»   » 'ಐನಾಕ್ಸ್ ಗರುಡ' ಅನ್ಯಾಯದ ಬಗ್ಗೆ ಗುಡುಗಿದ ಕನ್ನಡ ಸಿನಿ ಪ್ರೇಕ್ಷಕ.!

'ಐನಾಕ್ಸ್ ಗರುಡ' ಅನ್ಯಾಯದ ಬಗ್ಗೆ ಗುಡುಗಿದ ಕನ್ನಡ ಸಿನಿ ಪ್ರೇಕ್ಷಕ.!

Posted By:
Subscribe to Filmibeat Kannada

ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳು ಕನ್ನಡ ಚಿತ್ರಗಳಿಗೆ ಮಲತಾಯಿ ಧೋರಣೆ ಅನುಸರಿಸುತ್ತಿವೆ ಎಂಬ ಕೂಗು ಇಂದು ನಿನ್ನೆಯದ್ದಲ್ಲ. ಏನೇ ಮಾಡಿದರೂ, ಎಷ್ಟೇ ಬಡ್ಕೊಂಡ್ರೂ, ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಜಾಗ ಕಮ್ಮಿ ಅನ್ನೋದು ಎಲ್ಲರಿಗೂ ಗೊತ್ತಿರುವ ವಿಚಾರ.

ಆದ್ರೀಗ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳ ಪರಿಸ್ಥಿತಿ ಇನ್ನೂ ಕಳವಳಕಾರಿಯಾಗಿದೆ. ಬೆಂಗಳೂರಿನ ಗರುಡ ಮಾಲ್ ನಲ್ಲಿ ಒಂದೇ ಒಂದು ಕನ್ನಡ ಚಿತ್ರ ಪ್ರದರ್ಶನಕ್ಕೂ ಸ್ಥಾನ ಇಲ್ಲ ಅಂದ್ರೆ ಕನ್ನಡಿಗರು ಕಣ್ಣು-ಬಾಯಿ ಬಿಡುವುದು ಮಾತ್ರ ಅಲ್ಲ, ಬೀದಿಗಿಳಿದು ಹೋರಾಟ ಮಾಡಬೇಕು. [ನಿನ್ನೆ 'ಪಿವಿಆರ್ ಮಲ್ಟಿಪ್ಲೆಕ್ಸ್'ನಲ್ಲಿ ಆಗಿದ್ದು.! ನೀವೇನಂತೀರಿ.?]

not-a-single-kannada-movie-screening-in-garuda-mall-bengaluru

ನಿಮಗೆ ಅನುಮಾನ ಇದ್ರೆ, ಈಗಲೇ ಗರುಡ ಮಾಲ್ 'ಬುಕ್ ಮೈ ಶೋ' ವೆಬ್ ತಾಣಕ್ಕೆ ಭೇಟಿ ನೀಡಿ. 24 (ತಮಿಳು), ಜಂಗಲ್ ಬುಕ್ (ಇಂಗ್ಲೀಷ್), ಕ್ಯಾಪ್ಟನ್ ಅಮೇರಿಕಾ: ಸಿವಿಲ್ ವಾರ್ (ಇಂಗ್ಲೀಷ್), 1920 ಲಂಡನ್ (ಹಿಂದಿ), ಟ್ರಾಫಿಕ್ (ಹಿಂದಿ), ಭಾಗಿ (ಹಿಂದಿ), ಒನ್ ನೈಟ್ ಸ್ಟ್ಯಾಂಡ್ (ಹಿಂದಿ), ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ (ಇಂಗ್ಲೀಷ್) ಚಿತ್ರಗಳು ಪ್ರದರ್ಶನ ಕಾಣುತ್ತಿವೆ.

ಅಷ್ಟೇ ಯಾಕೆ, ಸೈರತ್ (ಮರಾಠಿ) ಹಾಗೂ ಜಾಕೋಬಿನ್ತೆ ಸ್ವರ್ಗರಾಜ್ಯಂ (ಮಲೆಯಾಳಂ) ಚಿತ್ರ ಪ್ರದರ್ಶನಕ್ಕೆ ಸ್ಕ್ರೀನ್ ಮೀಸಲಿರಿಸಿದೆ. ದುರ್ಬೀನ್ ಹಾಕಿ ಹುಡುಕಿದ್ರೂ, ಸದ್ಯ ಒಂದು ಕನ್ನಡ ಚಿತ್ರವೂ ಗರುಡ ಮಾಲ್ ನಲ್ಲಿ ಪ್ರದರ್ಶನ ಕಾಣುತ್ತಿಲ್ಲ.

ಕರ್ನಾಟಕದಲ್ಲಿ, ಅದರಲ್ಲೂ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿರುವ ಪ್ರತಿಷ್ಠಿತ ಗರುಡ ಮಾಲ್ ನಲ್ಲಿ ಕನ್ನಡ ಚಿತ್ರಗಳಿಗೆ ಇಂತಹ ಸ್ಥಿತಿ ಬಂದ್ರೆ ಮುಂದೆ ಏನು ಗತಿ? [ಕರ್ನಾಟಕದ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಿಗೆ ನಾಚಿಕೆ ಆಗಬೇಕು..ಥೂ.!]

ಕನ್ನಡ ಚಿತ್ರ ಯಾವುದು ಚೆನ್ನಾಗಿದೆ ಸ್ವಾಮಿ ಅಂತ ಉಡಾಫೆ ಮಾಡ್ಬೇಡಿ. ಇದೇ ಕನ್ನಡ ಚಿತ್ರ 'ತಿಥಿ'ಗೆ ರಾಷ್ಟ್ರ ಪ್ರಶಸ್ತಿ ಬಂದಿಲ್ವಾ? 'ಚಕ್ರವ್ಯೂಹ' ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿಲ್ವಾ? [ತಪ್ಪೊಪ್ಪಿಕೊಂಡ ಪಿ.ವಿ.ಆರ್.! ದಂಡ ಕಟ್ಟಲು ಮಲ್ಟಿಪ್ಲೆಕ್ಸ್ ಸಿದ್ಧ.!]

ಗರುಡ ಮಾಲ್ ನಲ್ಲಿ ಕನ್ನಡ ಚಿತ್ರಗಳಿಗೆ ಆಗುತ್ತಿರುವ ಅನ್ಯಾಯ ಪ್ರಶ್ನಿಸಿ ಕನ್ನಡಿಗ ಪ್ರವೀಣ್ ರಾಜು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಗುಡುಗಿದ್ದಾರೆ. ಅವರೊಂದಿಗೆ ನಾವು ಕೈ ಜೋಡಿಸಿದ್ದೇವೆ. ನಮ್ಮೊಂದಿಗೂ ನೀವು ನಿಮ್ಮ ದನಿ ಸೇರಿಸಿ. ನಿಮ್ಮ ಅಭಿಪ್ರಾಯವನ್ನು ಕಾಮೆಂಟ್ ಬಾಕ್ಸ್ ಮೂಲಕ ನಮಗೆ ತಿಳಿಸಿ.....

English summary
Shocking News for all Kannadigas; Not a single Kannada Movie is screening in Garuda Mall Bengaluru.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada