»   » ಎಚ್ಚರವಾಗದಿದ್ದರೇ ಮತ್ತಷ್ಟು 'ಹುಚ್ಚು' ಪ್ರತಿಭೆಗಳು ಬರಲಿದೆ ಹುಷಾರ್.!

ಎಚ್ಚರವಾಗದಿದ್ದರೇ ಮತ್ತಷ್ಟು 'ಹುಚ್ಚು' ಪ್ರತಿಭೆಗಳು ಬರಲಿದೆ ಹುಷಾರ್.!

By: ಫಿಲ್ಮಿಬೀಟ್ ಪ್ರತಿನಿಧಿ
Subscribe to Filmibeat Kannada

ಎರಡು ಮೂರು ವರ್ಷದ ಹಿಂದೆ ಹುಚ್ಚ ವೆಂಕಟ್ ಅಂದ್ರೆ ಯಾರು ಅಂತಾನೇ ಯಾರಿಗೂ ಗೊತ್ತಿರಲಿಲ್ಲ. ಅದೇ ತರ ಪ್ರಥಮ್ ಕೂಡ ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಇಂದು ಇವರಿಬ್ಬರು ಯಾವ ಸೆಲೆಬ್ರಿಟಿಗಳಿಗೂ ಕಮ್ಮಿಯಿಲ್ಲ ಎನ್ನುವಂತಹ ಸ್ಟಾರ್ ಗಳು.

ದಿನಕ್ಕೊಂದು ಸುದ್ದಿ, ದಿನಕ್ಕೊಂದು ವಿವಾದ, ದಿನಕ್ಕೊಂದು ರಂಪಾಟ....ಹೀಗೆ, ಪ್ರತಿದಿನವೂ ಸುದ್ದಿ ವಾಹಿನಿಗಳಲ್ಲಿ ಇವರೇ ಹೆಡ್ ಲೈನ್ಸ್. ಇವರು ಮಾಡುತ್ತಿರುವ ಒಂದೊಂದು ಘಟನೆಗಳಿಗೂ, ಇವರನ್ನ ಗುರುತಿಸಿ ಬೆಳಸಿದ ರಿಯಾಲಿಟಿ ಶೋಗಳು, ಇವರ ಬೆನ್ನಿಗೆ ಬಿದ್ದು ಪ್ರಚಾರ ಕೊಟ್ಟ ಮಾಧ್ಯಮಗಳು, ಇವರನ್ನ ಬೆಂಬಲಿಸಿದ ಜನರು ಇಂದು ಹೊಣೆ ಆಗುತ್ತಿದ್ದಾರೆ. (ಈ ವಿಷ್ಯಕ್ಕೆ ಸಂಬಂಧಿಸಿದಂತೆ ನಾವು ನಡೆಸಿದ ಪೋಲ್ ನಲ್ಲಿ ಉತ್ತರ ಸಿಕ್ಕಿದೆ)

ಇಷ್ಟಕ್ಕೆಲ್ಲಾ ಕಾರಣ ಯಾರು? ಇವರು ಈ ರೀತಿ ಆಗಲು ಕಾರಣವಾಗಿದ್ದು ಯಾರು? ಇದು ಎಲ್ಲರನ್ನ ಕಾಡುತ್ತಿರುವ ಪ್ರಶ್ನೆ. ಮುಂದೆ ಓದಿ.....

ಇಂತವರನ್ನ ಬೆಳಸಿದ್ದು ಇವರೇ

ಇವರನ್ನ ಇಡೀ ರಾಜ್ಯಕ್ಕೆ ಪರಿಚಯಿಸುವಂತಹ ವೇದಿಕೆ ಕಲ್ಪಿಸಿಕೊಟ್ಟ ರಿಯಾಲಿಟಿ ಶೋಗಳು, ಇವರ ಸಣ್ಣಪುಟ್ಟ ವಿಷ್ಯಗಳನ್ನ 'TRP' ಗಾಗಿ ದೊಡ್ಡದಾಗಿ ಬಿಂಬಿಸಿದ ಸುದ್ದಿವಾಹಿನಿಗಳು, ಇಂತವರು ಏನೇ ಮಾಡಿದ್ರು ನಾವು ಇದ್ದೀವಿ, ನಾವು ಇದ್ದಿವಿ ಎಂದು ಬೆಂಬಲಿಸುವ ಜನರು......ಈ ಮೂವರೇ ಇಂತವರನ್ನ ಸರಿಪಡಿಸಬೇಕಾಗಿದೆ.

ರಿಯಾಲಿಟಿ ಶೋಗಳ ಪಾತ್ರವೇನು?

ಜನರಿಗೆ ಮನರಂಜನೆ ನೀಡುವ ದೃಷ್ಟಿಯಿಂದ ವಿಭಿನ್ನ-ವಿಭಿನ್ನವಾದ ರಿಯಾಲಿಟಿ ಶೋಗಳನ್ನ ಅಯೋಜಿಸುತ್ತಾರೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಗಮನಿಸಿದಾಗ, ಪ್ರತಿಯೊಂದು ಶೋಗಳಲ್ಲೂ ಒಬ್ಬೊಬ್ಬ ಪ್ರಥಮ್, ಒಬ್ಬೊಬ್ಬ ಹುಚ್ಚ ವೆಂಕಟ್ ಹುಟ್ಟಿಕೊಳ್ಳುತ್ತಿದ್ದಾರೆ. ಇವರು ಮೊದಲೇ ಹೀಗೆ ಇರ್ತಾರ? ಅಥವಾ ರಿಯಾಲಿಟಿ ಶೋಗೆ ಬರಬೇಕೆಂದು ಈ ರೀತಿ ತಯಾರಾಗ್ತಾರ ಗೊತ್ತಿಲ್ಲ. ಆದ್ರೆ, ರಿಯಾಲಿಟಿ ಶೋಗಳ ಮೂಲಕ ಇಂತಹ ಪ್ರತಿಭೆಗಳು ಹೊರ ಬರುತ್ತಿರುವುದು ಗಮನಾರ್ಹ.

ರಿಯಾಲಿಟಿ ಶೋನಲ್ಲಿ ಸ್ಪರ್ಧೆ ಮಾಡಿದ್ರೆ 'ಸ್ಟಾರ್'

ರಿಯಾಲಿಟಿ ಶೋವೊಂದರಲ್ಲಿ ಸ್ಪರ್ಧೆ ಮಾಡಿದ್ರೆ ಸಾಕು ರಾತ್ರೋರಾತ್ರಿ ಆತ 'ಸ್ಟಾರ್' ಆಗಿ ಬಿಡುತ್ತಾನೆ. ಹೀಗಾಗಿ, ಎಲ್ಲರ ಗಮನ ಸೆಳೆಯಲು ವಿವಾದ, ಜಗಳ, ರಂಪಾಟ, ಹುಚ್ಚಾಟ, ಹೀಗೆ ಏನಾದರೂ ಮಾಡಿ ಗುರುತಿಸಿಕೊಳ್ಳುವ ಪ್ರಯತ್ನ ಮಾಡ್ತಾರೆ. ಇನ್ನು ಇಂತವರು ಇದ್ರೆ, ಜನ ನೋಡ್ತಾರೆ ಎಂಬ ಭರವಸೆ ಕೂಡ ರಿಯಾಲಿಟಿ ಶೋಗಳದ್ದು. ಹೀಗಾಗಿ, ಹೊಸ ಹೊಸ ವೆಂಕಟ್, ಪ್ರಥಮ್ ಬರ್ತಾನೆ ಇದ್ದಾರೆ.

ಜನಗಳು ಯಾಕೆ ಹೀಗೆ?

ಜನರು ಇಂತವರನ್ನ ಹೆಚ್ಚು ಇಷ್ಟ ಪಡ್ತಾರೆ. ಕೇವಲ ಒಂದು ಅಥವಾ ಅರ್ಧಗಂಟೆ ಕಾರ್ಯಕ್ರಮದಲ್ಲಿ ಅವರ ಸ್ವಭಾವ, ಗುಣವನ್ನ ಅಳೆಯುತ್ತಾರೆ. ಇನ್ನು ಆ ಸ್ಪರ್ಧಿಗಳಿಂದ ಮನರಂಜನೆ ಸಿಗುತ್ತೆ ಎಂದು ಗೊತ್ತಾಗಬಿಟ್ಟರೇ, ಅವರಿಗೊಂದು ಅಭಿಮಾನಿ ಸಂಘ, ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಅಭಿಯಾನ. ಇಷ್ಟೆಲ್ಲಾ ಆದ್ಮೇಲೆ, ಸಾಮಾನ್ಯವಾಗಿದ್ದವರು ದಿಢೀರ್ ಅಂತ ಸೆಲೆಬ್ರಿಟಿ ಆಗೋಗ್ತಾರೆ.

