For Quick Alerts
  ALLOW NOTIFICATIONS  
  For Daily Alerts

  ಪಠಾಣ್ ವಿವಾದ:"ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆ ನೀಡಬೇಡಿ" ಬಿಜೆಪಿ ಮುಖಂಡರಿಗೆ ಮೋದಿ ಸಂದೇಶ

  |

  ಸಿನಿಮಾಗಳ ಬಗ್ಗೆ ಅನಗತ್ಯ ಹೇಳಿಕೆಗಳನ್ನು ನೀಡಿಬೇಡಿ ಎಂದು ಬಿಜೆಪಿ ಮುಖಂಡರಿಗೆ ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದ್ದಾರೆ. ನವದೆಹಲಿಯಲ್ಲಿ ನಡೆದ ಎರಡು ದಿನಗಳ ರಾಷ್ಟ್ರೀಯ ಕಾರ್ಯಕಾರಣಿ ಸಭೆಯಲ್ಲಿ ಮೋದಿ ಮುಖಂಡರಿಗೆ ಎಚ್ಚರಿಕೆ ನೀಡಿದ್ದಾರೆ.

  ಇತ್ತೀಚೆಗೆ ಬಿಜೆಪಿ ಮುಖಂಡರು ಸಿನಿಮಾಗಳಿಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ಹಿಂದೆ ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ್ ಮಿಶ್ರಾ 'ಪಠಾಣ್' ಸಿನಿಮಾ ಬಗ್ಗೆ ಕಮೆಂಟ್ ಮಾಡಿದ್ದರು.'ಪಠಾಣ್' ಸಿನಿಮಾದ "ಭೇಷರಮ್ ರಂಗ್.." ಹಾಡಿನಲ್ಲಿ ದೀಪಿಕಾ ಪಡುಕೋಣೆ ಬಿಕಿನಿ ಬಗ್ಗೆ ವಿವಾದವನ್ನು ಸೃಷ್ಟಿಸಿದ್ದರು.

  'ಪಠಾಣ್' ರನ್‌ಟೈಮ್ ಮಾಹಿತಿ ಬಹಿರಂಗ: ಜೋರಾಗಿದೆ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ'ಪಠಾಣ್' ರನ್‌ಟೈಮ್ ಮಾಹಿತಿ ಬಹಿರಂಗ: ಜೋರಾಗಿದೆ ಬಾಕ್ಸಾಫೀಸ್ ಕಲೆಕ್ಷನ್ ಲೆಕ್ಕಾಚಾರ

  ಈ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಸಿನಿಮಾಗಳ ವಿಚಾರವಾಗಿ ಅನಗತ್ಯ ಹೇಳಿಕೆಗಳನ್ನು ನೀಡಿದಂತೆ ಖಡಕ್ ಸಂದೇಶವನ್ನು ರವಾನೆ ಮಾಡಿದ್ದಾರೆ.

  " ಪ್ರಧಾನಿ ಯಾರ ಹೆಸರನ್ನೂ ತೆಗೆದುಕೊಂಡಿಲ್ಲ. ಆದರೆ, ಅವರ ಪ್ರತಿಯೊಂದು ಪದ ಹಾಗೂ ವಾಕ್ಯ ನಮ್ಮೆಲ್ಲರಿಗೂ ತುಂಬಾನೇ ಮುಖ್ಯ. ಅವರ ಮಾತುಗಳಿಂದ ಪ್ರತಿಯೊಬ್ಬರೂ ಪ್ರೇರಿತರಾಗಿದ್ದೇವೆ. ನಮ್ಮ ವರ್ತನೆಗಳು ಅವರ ಎನರ್ಜಿ ಹಾಗೂ ಮಾರ್ಗದರ್ಶನದಿಂದು ತುಂಬಿದ್ದು, ಇದು ಮುಂದಿನ ದಿನಗಳಲ್ಲೂ ಮುಂದುವರೆಯುತ್ತೆ." ಎಂದು ಮಧ್ಯಪ್ರದೇಶದ ಗೃಹಮಂತ್ರಿ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

  ನರೋತ್ತಮ್ ಮಿಶ್ರಾ, ಮಧ್ಯಪ್ರದೇಶದ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರದ ಪ್ರಮುಖ ಸಚಿವರಲ್ಲಿ ಒಬ್ಬರು. ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಮಿಶ್ರಾ ಕೆಲವೊಮ್ಮೆ ಸುದ್ದಿಯಲ್ಲಿ ಇರುತ್ತಾರೆ. ಅದು ಸಿನಿಮಾ ಆಗಿರಲಿ ಅಥವಾ ರಾಜಕೀಯ ಮುಖಂಡರ ಬಗ್ಗೆ ಆಗಿರಲಿ ಖಡಕ್ ಕಮೆಂಟ್‌ಗಳನ್ನು ಪಾಸ್ ಮಾಡುತ್ತಾರೆ.

  ಶಾರುಖ್ ಖಾನ್ ಹಾಗೂ ದೀಪಿಕಾ ಪಡುಕೋಣೆ ಅಭಿನಯದ 'ಪಠಾಣ್' ಸಿನಿಮಾದ "ಬೇಷರಂ ಸಾಂಗ್.." ರಿಲೀಸ್ ಆದಾಗ ಮೊದಲು ಕಮೆಂಟ್ ಮಾಡಿದ್ದು ನರೋತ್ತಮ್ ಮಿಶ್ರಾ. ಈ ಹಾಡು ಕೊಳಕು ಮನಸ್ಥಿತಿಯನ್ನು ಪ್ರದರ್ಶಿಸುತ್ತದೆ. ಅಲ್ಲದೆ ಸಿನಿಮಾದ ಶೀರ್ಷಿಕೆ ಕೂಡ "ಆಕ್ಷೇಪಾರ್ಹ" ಎಂದು ಮಧ್ಯಪ್ರದೇಶದ ಗೃಹ ಮಂತ್ರಿ ನರೋತ್ತಮ್ ಮಿಶ್ರಾ ಆರೋಪಿಸಿದ್ದರು.

  English summary
  PM Narendra Modi Suggested BJP Leaders Avoid Unnecessary Comments On Movies Like Pathaan, Know More.
  Thursday, January 19, 2023, 10:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X