For Quick Alerts
  ALLOW NOTIFICATIONS  
  For Daily Alerts

  10 ನಿಮಿಷಕ್ಕೆ 3 ಶೋಗಳ ಪೈಲ್ವಾನ್ ಟಿಕೆಟ್ ಸೋಲ್ಡ್ ಔಟ್, ಯಾವ ಥಿಯೇಟರ್?

  |

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ತೆರೆಕಂಡು ಎಲ್ಲ ಕಡೆಯೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚು ಜನರು ಚಿತ್ರಮಂದಿರಕ್ಕೆ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

  ಬಿಡುಗಡೆಗೆ ಮುಂಚೆಯೇ ಪೈಲ್ವಾನ್ ಚಿತ್ರದ ಟಿಕೆಟ್ ಗಾಗಿ ಪ್ರೇಕ್ಷಕರು ಮುಗಿ ಬಿದ್ದಿದ್ದರು. ಆನ್ ಲೈನ್ ಟಿಕೆಟ್ ಗೆ ಅವಕಾಶ ಮಾಡಿಕೊಟ್ಟ ಕ್ಷಣದಿಂದ ಬಹಳ ವೇಗವಾಗಿ ಟಿಕೆಟ್ ಖರೀದಿಗೆ ಜನ ಮುಂದಾಗಿದ್ದರು.

  ಸುದೀಪ್ 'ಪೈಲ್ವಾನ್' ಮೊದಲ ದಿನ ಎಷ್ಟು ಕೋಟಿ ಬಾಚಿಕೊಂಡಿದೆ?

  ಇದೀಗ, ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಕೇವಲ ಹತ್ತು ನಿಮಿಷದಲ್ಲಿ ಮೂರು ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆಯಂತೆ. ಹೀಗಂತ ಸ್ವತಃ ಗೀತಾಂಜಲಿ ಚಿತ್ರಮಂದಿರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಹೇಳಿದ್ದಾರೆ.

  ಪೈಲ್ವಾನ್ ಗಳಿಕೆಗೆ ಬ್ರೇಕ್ ಹಾಕಿದ ಕಿರಾತಕರು: ಲೆಕ್ಕಾಚಾರ ಎಲ್ಲವೂ ಉಲ್ಟಾಪಲ್ಟಾ

  ಗೀತಾಂಜಲಿ ಚಿತ್ರಮಂದಿರದಲ್ಲಿ ಪೈಲ್ವಾನ್ ಟಿಕೆಟ್ ಖಾಲಿ ಇರಬಹುದು ಎಂದು ಚೆಕ್ ಮಾಡಿದ್ರೆ ಇಂದಿನ ಎಲ್ಲ ಶೋಗಳು ಸೋಲ್ಡ್ ಔಟ್ ಆಗಿದೆ. ಈ ಬಗ್ಗೆ ಸ್ವತಃ ಚಿತ್ರಮಂದಿರ ಸಿಬ್ಬಂದಿ ಸಂತಸ ಹಂಚಿಕೊಂಡಿದ್ದಾರೆ.

  ಪೈಲ್ವಾನ್ ಸಿನಿಮಾ ಮೊದಲ ವಿಶ್ವಾದ್ಯಂತ ಸುಮಾರು 4000 ಸ್ಕ್ರೀನ್ ಗಳಲ್ಲಿ ತೆರೆಕಂಡಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಸೆಪ್ಟೆಂಬರ್ 12 ರಂದು ಬಿಡುಗಡೆಯಾದರೆ, ಸೆಪ್ಟೆಂಬರ್ 13 ರಂದು ರಿಲೀಸ್ ಆಗಿದೆ.

  English summary
  Pailwaan Movie Online Tickets sold out in just 10 minutes (3 shows) in Geetanjali Theatre Davangere.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X