»   » ಶುಭ ಅನ್ನಲ್ಲ, ಸುಮ ಇಲ್ಲ.! ಏನಿದ್ರು 'ರಿಂಗ್ ರೋಡ್' ಮಾತ್ರ

ಶುಭ ಅನ್ನಲ್ಲ, ಸುಮ ಇಲ್ಲ.! ಏನಿದ್ರು 'ರಿಂಗ್ ರೋಡ್' ಮಾತ್ರ

Posted By:
Subscribe to Filmibeat Kannada

ನೈಜಕಥೆ ಆಧರಿತ ಚಿತ್ರಗಳ ಹಣೆಬರಹವೇ ಇಷ್ಟು ಬಿಡಿ. ಎಲ್ಲವನ್ನೂ ಇದ್ದ ಹಾಗೇ ಹೇಳಬೇಕು ಅನ್ನುವ ಭರದಲ್ಲಿ ಒಂದಲ್ಲಾ ವಿವಾದಗಳಿಂದಲೇ 'ರಿಯಲ್ ಸ್ಟೋರಿ' ಬೇಸ್ಡ್ ಸಿನಿಮಾಗಳು ಸದ್ದು ಮಾಡುತ್ತಿರುತ್ತೆ.

ಇತ್ತೀಚೆಗೆ ಟೈಟಲ್ ವಿವಾದದಿಂದ ಗಾಂಧಿನಗರದಲ್ಲಿ ಹೆಚ್ಚು ಸುದ್ದಿಯಲ್ಲಿ ಇದ್ದದ್ದು ಪ್ರಿಯಾ ಬೆಳ್ಳಿಯಪ್ಪ ನಿರ್ದೇಶನದ, ಹಂತಕಿ ಶುಭಾಳ ಕಥೆ ಇದೆ ಎನ್ನಲಾಗಿರುವ 'ರಿಂಗ್ ರೋಡ್ ಶುಭ' ಚಿತ್ರ. [ಜುಲೈ 10ಕ್ಕೆ 'ರಿಂಗ್ ರೋಡ್' ಲೋಕಾರ್ಪಣೆ..!]


no-shubha-and-suma-title-ring-road-is-finalised

ಮೊದಲು ಚಿತ್ರಕ್ಕೆ 'ರಿಂಗ್ ರೋಡ್ ಶುಭ' ಅಂತಾ ಟೈಟಲ್ ಇಡಲಾಗಿತ್ತು. ಇದಕ್ಕೆ ಒಪ್ಪದ ವಾಣಿಜ್ಯ ಮಂಡಳಿ ಕೇವಲ 'ರಿಂಗ್ ರೋಡ್' ಎನ್ನುವ ಟೈಟಲ್ ಗೆ ಮಾತ್ರ ಒಪ್ಪಿಗೆ ನೀಡಿತ್ತು.[ಟೈಟಲ್ ಟ್ರಬಲ್ ನಲ್ಲಿ ಮತ್ತೆ 'ರಿಂಗ್ ರೋಡ್' ಸುಮ]


ಅದಕ್ಕೆ 'ರಿಂಗ್ ರೋಡ್' ಅಂತ ಟೈಟಲ್ ಇಟ್ಟು ಅದರ ಕೆಳಗೆ 'ಸುಮಾಳ ಕಥೆ' ಅನ್ನುವ ಅಡಿ ಬರಹ ಕೊಟ್ಟಿತ್ತು ಚಿತ್ರತಂಡ. ಇದಕ್ಕೆ ಮತ್ತೆ ಆಕ್ಷೇಪ ವ್ಯಕ್ತವಾದ ಹಿನ್ನಲೆಯಲ್ಲಿ ಈಗ 'ಸುಮ' ಹೆಸರನ್ನೂ ತೆಗೆಯಲಾಗಿದೆ. ಬರೀ 'ರಿಂಗ್ ರೋಡ್' ಅನ್ನುವ ಶೀರ್ಷಿಕೆ ಅಡಿಯಲ್ಲಿ ಸಿನಿಮಾ ತೆರೆಕಾಣಲಿದೆ.


ನಿರ್ದೇಶನ-ನಿರ್ಮಾಣ-ಛಾಯಾಗ್ರಹಣ-ಸಂಕಲನ ಸೇರಿದಂತೆ ಪ್ರೊಡಕ್ಷನ್ ನ ಪ್ರತಿ ಹಂತದಲ್ಲೂ ಹೆಣ್ಮಕ್ಕಳೇ ಕೂಡಿ ಮಾಡಿರುವ ಸಿನಿಮಾ ಇದು. ವಿಶೇಷ ಪಾತ್ರದಲ್ಲಿ ದುನಿಯಾ ವಿಜಿ ಹಾಗೂ ನಿಖಿತಾ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಯುವ ನಟಿ ಖುಷಿ ನಟಿಸಿದ್ದಾರೆ. ಸಂಜನಾ, ನೀತು ಸೇರಿದಂತೆ ದೊಡ್ಡ ತಾರಾಬಳಗವಿರುವ ಚಿತ್ರ ಸದ್ಯದಲ್ಲೇ ತೆರೆ ಮೇಲೆ ಬರಲಿದೆ.

English summary
Finally title controversy of Kannada movie 'Ring Road Shubha' ends. Director Priya Belliyappa has finalised the title as 'Ring Road'. The movie is all set to release shortly.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada