For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ ಆತ್ಮದ ಜೊತೆ ಮಾತುಕತೆ! ವಿಡಿಯೋ ವೈರಲ್

  |

  ನಟ ಚಿರಂಜೀವಿ ಸರ್ಜಾ ಅವರು ನಿಧನರಾಗಿ ಎರಡು ತಿಂಗಳಾಗುತ್ತಾ ಬಂತು. ಜೂನ್ 6 ರಂದು ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿದರು.

  ದರ್ಶನ್ ಅಭಿಮಾನಿಗಳು ಫುಲ್ ಹ್ಯಾಪಿ | Roberrt Poster | Filmibeat Kannada

  ಇದೀಗ ಚಿರಂಜೀವಿ ಸರ್ಜಾ ಅವರ ಆತ್ಮದೊಂದಿಗೆ ವ್ಯಕ್ತಿಯೊಬ್ಬ ಮಾತನಾಡಿದ್ದಾಗಿ ಹೇಳಿ ಮಾಡಿರುವ ವಿಡಿಯೋ ಒಂದು ವೈರಲ್ ಆಗಿದೆ.

  ಚಿರಂಜೀವಿ ಸರ್ಜಾ ಖಾತೆಗೆ 'ಚಿರಸ್ಮರಣೀಯ' ಗೌರವ ನೀಡಿದ ಇನ್‌ಸ್ಟಾಗ್ರಾಂಚಿರಂಜೀವಿ ಸರ್ಜಾ ಖಾತೆಗೆ 'ಚಿರಸ್ಮರಣೀಯ' ಗೌರವ ನೀಡಿದ ಇನ್‌ಸ್ಟಾಗ್ರಾಂ

  ವೈರಲ್ ಆಗಿರುವ ವಿಡಿಯೋದಲ್ಲಿ ಯಂತ್ರವೊಂದನ್ನು ಇಟ್ಟುಕೊಂಡು ಯಂತ್ರದ ಮೂಲಕ ಚಿರಂಜೀವಿ ಸರ್ಜಾ ಆತ್ಮಕ್ಕೆ(!?) ವ್ಯಕ್ತಿಯೊಬ್ಬ ಪ್ರಶ್ನೆಗಳನ್ನು ಕೇಳುತ್ತಿದ್ದಾನೆ, ಯಂತ್ರದ ಮೂಲಕ ಅಸ್ಪಷ್ಟವಾದ ಕೆಲವು ಪದಗಳು ಆಗಾಗ್ಗೆ ಕೇಳಿ ಬರುತ್ತಿವೆ.

  ಯಂತ್ರದ ಸಹಾಯದಿಂದ ಆತ್ಮದ ಜೊತೆ ಮಾತುಕತೆ

  ಯಂತ್ರದ ಸಹಾಯದಿಂದ ಆತ್ಮದ ಜೊತೆ ಮಾತುಕತೆ

  ಸತ್ತವರ ಆತ್ಮದೊಂದಿಗೆ ಮಾತನಾಡುವ ವಿಡಿಯೋಗಳು ಇತ್ತೀಚೆಗೆ ಸಖತ್ ವೈರಲ್ ಆಗುತ್ತಿವೆ. ಯಂತ್ರವನ್ನು ಇಟ್ಟುಕೊಂಡು ಯಂತ್ರದ ಮೂಲಕ ತಾವು ಆತ್ಮಕ್ಕೆ ಪ್ರಶ್ನೆಗಳನ್ನು ಕೇಳುವುದಾಗಿ ಆತ್ಮಗಳು ಉತ್ತರಿಸುವುದಾಗಿ ಇದನ್ನು ಮಾಡುವವರು ಹೇಳುತ್ತಿದ್ದಾರೆ.

  ಚಿರು ಸರ್ಜಾ ಆತ್ಮದ ಜೊತೆ ಚಾರ್ಲಿ ಚಿಟ್ಟೆಂಡನ್ ಮಾತುಕತೆ

  ಚಿರು ಸರ್ಜಾ ಆತ್ಮದ ಜೊತೆ ಚಾರ್ಲಿ ಚಿಟ್ಟೆಂಡನ್ ಮಾತುಕತೆ

  ಚಿರಂಜೀವಿ ಸರ್ಜಾ ಆತ್ಮವನ್ನು ಮಾತನಾಡಿಸಿದ್ದಾಗಿ ಚಾರ್ಲಿ ಚಿಟ್ಟೆಂಡೆನ್ ಪ್ಯಾರಾನಾರ್ಮಲ್ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಇದೇ ಚಾನೆಲ್‌ನಲ್ಲಿ ಇಂಥಹಾ ಹಲವು ವಿಡಿಯೋಗಳು ಪೋಸ್ಟ್ ಆಗಿವೆ.

