For Quick Alerts
  ALLOW NOTIFICATIONS  
  For Daily Alerts

  ಡಬ್ ಸ್ಮ್ಯಾಶ್ ದುನಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ ಶೀತಲ್ ಶೆಟ್ಟಿ

  By Bharath Kumar
  |

  ಸಾಮಾನ್ಯವಾಗಿ ಈ ಟ್ರೆಂಡ್, ಹವಾ, ಅಬ್ಬರ ಎಲ್ಲವೂ ಹೀರೋಗಳೇ ಮಾಡೋದು. ಹೀರೋಯಿನ್ಸ್ ತುಂಬಾ ಕಮ್ಮಿ. ಸದಾ ಸದ್ದು ಮಾಡುವ ನಾಯಕನಟರ ಮಧ್ಯೆ ನಟಿ ಶೀತಲ್ ಶೆಟ್ಟಿ ಈಗ ಹೊಸ ಟ್ರೆಂಡ್ ಸೃಷ್ಟಿಸಿದ್ದಾರೆ.

  ಇದಕ್ಕೆ ಕಾರಣ ಶೀತಲ್ ಶೆಟ್ಟಿ ಅಭಿನಯಿಸಿರುವ 'ಪತಿಬೇಕು.ಕಾಮ್' ಸಿನಿಮಾ. ಈ ಚಿತ್ರದ ಟೀಸರ್ ಬಿಡುಗಡೆಯಾದಾಗ ಅದರಲ್ಲೊಂದು ಡೈಲಾಗ್ ಇತ್ತು. ಈ ಡೈಲಾಗ್ ನೋಡಿ ಅದೇಷ್ಟೋ ಜನ ಈ ಡೈಲಾಗ್ ಪಕ್ಕಾ ಟ್ರೆಂಡ್ ಆಗುತ್ತೆ ಎಂದಿದ್ದರು. ಅದರಂತೆ ಈಗ ಈ ಡೈಲಾಗ್ ಭಾರಿ ಸದ್ದು ಮಾಡುತ್ತಿದೆ.

  'ಪತಿಬೇಕು.ಕಾಂ'ಗೆ ಚಿತ್ರರಸಿಕರು ಫುಲ್ ಫಿದಾ 'ಪತಿಬೇಕು.ಕಾಂ'ಗೆ ಚಿತ್ರರಸಿಕರು ಫುಲ್ ಫಿದಾ

  ಹೌದು, ಡಬ್ ಸ್ಮ್ಯಾಶ್ ದುನಿಯಾದಲ್ಲಿ ಪತಿಬೇಕು.ಕಾಂ ಚಿತ್ರದ ಡೈಲಾಗ್ ಸಖತ್ ವೈರಲ್ ಆಗಿದೆ. ಸಾವಿರಾರು ಸಂಖ್ಯೆಯಲ್ಲಿ ಯುವತಿಯರು ಈ ಡೈಲಾಗ್ ಗೆ ಡಬ್ ಸ್ಮ್ಯಾಶ್ ಮಾಡ್ತಿದ್ದಾರೆ.

  ಅಷ್ಟಕ್ಕೂ, ಆ ಡೈಲಾಗ್ ಏನು ಅಂತೀರಾ. ಇದೇ ನೋಡಿ ಆ ವೈರಲ್ ಆಗಿರುವ ಡೈಲಾಗ್. ''ಊರೋರ್ಗೆಲ್ಲಾ ಹೆದರಿಕೊಂಡು ಇಬ್ಬರು ರೂಂ ಒಳಗೆ ಸೇರಿಕೊಂಡ್ರೆ ಅದು ಲವ್ ಮ್ಯಾರೇಜ್. ಊರೋರೆಲ್ಲಾ ಸೇರಿ ಇಬ್ಬರನ್ನ ರೂಂಗೆ ಬಿಟ್ರೆ ಅದು ಅರೇಂಜ್ ಮ್ಯಾರೇಜ್. ಒಟ್ನಲ್ಲಿ, ರೂಂಗೆ ಹೋಗೋಕೆ ಹೊಡೆದಾಡ್ತಾರೆ ಅಷ್ಟೇ''

  ಶೀತಲ್ ಶೆಟ್ಟಿಯ ಈ 'ಡೈಲಾಗ್' ಸೌಂಡ್ ಮಾಡೋದು ಪಕ್ಕಾ ಶೀತಲ್ ಶೆಟ್ಟಿಯ ಈ 'ಡೈಲಾಗ್' ಸೌಂಡ್ ಮಾಡೋದು ಪಕ್ಕಾ

  pathibeku.com dailough trending in dubsmash

  ಇನ್ನು ಕಿಚ್ಚ ಸುದೀಪ್ ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದರು. ಇದೀಗ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (ಆಗಸ್ಟ್ 10) ಇಂದು ಸಂಜೆ ಪತಿಬೇಕು.ಕಾಂ ಚಿತ್ರದ ಆಡಿಯೋ ಸಿಡಿ ಬಿಡುಗಡೆ ಮಾಡಲಿದ್ದಾರೆ.

  'ತರ್ಲೆ ನನ್ ಮಕ್ಳು' ಚಿತ್ರ ಮಾಡಿದ್ದ ರಾಕೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ನಿರ್ದೇಶಕ ರಾಕೇಶ್, ಶ್ರೀನಿವಾಸ್ ಹಾಗೂ ಮಂಜುನಾಥ್ ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಶೀತಲ್ ಶೆಟ್ಟಿ, ಕೃಷ್ಣ ಅಡಿಗ ಅಭಿನಯಿಸಿದ್ದಾರೆ. ಕೌಷಿಕ್ ಹರ್ಷ ಸಂಗೀತ ಸಂಯೋಜನೆ ಮಾಡಿದ್ದಾರೆ.

  English summary
  kannada actress sheethal shetty starrer pathibeku.com movie trailer released. the movie directed by rakesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X