»   » ಬೇಟೆಯ ಸಣ್ಣ ಸುಳಿವು ಕೊಡದ 'ಹೆಬ್ಬುಲಿ': ಟ್ರೈಲರ್ ಬಿಡುಗಡೆ ಇಲ್ಲ.!

ಬೇಟೆಯ ಸಣ್ಣ ಸುಳಿವು ಕೊಡದ 'ಹೆಬ್ಬುಲಿ': ಟ್ರೈಲರ್ ಬಿಡುಗಡೆ ಇಲ್ಲ.!

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯದ ಈ ವರ್ಷದ ಬಹುನಿರೀಕ್ಷಿತ ಚಿತ್ರ 'ಹೆಬ್ಬುಲಿ' ಬಿಡುಗಡೆ ಆಗಲು ಇನ್ನೆರಡು ದಿನ ಬಾಕಿಯಿರುವಾಗಲೇ ಎಲ್ಲೆಲ್ಲೂ 'ಹೆಬ್ಬುಲಿ' ಹವಾ ಜೋರಾಗಿದೆ. ಸಾಮಾಜಿಕ ಜಾಲತಾಣಗಳಲ್ಲೂ 'ಹೆಬ್ಬುಲಿ' ಟ್ರೆಂಡಿಂಗ್ ನಲ್ಲಿದೆ ಅಂದ್ರೆ ನೀವೇ ಊಹಿಸಿ 'ಹೆಬ್ಬುಲಿ' ಖದರ್ ಹೇಗಿದೆ ಅಂತ.!

ಹೇಳಿ ಕೇಳಿ, 'ಹೆಬ್ಬುಲಿ' ಕಿಚ್ಚ ಸುದೀಪ್ ಅಭಿನಯದ ಚಿತ್ರ ಆಗಿರುವುದರಿಂದ ಸಹಜವಾಗಿ ಹೈಪ್ ಸ್ವಲ್ಪ ಜಾಸ್ತಿನೇ ಇದೆ. ಅಭಿಮಾನಿಗಳ ನಿರೀಕ್ಷೆ ಮಟ್ಟವನ್ನ ಡಬಲ್ ಮಾಡಲು ಇಲ್ಲಿಯವರೆಗೂ ಎರಡು ಹಾಡುಗಳ ಟೀಸರ್ ನಷ್ಟೇ ಬಿಡುಗಡೆ ಮಾಡಲಾಗಿದೆ ಹೊರತು 'ಹೆಬ್ಬುಲಿ' ಬೇಟೆಯ ಸಣ್ಣ ಸುಳಿವನ್ನೂ ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಬಿಟ್ಟುಕೊಡುವುದೂ ಇಲ್ಲ.


'ಹೆಬ್ಬುಲಿ' ಟ್ರೈಲರ್ ಬಿಡುಗಡೆ ಇಲ್ಲ.!

ನೀವು ನಂಬಿದ್ರೆ ನಂಬಿ... ಬಿಟ್ರೆ ಬಿಡಿ... 'ಹೆಬ್ಬುಲಿ' ಚಿತ್ರದ ಟ್ರೈಲರ್ ಬಿಡುಗಡೆ ಮಾಡಲಾಗುವುದಿಲ್ಲ. 'ಹೆಬ್ಬುಲಿ' ಚಿತ್ರದ ಬಗ್ಗೆ ಯದ್ವಾತದ್ವಾ ಎಕ್ಸ್ ಪೆಕ್ಟೇಷನ್ ಇಟ್ಟುಕೊಂಡಿರುವವರಿಗೆ ಚಿತ್ರ ಬಿಡುಗಡೆಗೂ ಮುನ್ನ ಸಣ್ಣ ಝಲಕ್ ನ ದರ್ಶನ ಭಾಗ್ಯವಿಲ್ಲ. ಡೈರೆಕ್ಟ್ ಆಗಿ ಥಿಯೇಟರ್ ಗೆ ಹೋಗಿ 'ಹೆಬ್ಬುಲಿ' ಬೇಟೆ ನೋಡಿ ಆನಂದಿಸಬೇಕು.['ಹೆಬ್ಬುಲಿ' ನೋಡಲು ಈಗಲೇ ಟಿಕೆಟ್ ಬುಕ್ ಮಾಡಿ.. ಇಲ್ಲಾಂದ್ರೆ ಲಾಸ್ ನಿಮಗೆ.!]


ಕಾರಣ ಏನು.?

