For Quick Alerts
  ALLOW NOTIFICATIONS  
  For Daily Alerts

  ಶಿವಾಜಿನಗರದಲ್ಲಿ ಪ್ಯಾರ್ ಗೆ ಆಗ್ಬಿಟ್ಟ ಪರುಲ್ ಯಾದವ್

  By Rajendra
  |

  ಪ್ಯಾರ್ ಗೆ ಆಗ್ಬಿಟ್ಟೈತೆ ಎಂದು ಪಡ್ಡೆಗಳ ನಿದ್ದೆಗೆ ಸಂಚಕಾರ ತಂದಿದ್ದ ಬೆಡಗಿ ಪಾರುಲ್ ಯಾದವ್ ಈಗ ಶಿವಾಜಿನಗರಕ್ಕೆ ಬಂದಿಳಿದಿದ್ದಾರೆ. ಈ ಬಾರಿ ಅವರಿಗೆ ದುನಿಯಾ ವಿಜಯ್ ಮೇಲೆ ಪ್ಯಾರ್ ಆಗ್ಬಿಟ್ಟೈತೆ. ರಾಮು ನಿರ್ಮಿಸುತ್ತಿರುವ ಭಾರಿ ಬಜೆಟ್ ಚಿತ್ರ ಶಿವಾಜಿನಗರ ಚಿತ್ರಕ್ಕೆ ನಾಯಕಿಯಾಗಿ ಅವರು ಆಯ್ಕೆಯಾಗಿದ್ದಾರೆ.

  ಇನ್ನು ಶಿವಾಜಿನಗರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿರುವವರು ಪಿಎನ್ ಸತ್ಯ. ಮೇ 31ರಂದು ಚಿತ್ರ ಆರಂಭವಾಗಲಿದೆ. ಈ ಹಿಂದೆ ರಾಮು ಅವರು ದುನಿಯಾ ವಿಜಯ್ ಜೊತೆ ಕಂಠೀರವ ಚಿತ್ರವನ್ನು ನಿರ್ಮಿಸಿದ್ದರು. ಆದರೆ ಆ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗಲಿಲ್ಲ.

  ಒಟ್ಟು 70 ದಿನಗಳ ಕಾಲ ಶಿವಾಜಿನಗರ ಸುತ್ತಮುತ್ತ ಚಿತ್ರದ ಶೂಟಿಂಗ್ ನಡೆಯಲಿದೆ. ಜೆಸ್ಸಿ ಗಿಫ್ಟ್ ಅವರ ಸಂಗೀತ, ಸೆಲ್ವಂ ಅವರ ಛಾಯಾಗ್ರಹಣ, ರವಿ ಶ್ರೀವತ್ಸ ಅವರ ಸಂಭಾಷಣೆ ಚಿತ್ರಕ್ಕಿದೆ. ಪಾತ್ರವರ್ಗದಲ್ಲಿ ಪ್ರದೀಪ್ ರಾವತ್, ಅಭಿಮಾನ್ ಸಿಂಗ್, ಆದಿತ್ಯ ಮೆನನ್, ಸುಮಿತ್ರಾ, ಅವಿನಾಶ್, ಸತ್ಯರಾಜ್, ಹುಲಿವಾನ್ ಗಂಗಾಧರಯ್ಯ ಮುಂತಾದವರಿದ್ದಾರೆ.

  ಚಿತ್ರದ ಕಥೆ ಏನು ಎಂಬ ಬಗ್ಗೆ ರಾಮು ಸುಳಿವು ನೀಡದಿದ್ದರೂ 'ಶಿವಾಜಿನಗರ'ದ ಸುತ್ತ ಸುತ್ತುವ ಕಥೆ ಎಂದಷ್ಟೇ ಹೇಳಬೇಕು. ಚಿತ್ರದ ಬಹುತೇಕ ಚಿತ್ರೀಕರಣ ಶಿವಾಜಿನಗರದಲ್ಲೇ ನಡೆಯಲಿದೆ. ಉಳಿದಂತೆ ಚಿಕ್ಕಮಗಳೂರಿನಲ್ಲೂ ನಡೆಯಲಿದೆ. (ಏಜೆನ್ಸೀಸ್)

  English summary
  Actress Parul Yadav plays female lead in Duniya Vijay's upcoming film Shivajinagar directing by PN Sathya know for action oriented films. The film is slated to begin from 31st of May says producer Ramu.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X