For Quick Alerts
  ALLOW NOTIFICATIONS  
  For Daily Alerts

  ಚಿರು ಅಗಲಿಕೆಗೆ ಕಂಬನಿ ಮಿಡಿದ ಪರಭಾಷೆ ನಟ-ನಟಿಯರು

  |

  ನಿನ್ನೆ ಇಹಲೋಕ ತ್ಯಜಿಸಿದ ಚಿರಂಜೀವಿ ಸರ್ಜಾ ಅವರಿಗಾಗಿ ಕನ್ನಡ ಚಿತ್ರರಂಗದ ಬಹುತೇಕ ಎಲ್ಲಾ ನಟ-ನಟಿಯರು ಕಂಬನಿ ಮಿಡಿದಿದ್ದಾರೆ. ಚಿರಂಜೀವಿ ಸರ್ಜಾ ಅಗಲಿಕೆಗೆ ಕನ್ನಡ ಚಿತ್ರರಂಗ ಮಾತ್ರವಲ್ಲದೆ ನೆರೆಯ ಸಿನಿ ಉದ್ಯಮದ ನಟ-ನಟಿಯರೂ ಸಹ ಕಂಬನಿ ಮಿಡಿದಿದ್ದಾರೆ.

  ನಿಜಕ್ಕೂ ಈ ಸಂದರ್ಭ ಯಾವ ಹೆಣ್ಣಿಗೂ ಬೇಡ | Meghana Raj

  ತೆಲುಗು, ತಮಿಳು, ಮಲೆಯಾಳಂ ಸಿನಿಮಾ ರಂಗದ ಸ್ಟಾರ್ ನಟ-ನಟಿಯರು ಚಿರಂಜೀವಿ ಸರ್ಜಾ ಅಗಲಿಕೆಗೆ ಸಾಮಾಜಿಕ ಜಾಲತಾಣದಲ್ಲಿ ವಿಷಾದ ವ್ಯಕ್ತಪಡಿಸಿದ್ದಾರೆ. ಕೇವಲ 22 ಸಿನಿಮಾಗಳನ್ನು ಮಾಡಿದ್ದರೂ ಸಹ ಚಿರಂಜೀವಿ ಸರ್ಜಾ ನೆರೆಯ ಚಿತ್ರರಂಗಗಳಲ್ಲೂ ಕೆಲವಾರು ಗೆಳೆಯರನ್ನು ಹೊಂದಿದ್ದರು. ಚಿರು ಗೆಳೆಯರಲ್ಲದಿದ್ದರೂ ಒಂದೇ ಉದ್ದಿಮೆಯ ಸಹೋದ್ಯೋಗಿ ಎಂಬ ಕಾರಣಕ್ಕೆ ಹಲವರು ಚಿರು ಸಾವಿಗೆ ಕಂಬನಿ ಮಿಡಿದಿದ್ದಾರೆ.

  ಫೃಥ್ವಿರಾಜ್ ಸುಕುಮಾರನ್ ಕಂಬನಿ

  ಫೃಥ್ವಿರಾಜ್ ಸುಕುಮಾರನ್ ಕಂಬನಿ

  ಮಲಯಾಳಂ ಸಿನಿಮಾದ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಅವರು ಚಿರು ಸರ್ಜಾ ಅವರ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಕಂಬನಿ ಮಿಡಿದಿದ್ದಾರೆ. ವಿದೇಶದಲ್ಲಿ ಸಿಲುಕಿದ್ದ ಅವರು ಇತ್ತೀಚೆಗಷ್ಟೆ ಕೇರಳಕ್ಕೆ ವಾಪಸ್ಸಾಗಿದ್ದಾರೆ.

  ಅಲ್ಲು ಸಿರೀಶ್ ಕಂಬನಿ

  ಅಲ್ಲು ಸಿರೀಶ್ ಕಂಬನಿ

  ತೆಲುಗಿನ ಖ್ಯಾತ ನಟ ಅಲ್ಲು ಅರ್ಜುನ್ ಸಹೋದರ ಸ್ವತಃ ಸಿನಿಮಾ ನಾಯಕ ನಟರಾಗಿರುವ ಅಲ್ಲು ಸಿರೀಶ್ ಅವರೂ ಸಹ ಚಿರು ಸರ್ಜಾ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಟ್ವಿಟ್ಟರ್‌ನಲ್ಲಿ ಪೋಸ್ಟ್ ಹಾಕಿದ್ದಾರೆ ಅವರು.

  ಹಿರಿಯ ನಟಿ ಖುಷ್ಬು ಪೋಸ್ಟ್

  ಹಿರಿಯ ನಟಿ ಖುಷ್ಬು ಪೋಸ್ಟ್

  ಹಿರಿಯ ನಟಿ ಖುಷ್ಬು ಸಹ ಕಿರಿಯ ನಟ ಚಿರಂಜೀವಿ ಸರ್ಜಾ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಅರ್ಜುನ್ ಸರ್ಜಾ ಅಳಿಯ ಚಿರು ಬೇಗನೇ ನಮ್ಮನ್ನು ಅಗಲಿದ್ದಾರೆ ಎಂದಿದ್ದಾರೆ ಅವರು.

  ಮಲಯಾಳಂ ನಟಿ ನಾಜರಿಯಾ

  ಮಲಯಾಳಂ ನಟಿ ನಾಜರಿಯಾ

  ಮಲಯಾಳಂ ಖ್ಯಾತ ನಟಿ ನಾಜರಿಯಾ ಸಹ ಚಿರಂಜೀವಿ ಸರ್ಜಾ ಅಗಲಿಕೆಗೆ ಕಂಬನಿ ಮಿಡಿದಿದ್ದಾರೆ. ಇನ್‌ಸ್ಟಾಗ್ರಾಂ ನಲ್ಲಿ ಚಿರು ಅವರ ಚಿತ್ರ ಪ್ರಕಟಿಸಿ, ಆತ್ಮಕ್ಕೆ ಶಾಂತಿ ಕೋರಿದ್ದಾರೆ.

  ಮಲಯಾಳಂ ನಟ ಜಯಸೂರ್ಯ ಕಂಬನಿ

  ಮಲಯಾಳಂ ನಟ ಜಯಸೂರ್ಯ ಕಂಬನಿ

  ಮಲಯಾಳಂ ಖ್ಯಾತ ನಟರಲ್ಲಿ ಒಬ್ಬರಾದ ಜಯಸೂರ್ಯ ಸಹ ಚಿರಂಜೀವಿ ಸರ್ಜಾ ಅಗಲಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಚಿತ್ರ ಪ್ರಕಟಿಸಿದ್ದಾರೆ.

  English summary
  Other language stars express sorrow on Chiranjeevi Sarja's death. Many stars of native industry posted about Chiru Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X