'ಸೂಪರ್ ಸ್ಟಾರ್ಸ್' ಮಾಡೋದೇ ಸುದ್ದಿ ವಾಹಿನಿಗಳು

ರಿಯಾಲಿಟಿ ಶೋಗಳು ಮುಗಿದು ಹೋಗುತ್ತೆ. ಜನರು ಸುದ್ದಿಯಲ್ಲಿದ್ದರೇ ಮಾತ್ರ ನೆನಪಿಟ್ಟುಕೊಳ್ಳುತ್ತಾರೆ. ಹೀಗಾಗಿ, ಸದಾ ಸುದ್ದಿಯಲ್ಲಿರಬೇಕಾದರೇ ಸುದ್ದಿ ವಾಹಿನಿಗಳು ಅಗತ್ಯ. ಇನ್ನು 24/7 ಕೆಲಸ ಮಾಡುವ ಸುದ್ದಿ ವಾಹಿನಿಗಳು ಕೂಡ ಅವರಿಗೆ ವೇದಿಕೆಯಾಗಿ ಬಿಡುತ್ತೆ. ಅವರು ಕುಂತರು ಸುದ್ದಿ, ನಿಂತರು ಸುದ್ದಿ, ಅದು ಎಷ್ಟರ ಮಟ್ಟಿಗೆ ಅಂದ್ರೆ 'ಮಾಧ್ಯಮ ಪ್ರತಿನಿಧಿಗಳಿಗೆ ಫೋನ್ ಮಾಡಿ ನಾನು ಸಾಯುತ್ತಿದ್ದೇನೆ' ಎಂದು ವಿಷಯ ತಿಳಿಸುತ್ತಾರೆ. ಅಷ್ಟರ ಮಟ್ಟಿಗೆ ಸುದ್ದಿ ವಾಹಿನಿಗಳನ್ನ ಬಳಸಿಕೊಳ್ಳುತ್ತಿದ್ದಾರೆ. ಅದೇ ರೀತಿ ಸುದ್ದಿವಾಹಿನಿಗಳು ಕೂಡ ರಾತ್ರಿ-ಹಗಲು ಎನ್ನದೇ ಇಂತವರ ಬಗ್ಗೆ ವಿಶೇಷ ಸಂಚಿಕೆಗಳ ಮೂಲಕ ಕಾರ್ಯಕ್ರಮ ನೀಡುತ್ತಿವೆ.

ಮತ್ತಷ್ಟು ಜನ ಸಿದ್ದವಾಗುತ್ತಿದ್ದಾರೆ ಎಚ್ಚರಿಕೆ?

ರಿಯಾಲಿಟಿ ಶೋಗಳು ಇಂತಹ ಪಾತ್ರಗಳನ್ನ ಬೆಂಬಲಿಸಬಾರದು. ಜನರು ಸರಿ ಯಾರು, ತಪ್ಪು ಯಾರು ಎಂದು ಆಲೋಚಿಸಬೇಕು, ಸುದ್ದಿ ವಾಹಿನಿಗಳು ಇಂತವರನ್ನ ದೂರವಿರಿಸಬೇಕು. ಇಲ್ಲವಾದಲ್ಲಿ, ಮುಂದಿನ ದಿನಗಳಲ್ಲಿ ಮತ್ತಷ್ಟು ಜನ ಹುಟ್ಟಿಕೊಳ್ಳುವುದ್ರಲ್ಲಿ ಯಾವುದೇ ಅನುಮಾನವಿಲ್ಲ.

English summary
Some People are Using to News Channels and Reality Shows For His Own Publicity.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada