twitter
    For Quick Alerts
    ALLOW NOTIFICATIONS  
    For Daily Alerts

    Oscars 2023: ಆಸ್ಕರ್ ನಾಮಿನೇಷನ್ ಲಿಸ್ಟ್ ಬಿಡುಗಡೆಗೆ ಕ್ಷಣಗಣನೆ; ಆರ್‌ಆರ್‌ಆರ್‌ಗೆ ಲಭಿಸುತ್ತಾ ಪ್ರಶಸ್ತಿ?

    |

    ಕಳೆದ ಕೆಲ ದಿನಗಳ ಹಿಂದಷ್ಟೇ ವಿಶ್ವದ ಪ್ರತಿಷ್ಠಿತ ಪ್ರಶಸ್ತಿ ಆಸ್ಕರ್‌ನ ಎಲಿಜಿಬಲ್ ಪಟ್ಟಿ ಬಿಡುಗಡೆಗೊಂಡಿತ್ತು. ಈ ಪಟ್ಟಿಯಲ್ಲಿ ಕನ್ನಡದ ಚಿತ್ರಗಳಾದ ಕಾಂತಾರ ಹಾಗೂ ವಿಕ್ರಾಂತ್ ರೋಣ ಸಹ ಅರ್ಹತೆಯನ್ನು ಗಿಟ್ಟಿಸಿಕೊಂಡಿದ್ದವು. ಅತ್ತ ತೆಲುಗಿನ ಆರ್ ಆರ್ ಆರ್ ಚಿತ್ರವೂ ಸಹ ಈ ಎಲಿಜಿಬಲ್ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿತ್ತು. ಹೀಗೆ ಈ ಬಾರಿಯ ಆಸ್ಕರ್‌ಗೆ ವಿಶ್ವದ ಒಟ್ಟು 301 ಚಿತ್ರಗಳು ಅರ್ಹತೆ ಗಿಟ್ಟಿಸಿಕೊಂಡಿದ್ದು, ಈ ಪೈಕಿ ಯಾವ ಚಿತ್ರಗಳು ನಾಮ ನಿರ್ದೇಶನದ ಅರ್ಹತೆಯನ್ನು ಪಡೆದುಕೊಳ್ಳಲಿವೆ ಎಂಬ ಕುತೂಹಲ ಮೂಡಿದೆ.

    ಅರ್ಹತೆ ಗಿಟ್ಟಿಸಿಕೊಂಡ ಚಿತ್ರಗಳ ವಿವಿಧ ಕೆಟಗರಿಗೆ ಆಸ್ಕರ್ ಸದಸ್ಯರು ಮತ ಹಾಕಿದ್ದು, ಅತಿಹೆಚ್ಚು ಮತ ಪಡೆದುಕೊಳ್ಳಲಿರುವ ಚಿತ್ರಗಳು ಹಾಗೂ ಕಲಾವಿದರು ನಾಮಿನೇಟ್ ಅಗಲಿದ್ದಾರೆ. ಇನ್ನು ಯಾವ ಚಿತ್ರಗಳು ನಾಮ ನಿರ್ದೇಶನವನ್ನು ಪಡೆಯಲಿವೆ ಎಂಬುದು ಇಂದು ( ಜನವರಿ 24 ) ಭಾರತೀಯ ಕಾಲಮಾನದ ಪ್ರಕಾರ ಸಂಜೆ 7 ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ.

    Oscars 2023: Nominations will be announced on today evening

    ಈ ಕಾರ್ಯಕ್ರಮ ಕ್ಯಾಲಿಫೊರ್ನಿಯದ ಬೆವರ್ಲಿ ಹಿಲ್ಸ್‌ನಲ್ಲಿರುವ ಸ್ಯಾಮುವೆಲ್ ಥಿಯೇಟರ್‌ನಲ್ಲಿ ನಡೆಯಲಿದ್ದು, ಭಾರತದ ಯಾವ ಚಿತ್ರಗಳು ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಬಹುದು ಎಂಬ ಕುತೂಹಲ ಹೆಚ್ಚಾಗಿದೆ. ಇನ್ನು ಅತ್ಯುತ್ತಮ ಚಿತ್ರ ಕೆಟಗರಿ ಅಡಿಯಲ್ಲಿ ಭಾರತದ ಚಿತ್ರಗಳಾದ ಆರ್ ಆರ್ ಆರ್, ದ ಚೆಲ್ಲೋ ಶೋ, ಆಲ್ ದಟ್ ಬ್ರೀಥ್ಸ್ ಹಾಗೂ ದ ಎಲಿಫೆಂಟ್ ವಿಸ್ಪರರ್ಸ್ ನಾಮಿನೇಟ್ ಆಗುವ ಸಾಧ್ಯತೆಗಳು ಹೆಚ್ಚಿದ್ದು, ಈ ಚಿತ್ರಗಳ ಮೇಲೆ ಸಿನಿ ರಸಿಕರು ಕಣ್ಣಿಟ್ಟಿದ್ದಾರೆ.

    ಸದ್ಯ ಆರ್ ಆರ್ ಆರ್ ಚಿತ್ರದ ಮೇಲೆ ಭಾರತದ ಸಿನಿ ರಸಿಕರು ಹಾಗೂ ಸೆಲೆಬ್ರಿಟಿಗಳಿಗೆ ಅಪಾರವಾದ ವಿಶ್ವಾಸವಿದ್ದು, ಆರ್ ಆರ್ ಆರ್ ಆಸ್ಕರ್ ಗೆದ್ದು ಬರಲಿ, ಆ ಚಿತ್ರಕ್ಕೆ ಆಸ್ಕರ್ ಗೆಲ್ಲುವ ಎಲ್ಲಾ ಅರ್ಹತೆಗಳಿವೆ ಎಂದು ಬರೆದುಕೊಂಡು ಟ್ವೀಟ್ ಮಾಡಿ ವಿಷ್ ಮಾಡುತ್ತಿದ್ದಾರೆ. ವಿಶೇಷವಾಗಿ ಜೂನಿಯರ್ ಎನ್‌ ಟಿ ಆರ್ ಆರ್ ಆರ್ ಆರ್ ಚಿತ್ರದ ನಟನೆಗಾಗಿ ನಾಮಿನೇಟ್ ಆಗಬೇಕು ಎಂಬ ಪ್ರಾರ್ಥನೆಗಳು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹರಿದಾಡಿದೆ.

    English summary
    Oscars 2023: Nominations will be announced today evening. Read on
    Tuesday, January 24, 2023, 15:30
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X