ಮೊದಲು ಬಂದ 25 'ಬೋಳು ತಲೆ'ಗಳಿಗೆ ಟಿಕೆಟ್ ಉಚಿತ
ಲೂಸಿಯಾ ಪವನ್ ಕುಮಾರ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ಒಂದು ಮೊಟ್ಟೆಯ ಕಥೆ' ಸಿನಿಮಾ ಈ ವಾರ (ಜುಲೈ 7) ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಟೈಟಲ್ ಹೇಳುವಾಗೆ ಇದು ಬೋಳು ತಲೆಯವರ ಸುತ್ತ ನಡೆಯುವ ಕಥೆ. ಹೀಗಾಗಿ, ಬೋಳು ತಲೆಯ ವ್ಯಕ್ತಿಗಳಿಗೆ 'ಒಂದು ಮೊಟ್ಟೆಯ ಕಥೆ' ಚಿತ್ರತಂಡದಿಂದ ಒಂದೊಳ್ಳೆ ಆಫರ್ ನೀಡಲಾಗಿದೆ.
ಜುಲೈ 6 ರಂದು ಬಿನ್ನಿಪೇಟೆ ಬಳಿಯಿರುವ ಸಿನಿಪೋಲಿಸ್ ನಲ್ಲಿ ರಾತ್ರಿ 9 ಗಂಟೆಗೆ 'ಒಂದು ಮೊಟ್ಟೆಯ ಕಥೆ' ಚಿತ್ರದ ಪ್ರಿಮಿಯರ್ ಶೋ ಏರ್ಪಡಿಸಲಾಗಿದೆ. ಈ ಪ್ರಿಮಿಯರ್ ಶೋ ಗೆ ಮೊದಲು ಬಂದ 25 ಬೋಳು ತಲೆಯವರಿಗೆ ಟಿಕೆಟ್ ಉಚಿತವಾಗಿ ನೀಡಲು ಚಿತ್ರತಂಡ ನಿರ್ಧರಿಸಿದೆ. ಹೀಗಾಗಿ, ಆ 25 ಜನ ಅದೃಷ್ಟವಂತರು ಯಾರಾಗಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

ಈ ವಿಷ್ಯವನ್ನ ಖುದ್ದು ಪವನ್ ಕುಮಾರ್ ಅವರೇ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, 'ನಿಮ್ಮ ಬೋಳು ತಲೆಯೇ ನಿಮ್ಮ ಐಡಿ ಕಾರ್ಡ್' ಎಂಬ ಕ್ಯಾಪ್ಶನ್ ಕೂಡ ನೀಡಲಾಗಿದೆ. ಈಗಾಗಲೇ ಟ್ರೈಲರ್ ಮತ್ತು ಹಾಡುಗಳು ಬಿಡುಗಡೆಯಾಗಿದ್ದು, ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ.
ಅಂದ್ಹಾಗೆ, 'ಒಂದು ಮೊಟ್ಟೆಯ ಕಥೆ' ಚಿತ್ರವನ್ನ ರಾಜ್ ಬಿ. ಶೆಟ್ಟಿ ನಟಿಸಿ ತಾವೇ ನಿರ್ದೇಶನ ಮಾಡಿದ್ದಾರೆ. ಮಿಥುನ್ ಮುಕುಂದನ್ ಅವರ ಸಂಗೀತ ನೀಡಿದ್ದು ಹಾಡುಗಳು ಗಮನ ಸೆಳೆಯುತ್ತಿದೆ. ಉಳಿದಂತೆ 'ಒಂದು ಮೊಟ್ಟೆಯ ಕಥೆ' ಚಿತ್ರದಲ್ಲಿ ರಾಜ್ ಬಿ. ಶೆಟ್ಟಿ ಅವರ ಜೊತೆ ಶೈಲಶ್ರೀ ಸೇರಿದಂತೆ ಮುಂತಾದವರು ಅಭಿನಯಿಸಿದ್ದಾರೆ.


Click it and Unblock the Notifications











