For Quick Alerts
  ALLOW NOTIFICATIONS  
  For Daily Alerts

  ಕುರುಕ್ಷೇತ್ರ ಮಾತ್ರವಲ್ಲ ಪೈಲ್ವಾನ್ ಗೆ ಎದುರಾಗಲಿವೆ ಮೂರು ದೊಡ್ಡ ಚಿತ್ರಗಳು.!

  |
  ಪೈಲ್ವಾನ್, ಕುರುಕ್ಷೇತ್ರದ ಮಧ್ಯೆ ಜಟಾಪಟಿ | FILMIBEAT KANNADA

  ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಆಗಸ್ಟ್ 9 ರಂದು ಕನ್ನಡ, ತಮಿಳು, ಹಿಂದಿ, ತೆಲುಗು, ಮಲಯಾಳಂ ಸೇರಿದಂತೆ ಬಹುಭಾಷೆಯಲ್ಲಿ ತೆರೆಕಾಣುವ ಸಾಧ್ಯತೆ ಇದೆ.

  ಅದೇ ದಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಚಿತ್ರವೂ ರಿಲೀಸ್ ಆಗುತ್ತಿದೆ. ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲಯಾಳಂ ಭಾಷೆಯಲ್ಲಿ ತಯಾರಾಗಿರುವ ಈ ಚಿತ್ರವೂ ದೊಡ್ಡ ಓಪನಿಂಗ್ ಮಾಡುವ ನಿರೀಕ್ಷೆಯಲ್ಲಿದೆ.

  'ರಾಬರ್ಟ್', 'ನಾರಾಯಣ' ಬಿಟ್ಟಾಕಿ 'ಪೈಲ್ವಾನ್' ಬಗ್ಗೆಯೂ ಶುರುವಾಯ್ತು ಚರ್ಚೆ!

  ಈ ಎರಡು ಚಿತ್ರಗಳು ಒಂದೆ ದಿನ ಬರ್ತಿರುವುದು ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ವ್ಯತ್ಯಾಸ ಉಂಟು ಮಾಡಲಿದೆ ಎಂದು ಅಂದಾಜಿಸಲಾಗುತ್ತಿದೆ. ಇದರ ಜೊತೆಗೆ ಮತ್ತೆ ಮೂರು ಸಿನಿಮಾ ಫೈಟ್ ಮಾಡಲು ಸಜ್ಜಾಗಿದೆ ಎಂಬುದನ್ನ ಕೂಡ ಗಮನಿಸಬೇಕಾಗಿದೆ. ಅಷ್ಟಕ್ಕೂ, ಯಾವುದು ಆ ಚಿತ್ರಗಳು.? ಮುಂದೆ ಓದಿ.....

  ಪ್ರಭಾಸ್ ಸಾಹೋ.!

  ಪ್ರಭಾಸ್ ಸಾಹೋ.!

  ಬಾಹುಬಲಿ ಚಿತ್ರದ ನಂತರ ಪ್ರಭಾಸ್ ಅಭಿನಯಿಸುತ್ತಿರುವ ಚಿತ್ರ ಸಾಹೋ. ಹಿಂದಿ, ತೆಲುಗು ಭಾಷೆಯಲ್ಲಿ ರಿಲೀಸ್ ಗೆ ಸಜ್ಜಾಗಿರುವ ಸಾಹೋ ಆಗಸ್ಟ್ 15 ರಂದು ಚಿತ್ರಮಂದಿರಕ್ಕೆ ಬರ್ತಿದೆ. ಆಗಷ್ಟೇ ಪೈಲ್ವಾನ್ ಸಿನಿಮಾ ಚಿತ್ರಮಂದಿರಕ್ಕೆ ಬಂದು ಒಂದು ವಾರ ಆಗಿರುತ್ತೆ. ಹೀಗಾಗಿ, ವರ್ಲ್ಡ್ ವೈಡ್ ದೊಡ್ಡ ಓಪನಿಂಗ್ ಮಾಡುವ ಸಾಹೋ ಸಿನಿಮಾ ಪೈಲ್ವಾನ್ ಗೆ ಫೈಟ್ ನೀಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಕೇವಲ ಪೈಲ್ವಾನ್ ಗೆ ಮಾತ್ರವಲ್ಲ, ಕುರುಕ್ಷೇತ್ರ ಕಲೆಕ್ಷನ್ ಗೂ ಇದು ಅಡ್ಡಗಾಲು ಹಾಕಬಹುದು.