'ಹೆಬ್ಬುಲಿ' ಟ್ರೈಲರ್ ಬಿಡುಗಡೆ ಆಗದೇ ಇರುವುದಕ್ಕೂ ಒಂದು ತಾಂತ್ರಿಕ ಕಾರಣ ಇದೆ. ನಿಗದಿತ ಸಮಯಕ್ಕೆ ಸರಿಯಾಗಿ 'ಹೆಬ್ಬುಲಿ' ಚಿತ್ರವನ್ನ ಬಿಡುಗಡೆ ಮಾಡಲು ಹೆಚ್ಚು ಗಮನ ಹರಿಸುತ್ತಿರುವುದರಿಂದ, ಚಿತ್ರತಂಡಕ್ಕೆ ಟ್ರೈಲರ್ ಕಟ್ ಮಾಡಲು ಸಮಯ ಇಲ್ಲ.[ಎಲ್ಲೇ ಹೋದ್ರೂ ಸುದೀಪ್ 'ರನ್ನ' ನೆನೆಯದೇ ರವಿಶಂಕರ್ ಮಾತು ಮುಗಿಸೋಲ್ಲ.!]


ಟೀಸರ್ ಬಿಡುಗಡೆ ಮಾತ್ರ ಆಗಿದೆ

ಕಳೆದ ವರ್ಷ ಕಿಚ್ಚ ಸುದೀಪ್ ರವರ ಹುಟ್ಟುಹಬ್ಬದ ಪ್ರಯುಕ್ತ 'ಹೆಬ್ಬುಲಿ' ಚಿತ್ರದ ಟೀಸರ್ ಬಿಡುಗಡೆ ಆಗಿತ್ತು. 'ಹೆಬ್ಬುಲಿ' ಬಿಡುಗಡೆ ಆಗುವವರೆಗೂ ಅಭಿಮಾನಿಗಳಿಗೆ ಇದೊಂದೇ ಕಿಕ್ಕು. ('ಹೆಬ್ಬುಲಿ' ಟೀಸರ್ ನೋಡಿ)


ಹುಲಿ.. ಹುಲಿ.. ಹೆಬ್ಬುಲಿ...

ಈಗಾಗಲೇ ಬಿಡುಗಡೆ ಆಗಿರುವ 'ಹೆಬ್ಬುಲಿ' ಟೈಟಲ್ ಟ್ರ್ಯಾಕ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಟ್ರೆಂಡಿಂಗ್ ಅಗಿದೆ. ಸುದೀಪ್ ರವರ ಲುಕ್ ಮತ್ತು ಗೆಟಪ್ ಗೆ ಅಭಿಮಾನಿಗಳು ಫ್ಲ್ಯಾಟ್ ಆಗಿದ್ದಾರೆ. ('ಹೆಬ್ಬುಲಿ' ಟೈಟಲ್ ಸಾಂಗ್ ಟೀಸರ್ ನೋಡಿ)


ಸುರ ಸುಂದರ 'ಸುಂದರಿ' ಗಾನ

ಸುದೀಪ್ ಮತ್ತು ಅಮಲಾ ಪೌಲ್ ಹೆಜ್ಜೆ ಹಾಕಿರುವ 'ಸುಂದರಿ' ಹಾಡು ಕೂಡ ಸಿಕ್ಕಾಪಟ್ಟೆ ಸದ್ದು ಮಾಡಿದೆ. ('ಹೆಬ್ಬುಲಿ' ಚಿತ್ರದ 'ಸುಂದರಿ' ಸಾಂಗ್ ಟೀಸರ್ ನೋಡಿ)


ಬಾಕಿ ಎಲ್ಲಾ ತೆರೆಮೇಲೆ

ಸದ್ಯಕ್ಕೆ 'ಹೆಬ್ಬುಲಿ' ಚಿತ್ರದ ಬಗ್ಗೆ ಚಿತ್ರತಂಡ ರಿವೀಲ್ ಮಾಡಿರುವುದು ಇಷ್ಟೇ. ಬಾಕಿ ಎಲ್ಲ ತೆರೆಮೇಲೆ ನೋಡಿಕೊಳ್ಳಿ. ಕೃಷ್ಣ ನಿರ್ದೇಶಿಸಿರುವ 'ಹೆಬ್ಬುಲಿ' ಫೆಬ್ರವರಿ 23ಕ್ಕೆ ನಿಮ್ಮ ಮುಂದೆ.


English summary
No trailer for Kiccha Sudeep starrer 'Hebbuli'. Direct show on Feb 23rd.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada