»   » 'ಒಂದೇ ವಾರಕ್ಕೆ ಕಿಕ್ ಔಟ್': ಮತ್ತೆ ಕನ್ನಡ ಚಿತ್ರಗಳಿಗೆ ಕಂಟಕವಾದ ಮಲ್ಟಿಪ್ಲೆಕ್ಸ್

'ಒಂದೇ ವಾರಕ್ಕೆ ಕಿಕ್ ಔಟ್': ಮತ್ತೆ ಕನ್ನಡ ಚಿತ್ರಗಳಿಗೆ ಕಂಟಕವಾದ ಮಲ್ಟಿಪ್ಲೆಕ್ಸ್

Posted By:
Subscribe to Filmibeat Kannada

ಕನ್ನಡ ಸಿನಿಮಾಗಳಿಗೆ ಮಲ್ಟಿಪ್ಲೆಕ್ಸ್ ನಿಂದ ಅನ್ಯಾಯ ಆಗುತ್ತಲ್ಲೇ ಇದೆ. ಪದೇ ಪದೇ ಈ ರೀತಿಯ ಮಾತುಗಳು ಕೇಳಿ ಬಂದರೂ ಅದಕ್ಕೆ ಯಾವುದೇ ರೀತಿಯ ಪರಿಹಾರ ಮಾತ್ರ ಸಿಕ್ಕಿಲ್ಲ. ಸದ್ಯ ಮತ್ತೆ ಈಗ ಕನ್ನಡದ ಸಿನಿಮಾಗಳಿಗೆ ಮಲ್ಪಿಪ್ಲೆಕ್ಸ್ ನವರು ಸರಿಯಾಗಿ ಸ್ಪಂದಿಸುತ್ತಿಲ್ಲ.

ಕಳೆದ ವಾರ ರಿಲೀಸ್ ಆದ 'ಹೊಂಬಣ್ಣ' ಮತ್ತು 'ಕಥಾ ವಿಚಿತ್ರ' ಸಿನಿಮಾಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಆದರೆ ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ಮಾತ್ರ ಶೋ ಕೊಡುವುದಕ್ಕೆ ಹಿಂದೆ ಮುಂದೆ ನೋಡುತ್ತಿದ್ದಾರೆ. ಅಲ್ಲದೆ ರಿಲೀಸ್ ಆದ ಒಂದೇ ವಾರಕ್ಕೆ ಈ ಸಿನಿಮಾಗಳನ್ನು ಕಿಕ್ ಔಟ್ ಮಾಡಿದ್ದಾರೆ.

No Shows For kannada movies In Multiplex

'ಹೊಂಬಣ್ಣ' ಮತ್ತು 'ಕಥಾ ವಿಚಿತ್ರ' ಸಿನಿಮಾ ತಂಡಗಳು ಈಗಾಗಲೇ ಕೆಲ ಮಲ್ಟಿಪ್ಲೆಕ್ಸ್ ಗಳಿಗೆ ಹೋಗಿ ಮಾತುಕತೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಜೊತೆಗೆ ಇಂತಹ ಫ್ಯಾಮಿಲಿ ಸಿನಿಮಾಗಳಿಗೆ ಪ್ರೈಮ್ ಟೈಂ ನಲ್ಲಿ ಮಲ್ಟಿಪ್ಲೆಕ್ಸ್ ನಲ್ಲಿ ಶೋ ಕೊಟ್ಟಿಲ್ಲ.

ಕಳೆದ ವಾರ ಕನ್ನಡದಲ್ಲಿ 7 ಸಿನಿಮಾಗಳು ರಿಲೀಸ್ ಆಗಿವೆ. ಅವುಗಳ ಪೈಕಿ ಬಹುತೇಕ ಸಿನಿಮಾಗಳು ಒಂದೇ ವಾರಕ್ಕೆ ಪ್ರದರ್ಶನವನ್ನು ಅಂತ್ಯಗೊಳಿಸಿದೆ.

No Shows For kannada movies In Multiplex

ಈ ರೀತಿಯ ಮಲ್ಟಿಪ್ಲೆಕ್ಸ್ ಗಳ ಧೋರಣೆ ಕನ್ನಡದ ಹೊಸ ಸಿನಿಮಾ ತಂಡಗಳಿಗೆ ತಲೆ ನೋವು ತಂದಿದೆ.

English summary
No Shows For Kannada movies Hombanna and Khatha Vichithra In Multiplex

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada