್ನಡಿಗರ ಸ್ಥಿತಿ'' ಎಂದು ಫೇಸ್ ಬುಕ್ ಲೈವ್ ಮೂಲಕ ನೀನಾಸಂ ಸತೀಶ್ ಬೇಸರ ವ್ಯಕ್ತಪಡಿಸಿದ್ದಾರೆ.
ವಿಮರ್ಶೆ
:
ಈ
ಮಂಡ್ಯದ
ಗಂಡು
ಅಯೋಗ್ಯ
ಅಲ್ಲ
'ಯೋಗ್ಯ'

ಭಿಕ್ಷೆ ಬೇಡಬೇಕು.!
''ಬೇರೆ ರಾಜ್ಯಗಳಲ್ಲಿ ನಾವು ಒಂದೊಂದು ಶೋ ಕೇಳೋಕೆ ಭಿಕ್ಷೆ ಬೇಡಬೇಕು. ಆದ್ರೆ, ಅವರು ಇಲ್ಲಿ ಸಾವಿರಾರು ಶೋಗಳನ್ನು ತೆಗೆದುಕೊಳ್ಳುತ್ತಾರೆ. ಇದಕ್ಕೆ ಪರಿಹಾರ ಏನು ಗೊತ್ತಿಲ್ಲ'' - ಸತೀಶ್ ನೀನಾಸಂ
6
ಕೋಟಿ
ದಾಟಿದ
'ಅಯೋಗ್ಯ'
ಕಲೆಕ್ಷನ್:
ಚಿತ್ರತಂಡ
ಫುಲ್
ಖುಷ್.!

ಹೊಟ್ಟೆ ಉರಿಯುತ್ತಿದೆ
''ಎಲ್ಲಾ ಕಡೆ 'ಅಯೋಗ್ಯ' ಸಿನಿಮಾ ಫುಲ್ ಆಗಿದ್ದರೂ, ಬುಕ್ ಮೈ ಶೋನಲ್ಲಿ ಶೋಗಳ ಸಂಖ್ಯೆ ಕಮ್ಮಿ ಆಗಿದೆ. ಇದು ನಮ್ಮ ನಿಜವಾದ ಗೆಲುವು.! ಒಂದು ಸಿನಿಮಾ ಹಿಟ್ ಆದರೂ ನಮ್ಮ ಹೊಟ್ಟೆ ಉರಿಯುತ್ತಿದೆ'' ಅಂತಾರೆ ಸತೀಶ್ ನೀನಾಸಂ
ಬಾಕ್ಸ್
ಆಫೀಸ್
ನಲ್ಲಿ
'ಅಯೋಗ್ಯ'ನ
ನಾಗಾಲೋಟ:
10
ಕೋಟಿ
ಕ್ಲಬ್
ಸೇರಿದ
ಚಿತ್ರ

'ಅಯೋಗ್ಯ' ಚಿತ್ರತಂಡದ ಪ್ರತಿಭಟನೆ
ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯವನ್ನ ಖಂಡಿಸಿ 'ಅಯೋಗ್ಯ' ಚಿತ್ರತಂಡ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸುತ್ತಿದೆ. ಕನ್ನಡ ಚಿತ್ರಗಳ ಒಳಿತಿಗಾಗಿ ಕೆ.ಎಫ್.ಸಿ.ಸಿ ಉತ್ತಮ ನಿರ್ಧಾರ ತೆಗೆದುಕೊಳ್ಳಬೇಕಿದೆ.