»   » ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್

ಮಗಳು ಶ್ರಾವ್ಯಾ ಜತೆ 'ಕಟ್ಟೆ' ಮೇಲೆ ಓಂ ಪ್ರಕಾಶ್ ರಾವ್

Posted By:
Subscribe to Filmibeat Kannada

ಎಂದೋ ಆಗಬೇಕಿದ್ದು ಈಗಲೇ ಆಗುತ್ತಿದೆ. ಹೆಸರಾಂತ ನಿರ್ದೇಶಕ ಎನ್ ಓಂ ಪ್ರಕಾಶ್ ರಾವ್ ಅವರ ಮಗಳು ಶ್ರಾವ್ಯಾ ಈಗ 'ಕಟ್ಟೆ' ಚಿತ್ರದ ನಾಯಕಿ. 'ಲೂಸುಗಳು' ಹಾಗೂ 'ರೋಸ್' ನಂತರ ಶ್ರಾವ್ಯಾ ಅವರು 26ಕ್ಕೂ ಹೆಚ್ಚು ಚಿತ್ರಗಳಿಗೆ ನಿರ್ದೇಶನ ಮಾಡಿ ಜನಪ್ರಿಯತೆ ಪಡೆದಿರುವ ಅಪ್ಪನ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಶ್ರಾವ್ಯ ಅವರಿಗೆ ಚಂದನ್ ನಾಯಕ.

ಅಣಜಿ ನಾಗರಾಜ್ ಅರ್ಪಿಸುವ ರೇಣುಕ ಮೂವಿ ಮೆಕರ್ಸ್ ಅಡಿಯಲ್ಲಿ ಉಮೇಶ್ ರೆಡ್ಡಿ ಎ ಎಂ ಅವರು ನಿರ್ಮಿಸುತ್ತಿರುವ 'ಕಟ್ಟೆ' ಸಿನಿಮಾಕ್ಕೆ ನಿರ್ದೇಶಕ ಓಂಪ್ರಕಾಶ್ ರಾವ್ ಚಿತ್ರಕಥೆ ಬರೆದಿದ್ದಾರೆ. ಎಂ ಎಸ್ ರಮೇಶ್ ಅವರ ಸಂಭಾಷಣೆ ಇದೆ, ಲಕ್ಷ್ಮಣ್ ರೆಡ್ಡಿ ಅವರ ಸಂಕಲನ, ಕಲೈ ಹಾಗೂ ತ್ರಿಭುವಣ್ ಅವರ ನೃತ್ಯ ನಿರ್ದೇಶನವಿದೆ.

Om Prakash Rao movie with daughter Shravya

ಕಟ್ಟೆ' ತಂದೆ ಹಾಗೂ ಮಗನ ಬಾಂಧವ್ಯದ ಬಗ್ಗೆ ಅಲ್ಲದೆ ಒಂದು ಸುಮಧುರ ಪ್ರೀತಿ ಜೊತೆಗೆ ಯುವ ಜನತೆಯಲ್ಲಿ ಒಂದು ಪ್ರಜ್ಞೆ ಸಹ ಮೂಡಿಸುವ ವಸ್ತುವನ್ನು ಹೊಂದಿದೆ. ಶ್ರೀರಂಗಪಟ್ಟಣದ ಸುತ್ತ ಮುತ್ತ ಮೊದಲನೇ ಹಂತದ ಚಿತ್ರೀಕರಣ ಪ್ರಾರಂಭವಾಗಿದೆ. ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ.

ಚಂದನ್ ಜೊತೆಗೆ ಶ್ರಾವ್ಯಾ ಅಲ್ಲದೆ ಪಾತ್ರವರ್ಗದಲ್ಲಿ ನಾಗಶೇಖರ್, ರೂಕ್ಸಾ, ಓಂ ಪ್ರಕಾಶ್ ರಾವ್, ಶ್ರೀನಿವಾಸಮೂರ್ತಿ, ಅವಿನಾಶ್, ಸತ್ಯಜಿತ್, ಲಕ್ಷ್ಮಣ್ ಹಾಗೂ ಇನ್ನಿತರರು ತಾರಾಗಣದಲ್ಲಿ ಇದ್ದಾರೆ. (ಒನ್ಇಂಡಿಯಾ ಕನ್ನಡ)

English summary
Sandalwood reputed director Om Prakash Rao and his daughter Shravya (born to first wife of Rao Rekha Das) is happening from 'Katte' Kannada film. The first schedule for this film ‘Katte’ on parent-child and love story has commenced shoot at Srirangapatna.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada