For Quick Alerts
  ALLOW NOTIFICATIONS  
  For Daily Alerts

  ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಬಳಿಕ ಬಂದಿದೆ ಕನ್ನಡದ್ದೇ ಆದ ಪ್ಲೆಫಿಕ್ಸ್

  |

  ಈಗ ಜಮಾನ ಬದಲಾಗಿದೆ. ಸಿನಿಮಾ ನೋಡಬೇಕು ಅಂದರೆ ಚಿತ್ರಮಂದಿರಕ್ಕೆನೇ ಹೋಗಬೇಕಿಲ್ಲ. ಧಾರಾವಾಹಿ ಬೇಕು ಅಂದರೆ ಟಿವಿಯ ಅಗತ್ಯವಿಲ್ಲ. ಈಗೆನಿದ್ದರೂ ಆನ್ ಲೈನ್ ಯುಗ.

  ಸಿನಿಮಾ, ಸೀರಿಯಲ್, ವೆಬ್ ಸೀರಿಸ್ ಎಲ್ಲವೂ ಈಗ ಆನ್ ಲೈನ್ ನಲ್ಲಿ ಲಭ್ಯವಿದೆ. ಈವರೆಗೆ ಅಮೇಜಾನ್ ಪ್ರೈಮ್, ನೆಟ್ ಫ್ಲಿಕ್ಸ್ ಗಳಲ್ಲಿ ಸಿನಿಮಾಗಳನ್ನು ನೋಡಿ ಖುಷಿ ಪಡುತ್ತಿದ್ದವರಿಗೆ ಈಗ ಕನ್ನಡದ್ದೇ ಆದ App ಬಂದಿದೆ. ಅದೇ ಪ್ಲೆಫಿಕ್ಸ್.

  ಬೆಂಗಳೂರಿಗರ ಪ್ರಯೋಗಾತ್ಮಕ ಚಿತ್ರ 'ಕ್ಯಾಂಡಿ ಫ್ಲಿಪ್' ನೆಟ್ ಫ್ಲಿಕ್ಸ್ ನಲ್ಲಿ ಲಭ್ಯ

  ಪ್ಲೆಫಿಕ್ಸ್ ಆನ್ ಲೈನ್ ಪ್ರಿಯರಿಗಾಗಿಯೇ ಹೊಸದಾಗಿ ಬಂದಿರುವ App. ವಿಶೇಷ ಅಂದರೆ, ಇದು ಕನ್ನಡಿಗರು ಮಾಡಿರುವ ಕನ್ನಡದ App. ಕಂಟೆಂಟ್ ಬ್ರಹ್ಮ ಸಂಸ್ಥೆ ಈ App ನ ಲೋಗೋವನ್ನು ಇತ್ತೀಚಿಗಷ್ಟೆ ಹಿರಿಯ ಟಿ ಎನ್ ನಿರ್ದೇಶಕ ಸೀತಾರಾಮ್ ಲಾಂಚ್ ಮಾಡಿದರು.

  ಈ ಕಾರ್ಯಕ್ರಮದಲ್ಲಿ 'ರಾಮಾ ರಾಮಾ ರೇ' ಖ್ಯಾತಿಯ ನಿರ್ದೇಶಕ ಸತ್ಯಪ್ರಕಾಶ್, ನಟ ಚೇತನ್, ನಟಿ ಅಪೇಕ್ಷಾಪುರೋಹಿತ್, ನಿರ್ದೇಶಕ ಪವನ್‌ಒಡೆಯರ್, ರಮೇಶ್‌ಇಂದಿರಾ, ವಿನುಬಳಮಂಜ, ಶೇಷಾದ್ರಿ ಅರವಿಂದ್‌ ಕೌಶಿಕ್ ಭಾಗಿಯಾಗಿದ್ದರು.

  ಸದ್ಯಕ್ಕೆ, ಪ್ಲೆಫಿಕ್ಸ್ ನಲ್ಲಿ ಕನ್ನಡದ ಸೂಪರ್ ಹಿಟ್ ಧಾರಾವಾಹಿಗಳಾದ 'ಮನ್ವಂತರ' ಹಾಗೂ 'ಮಾಯಾಮೃಗ' ಸೀರಿಯಲ್ ಗಳ ಹಕ್ಕನ್ನು ಪಡೆದುಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ವೆಬ್ ಸೀರಿಸ್, ಸಿನಿಮಾಗಳ ಟ್ರೇಲರ್, ಟೀಸರ್ ಗಳನ್ನ ಸಹ ವೀಕ್ಷಿಸಬಹುದಾಗಿದೆ.

  English summary
  After Amazon Prime and Netflix the new app Playflicks launched.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X