For Quick Alerts
  ALLOW NOTIFICATIONS  
  For Daily Alerts

  ಆಪರೇಷನ್ ಡೈಮಂಡ್ ರಾಕೆಟ್ ಭರ್ಜರಿ ಕಲೆಕ್ಷನ್

  By Rajendra
  |

  ವರನಟ ಡಾ.ರಾಜ್ ಕುಮಾರ್ ಅವರ ಚಿತ್ರಗಳು ಯಾಹೊತ್ತಿದ್ದರೂ ಎರವ್ ಗ್ರೀನ್ ಎಂಬುದನ್ನು 'ಆಪರೇಷನ್ ಡೈಮಂಡ್ ರಾಕೆಟ್' ಚಿತ್ರ ನಿಜ ಮಾಡಿದೆ. ಅವರ ಹಳೆಯ ಚಿತ್ರಗಳಿಗೆ ಈಗಲೂ ಎಲ್ಲಿಲ್ಲದ ಬೇಡಿಕೆ ಇದೆ.

  ಈಗಿನ ಕಾಲದ ಚಿತ್ರಗಳಿಗೂ ಅಣ್ಣಾವ್ರ ಅಭಿನಯದ ಆಗಿನ ಕಾಲದ ಚಿತ್ರ ಪೈಪೋಟಿ ನೀಡುತ್ತದೆ ಎಂದರೆ ನೀವೇ ಊಹಿಸಿ. ಮೇ 31ರಂದು ತೆರಕಂಡ ಈ ಚಿತ್ರ ಬಾಕ್ಸ್ ಆಫೀಸಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ.

  ಬೆಂಗಳೂರಿನ ಕಪಾಲಿ ಚಿತ್ರಮಂದಿರದಲ್ಲಿ ಮೊದಲ ದಿನವೇ ರು.1 ಲಕ್ಷ ಕಲೆಕ್ಷನ್ ಮಾಡಿದೆ. ಚಿತ್ರಮಂದಿರದ ಬಾಡಿಗೆ ವಾರಕ್ಕೆ ರು.3.5 ಲಕ್ಷ ಕಳೆದರೂ ವಿತರಕರ ಜೇಬಿಗೆ ಖಂಡಿತ ಮೋಸವಾಗಲ್ಲ ಎನ್ನುತ್ತವೆ ಮೂಲಗಳು. ರಾಜ್ಯದ ಇತರೆಡೆಯೂ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

  1978ರಲ್ಲಿ ಬಿಡುಗಡೆಯಾದ ಈ ಚಿತ್ರಕ್ಕೆ ದೊರೆ ಭಗವಾನ್ ಆಕ್ಷನ್ ಕಟ್ ಹೇಳಿದ್ದಾರೆ. ಜಿ.ಕೆ.ವೆಂಕಟೇಶ್ ಅವರ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ರಾಜ್ ಅಭಿನಯದ ಬಾಂಡ್ ಸರಣಿ ಚಿತ್ರಗಳಲ್ಲಿ ಈ ಚಿತ್ರವು ಕೊನೆಯದು. ಚಿತ್ರದ ಉತ್ತರಾರ್ಧದ ಬಹುಭಾಗ ನೇಪಾಳದಲ್ಲಿ ಚಿತ್ರೀಕರಿಸಿರುವುದು ವಿಶೇಷ.

  ಬಾಂಡ್ ಸರಣಿಯ ನಾಲ್ಕು ಚಿತ್ರಗಳಲ್ಲಿ ಡಾ.ರಾಜ್ ಕುಮಾರ್ ಅಭಿನಯಿಸಿರುವ ಪಾತ್ರದ ಹೆಸರು ಪ್ರಕಾಶ್. ಜೇಡರಬಲೆ, ಗೋವಾದಲ್ಲಿ ಸಿಐಡಿ 999, ಆಪರೇಷನ್ ಜಾಕ್ ಪಾಟ್ ನಲ್ಲಿ ಸಿಐಡಿ 999 ಚಿತ್ರಗಳ ಬಳಿಕ ಬಂದ ಬಾಂಡ್ ಸಿನಿಮಾ ಇದು. ಮೊದಲ ಮೂರು ಚಿತ್ರಗಳು ಕಪ್ಪುಬಿಳುಪು. ಕೊನೆಯ ಸರಣಿ ಮಾತ್ರ ವರ್ಣಚಿತ್ರ.

  ಇನ್ನು ಚಿತ್ರದ ವಿಶೇಷಗಳ ಬಗ್ಗೆ ಹೇಳುವುದಾದರೆ, ಅಣ್ಣಾವ್ರು ಮೊಟ್ಟ ಮೊದಲ ಬಾರಿಗೆ ಹಾಡಿದ ಆಂಗ್ಲ ಮಿಶ್ರಿತ ಹಾಡು ಈ ಚಿತ್ರದಲ್ಲಿದೆ. "If you Come today...it is too early...if you come tomorrow it is too late....you pick your time" ಎಂಬ ಹಾಡಿನ ಜೊತೆಗೆ ಅಲ್ಲಿ ಇಲ್ಲಿ ನೋಡುವೆ ಏಕೆ..ನೀ ನಡುಗುವೆಯೇಕೆ..ಎಂಬ ಹಾಡುಗಳು ಜನಪ್ರಿಯ.

  ಭಕ್ತವತ್ಸಲಂ ಅವರ ಸಂಕಲನ, ಪಿಎಸ್ ಪ್ರಕಾಶ್ ಅವರ ಛಾಯಾಗ್ರಹಣ, ಚಿ.ಉದಯಶಂಕರ್ ಅವರ ಸಾಹಿತ್ಯ ಹಾಗೂ ಸಂಭಾಷಣೆ, ಬಿ ಛಲಂ ಅವರ ಕಲಾ ನಿರ್ದೇಶನ, ವೈ ಶಿವಯ್ಯ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. (ಒನ್ಇಂಡಿಯಾ ಕನ್ನಡ)

  English summary
  Dr.Rajkumar's last bond movie Operation Diamond Racket got good response from the audience. According to industry sources, the film is witnessing decent collections. The movie released again after 35 years in a grand style. 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X