  ಬಹಳ ಅಸ್ಪಷ್ಟವಾದ ಪದಗಳು ಕೇಳಿಬರುತ್ತವೆ

  ಬಹಳ ಅಸ್ಪಷ್ಟವಾದ ಪದಗಳು ಕೇಳಿಬರುತ್ತವೆ

  ವಿಡಿಯೋದಲ್ಲಿ ಕ್ಯಾಲುಕ್ಯುಲೇಟರ್ ಮಾದರಿಯ ಯಂತ್ರವೊಂದು ಕಾಣುತ್ತದೆ. ಅದರಲ್ಲಿ ಕೆಲವು ನಂಬರ್‌ಗಳು ಮೂಡುತ್ತವೆ. ವ್ಯಕ್ತಿಯೊಬ್ಬ ಚಿರಂಜೀವಿ ಸರ್ಜಾ ನನ್ನ ಜೊತೆ ಮಾತನಾಡು ಎಂದು ಹೇಳುತ್ತಾನೆ, ಚಿರಂಜೀವಿ ಸರ್ಜಾ ಹುಟ್ಟಿದ ದಿನಾಂಕ, ಚಿರು ಸರ್ಕಾ ತಾತ ಶಕ್ತಿ ಪ್ರಸಾದ್ ಹೆಸರುಗಳನ್ನು ಹೇಳುತ್ತಾನೆ. ಯಂತ್ರದಿಂದ ಬಹಳ ಅಸ್ಪಷ್ಟವಾಗಿ ಕೆಲವು ಪದಗಳು ಕೇಳುತ್ತವೆ.

  ಸುಶಾಂತ್ ಸಿಂಗ್ ಆತ್ಮದೊಂದಿಗೆ ಮಾತುಕತೆ

  ಸುಶಾಂತ್ ಸಿಂಗ್ ಆತ್ಮದೊಂದಿಗೆ ಮಾತುಕತೆ

  ಕೆಲವು ದಿನಗಳ ಹಿಂದಷ್ಟೆ ಸುಶಾಂತ್ ಸಿಂಗ್ ಆತ್ಮದೊಂದಿಗೆ ಮಾತನಾಡಿದ್ದಾಗಿ ವ್ಯಕ್ತಿಯೊಬ್ಬ ವಿಡಿಯೋ ಪೋಸ್ಟ್ ಮಾಡಿದ್ದ. ಯಾವುದೋ ಯಂತ್ರವೊಂದನ್ನು ಇಟ್ಟುಕೊಂಡು ಅದರ ಮೂಲಕ ಸುಶಾಂತ್ ಅನ್ನು ಮಾತನಾಡಿಸಿದ್ದಾಗಿ ಹೇಳಿದ್ದ.

  ಪ್ರಚಾರ ಮತ್ತು ಹಣಕ್ಕೆ ಸುಳ್ಳು ವಿಡಿಯೋ?

  ಪ್ರಚಾರ ಮತ್ತು ಹಣಕ್ಕೆ ಸುಳ್ಳು ವಿಡಿಯೋ?

  ಆತ್ಮಗಳೊಂದಿಗೆ ಮಾತನಾಡುವ ಈ ರೀತಿಯ ವಿಡಿಯೋಗಳು ಯೂಟ್ಯೂಬ್‌ನಲ್ಲಿ ಸಾಕಷ್ಟಿವೆ. ಆದರೆ ಇವು ಸುಳ್ಳು ವಿಡಿಯೋಗಳಾಗಿವೆ. ಕೆಲವರು ಇವುಗಳ ಬಗ್ಗೆ ನಂಬಿಕೆ ಹೊಂದಿದ್ದಾರೆ. ಈ ರೀತಿ ವಿಡಿಯೋಗಳನ್ನು ಮಾಡಿ ಪ್ರಚಾರ ಮತ್ತು ಹಣ ಮಾಡುತ್ತಾರೆ ಎಂದು ಹಲವರು ಆರೋಪಿಸಿದ್ದಾರೆ.

  English summary
  Paranormal experts Charlie Chittenden claims he talked to Chiranjeevi Sarja's soul through spirit box.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X