  ಇದು ಪೈಲ್ವಾನ್-ಕುರುಕ್ಷೇತ್ರ ಯುದ್ಧವಲ್ಲ: ಮುನಿರತ್ನ

  ಮಿಷನ್ ಮಿಂಗಲ್

  ಮಿಷನ್ ಮಿಂಗಲ್

  ಪೈಲ್ವಾನ್ ರಿಲೀಸ್ ಆದ ಒಂದು ವಾರದ ಬಳಿಕ ಅಕ್ಷಯ್ ಕುಮಾರ್ ಅಭಿನಯದ ಮಿಷನ್ ಮಿಂಗಲ್ ಸಿನಿಮಾ ಕೂಡ ಥಿಯೇಟರ್ ಗೆ ಬರ್ತಿದೆ. ಈಗ ಅಕ್ಷಯ್ ಸಿನಿಮಾಗಳಿಗೆ ಭಾರಿ ರೆಸ್ಪಾನ್ಸ್ ಇದ್ದು ಹೌಸ್ ಫುಲ್ ಪ್ರದರ್ಶನ ಕಾಣ್ತಿವೆ. ಹೀಗಾಗಿ, ಮಿಷನ್ ಮಿಂಗಲ್ ಚಿತ್ರವೂ ಕನ್ನಡ ಸಿನಿಮಾಗಳಿಗೆ ಫೈಟ್ ನೀಡಬಹುದು.

  ದರ್ಶನ್, ಸುದೀಪ್, ರಕ್ಷಿತ್ ಮುಖಾಮುಖಿ : ಆಗಸ್ಟ್ ನಲ್ಲಿ ಬಾಕ್ಸ್ ಆಫೀಸ್ ವಾರ್

  ಅಜಿತ್ ಸಿನಿಮಾನೂ ಬರ್ತಿದೆ

  ಅಜಿತ್ ಸಿನಿಮಾನೂ ಬರ್ತಿದೆ

  ಅಕ್ಷಯ್ ಕುಮಾರ್ ಮತ್ತು ಪ್ರಭಾಸ್ ಸಿನಿಮಾಗಳು ಇಡೀ ಭಾರತದಲ್ಲಿ ತೆರೆಕಾಣುವುದರಿಂದ ಕರ್ನಾಟಕದಲ್ಲೂ ಈ ಚಿತ್ರಗಳ ಹಾವಳಿ ಜೋರಾಗಿರಲಿದೆ. ಇದರ ಜೊತೆ ಅಜಿತ್ ಅಭಿನಯದ 'ನೇರ್ಕೊಂಡ ಪಾರವಿ' (ಹಿಂದಿ ಸಿನಿಮಾ ಪಿಂಕ್ ರೀಮೇಕ್) ಚಿತ್ರವೂ ರಿಲೀಸ್ ಆಗ್ತಿದೆ. ಇದು ಕೇವಲ ತಮಿಳಿನಲ್ಲಿ ಮಾತ್ರ ಬರುತ್ತಿರುವುದರಿಂದ ಅಷ್ಟಾಗಿ ಪರಿಣಾಮ ಬೀರಲ್ಲ ಎನ್ನಬಹುದು.

  ದೋಸ್ತಿಗಳ ವಿಷ್ಯದಲ್ಲಿ 13 ವರ್ಷದ ಹಿಂದೆ ನಡೆದ ಘಟನೆ ಮತ್ತೆ ಮರುಕಳಿಸುತ್ತಾ?

  ಇಬ್ಬರ ಜಗಳ ಮೂರನೇಯವರಿಗೆ ಲಾಭ

  ಇಬ್ಬರ ಜಗಳ ಮೂರನೇಯವರಿಗೆ ಲಾಭ

  ಕರ್ನಾಟದಲ್ಲಿ ಯಾವುದೇ ಪರಭಾಷೆ ಚಿತ್ರಗಳು ಬಂದರೂ ಸ್ಯಾಂಡಲ್ ವುಡ್ ನಲ್ಲಿ ಮಾತ್ರ ಪೈಲ್ವಾನ್ ಮತ್ತು ಕುರುಕ್ಷೇತ್ರ ಚಿತ್ರಗಳದ್ದೇ ಹವಾ. ಆದರೆ ಈ ಎರಡು ಚಿತ್ರಗಳ ಪೈಪೋಟಿ ನಡುವೆ ಮೂರನೇಯವರಿಗೆ ಲಾಭ ಎನ್ನುವಂತೆ ಪ್ರಭಾಸ್ ಸಾಹೋ ಅಥವಾ ಅಕ್ಷಯ್ ಕುಮಾರ್ ಮಿಷನ್ ಮಿಂಗಲ್ ಚಿತ್ರಕ್ಕೆ ಲಾಭ ಆಗುತ್ತಾ ಎಂಬ ಮಾತಿದೆ.

  English summary
  Tollywood superstar prabhas starrer sahoo movie will releasing on august. at same day akshay kumar's mission mingal movie also release. so, pailwaan and kurukshetra will face tight fight between thease movies.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X