For Quick Alerts
  ALLOW NOTIFICATIONS  
  For Daily Alerts

  ರೇಸ್ ನಷ್ಟೇ ಕಿಕ್ ಕೊಡ್ತಿದೆ ಭಟ್ಟರ 'ಪಂಚತಂತ್ರ'

  |
  ರೇಸ್ ನಷ್ಟೇ ಕಿಕ್ ಕೊಡ್ತಿದೆ ಭಟ್ಟರ 'ಪಂಚತಂತ್ರ' | FILMIBEAT KANNADA

  ಯೋಗರಾಜ್ ಭಟ್ ನಿರ್ದೇಶನ ಬಹುನಿರೀಕ್ಷೆಯ ಚಿತ್ರ ಪಂಚತಂತ್ರ ಟ್ರೈಲರ್ ರಿಲೀಸ್ ಆಗಿದೆ. ಹಾಡುಗಳಿಂದ ಸಾಕಷ್ಟು ಕುತೂಹಲ ಹುಟ್ಟಿಸಿದ್ದ ಪಂಚತಂತ್ರ ಈಗ ಟ್ರೈಲರ್ ನಿಂದ ಮತ್ತಷ್ಟು ಕಿಕ್ ಹೆಚ್ಚಿಸುತ್ತಿದೆ.

  ರಾಕಿಂಗ್ ಸ್ಟಾರ್ ಯಶ್ ಅವರು ಪಂಚತಂತ್ರ ಚಿತ್ರದ ಟ್ರೈಲರ್ ರಿಲೀಸ್ ಮಾಡುವ ಮೂಲಕ ಭಟ್ಟರ ಚಿತ್ರಕ್ಕೆ ಜೋಶ್ ನೀಡಿದ್ದಾರೆ.

  ಪಂಚತಂತ್ರ ಚಿತ್ರದಲ್ಲಿ ಐದು ಪ್ರಮುಖ ಅಂಶಗಳಿವೆ ಎಂದು ಯೋಗರಾಜ್ ಭಟ್ಟರು ಹೇಳಿದ್ದರು. ಆ ಎಲ್ಲ ಅಂಶಗಳು ಟ್ರೈಲರ್ ನಲ್ಲಿ ಎದ್ದು ಕಾಣುತ್ತಿದೆ. ಅದರಲ್ಲೂ ಕಾರ್ ರೇಸ್ ಅಂತೂ ಸಖತ್ ಥ್ರಿಲ್ ಕೊಡ್ತಿದೆ.

  ಭಟ್ಟರ 'ಪಂಚತಂತ್ರ' ಟ್ರೈಲರ್ ರಿಲೀಸ್ ಮಾಡಲಿದ್ದಾರೆ ರಾಕಿ ಬಾಯ್

  ಸಾಮಾನ್ಯವಾಗಿ ಕನ್ನಡ ಸಿನಿಮಾಗಳಲ್ಲಿ ಈ ಕಾರ್ ರೇಸ್ ಕಾನ್ಸಪ್ಟ್ ತುಂಬ ಅಪರೂಪ. ಅಲ್ಲೊಂದು ಇಲ್ಲೊಂದು ಚಿತ್ರದಲ್ಲಿ ನೋಡಿರಬಹುದು. ಆದ್ರೆ, ಪಂಚತಂತ್ರ ಚಿತ್ರದಲ್ಲಿ ರೇಸ್ ಬಹುಮುಖ್ಯ ಅಂಶವಾಗಿ ಕಾಣ್ತಿದೆ.

  ಯೋಗರಾಜ್ ಭಟ್ ನಿರ್ದೇಶನವಿರುವ 'ಪಂಚತಂತ್ರ' ಚಿತ್ರದಲ್ಲಿ ಯುವ ಪ್ರತಿಭೆ ವಿಹಾನ್ ಗೌಡ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಅಕ್ಷರಾ ಗೌಡ ಮತ್ತು ಸೋನಲ್ ಮಾಂಟೆರೋ ನಾಯಕಿಯರಾಗಿ ಮಿಂಚಿದ್ದಾರೆ. ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತವಿದೆ. ಚಿತ್ರ ಇದೇ ತಿಂಗಳು 29 ರಂದು ಚಿತ್ರ ತೆರೆಗೆ ಬರುತ್ತಿದೆ.

  English summary
  Watch Panchatantra Official Trailer Directed By Yogaraj Bhat Produced By Hariprasad Jayanna & Hemanth Paradkar. Music Composed By VHarikrishna.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X