twitter
    For Quick Alerts
    ALLOW NOTIFICATIONS  
    For Daily Alerts

    ದಾವಣಗೆರೆಯಲ್ಲಿ ಪೊಗರು ಹವಾ: ಅಭಿಮಾನದ ಅಲೆಯಲ್ಲಿ ತೇಲಿದ ಧ್ರುವ

    By ದಾವಣಗೆರೆ ಪ್ರತಿನಿಧಿ
    |

    ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಭಾನುವಾರ 'ಪೊಗರು' ಚಿತ್ರದ ಆಡಿಯೊ ಬಿಡುಗಡೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಕೋವಿಡ್ ಬಳಿಕ ಇದೇ ಮೊದಲ ಬಾರಿಗೆ ದಾವಣಗೆರೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ನೆರೆದಿದ್ದರು. ಕೊರೊನಾ ನಿಯಮಗಳನ್ನೆಲ್ಲಾ ಗಾಳಿಗೆ ತೂರಲಾಗಿತ್ತು.

    Recommended Video

    ಧ್ರುವ ಸರ್ಜಾ ಮಾಡಿದ ತಪ್ಪಿಗೆ ಕೋಪಗೊಂಡ ಡಿ ಬಾಸ್ ದರ್ಶನ್..!? | Filmibeat Kannada

    ಆರಂಭದಲ್ಲಿ ಚಿರಂಜೀವಿ ಸರ್ಜಾ ಅವರ ಪರಿಚಯ ಮಾಡುವಾಗ ಪ್ರೇಕ್ಷಕರು ಮೂಕರಾದರು. ಬಳಿಕ ಖರಾಬು ಹಾಡು ಬಂದಾಗ ಹುಚ್ಚೆದ್ದು ನರ್ತಿಸಿದರು. ಆಡಿಯೊ ಬಿಡುಗಡೆಗೂ ಮುನ್ನ ನಿರ್ದೇಶಕ, ನಿರ್ಮಾಪಕರಾದಿಯಾಗಿ ಚಿತ್ರ ತಂಡದವರೆಲ್ಲರೂ ಈ ಹಾಡಿಗೆ ನರ್ತಿಸಿದರು. ಚಿತ್ರದ ಹಾಡನ್ನು ಮತ್ತೊಮ್ಮೆ ಪ್ಲೇ ಮಾಡಿದಾಗ ಮನಸೋ ಇಚ್ಛೆ ಕುಣಿದರು.

    ಹಾಡಿನ ಬಗ್ಗೆ ಅಭಿ‍ಪ್ರಾಯ ಕೇಳಲು ಪ್ರೇಕ್ಷಕರ ಗ್ಯಾಲರಿಗೆ ಬಂದಾಗ ಪ್ರೇಕ್ಷಕರೊಬ್ಬರು 'ನಟೋರಿಯಸ್' ಎಂದು ಗುಡುಗಿದರು. ಯುವತಿಯರು 'ವಿ ಲವ್ ಧ್ರುವ ಸರ್ಜಾ' ಎಂದು ಹುರಿದುಂಬಿಸಿದರು. ಬಾಲಕ ತನ್ಮಯ್ ಖರಾಬು ಹಾಡನ್ನು ಸಲೀಸಾಗಿ ಹಾಡಿದ ನಿರೂಪಕಿ ಅನುಶ್ರೀ 10ನೇ ಮಗ್ಗಿ ಹೇಳು ಎಂದು ಕೇಳಿದಾಗ ತೊದಲಿದ!

    ಪೊಗರು ಆಡಿಯೋ ರಿಲೀಸ್ ಗೆ ಟಗರು

    ಪೊಗರು ಆಡಿಯೋ ರಿಲೀಸ್ ಗೆ ಟಗರು

    ಪೊಗರು ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿ, ಸಿನಿಮಾ ನಿರ್ದೇಶಕ ನಂದಕಿಶೋರ್ ಅವರ ತಂದೆ ಸುದೀರ್ ಹೆಸರಾಂತ ಕಲಾವಿದರು. ಹಿರಿಯ ಕಲಾವಿದ ಶಕ್ತಿ ಪ್ರಸಾದ್ ಅವರ ಮಗ ಅರ್ಜುನ್ ಸರ್ಜಾ ಮತ್ತು ಮೊಮ್ಮಗ ಧೃವ ಸರ್ಜಾ. ನಟನೆ ಎಂಬುದು ರಕ್ತಗತವಾಗು ಬಂದಿದೆ. ಕುಟುಂಬವೇ ನಟನೆ ಸೇವೆ ಮಾಡುತ್ತಿದೆ. ಧೃವ ಸರ್ಜಾ ಅವರ ಮೂರು ಸಿನಿಮಾ ಯಶಸ್ವಿಯಾಗಿದ್ದು, ನಾಲ್ಕನೇ ಸಿನಿಮಾ ಪೊಗರು ಸಹ ಯಶಸ್ವಿ ಕಾಣಲಿದೆ. ಪ್ರೇಕ್ಷಕರು ಈ ಸಿನಿಮಾ ಮೆಚ್ಚಿ ಸ್ವಾಗತಿಸಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

    ರಾಜ್‌ಕುಮಾರ್ ಅವರಂತೆ ದೊಡ್ಡ ಹೆಸರು ಮಾಡಲಿ

    ರಾಜ್‌ಕುಮಾರ್ ಅವರಂತೆ ದೊಡ್ಡ ಹೆಸರು ಮಾಡಲಿ

    ಫೆ.19ಕ್ಕೆ ಸಿನಿಮಾ ತೆರೆ ಮೇಲೆ ಬರಲಿದ್ದು, ಹಾಡುಗಳೇ ಜನಮೆಚ್ವುಗೆ ಪಡೆದಿದ್ದು, ಸಿನಿಮಾ ದೊಡ್ಡ ಹೆಸರು ಮಾಡಲಿದೆ. ದೊಡ್ಡ ಬಜೆಟ್ ಸಿನಿಮಾ ದೊಡ್ಡ ‌ಮಟ್ಟದಲ್ಲಿ ಪ್ರದರ್ಶನ ಕಾಣಲಿದೆ. ಆಕ್ಷನ್, ಕುಟುಂಬ ಮನರಂಜನೆ, ಕುಟುಂಬ ಸಹಿತ ನೋಡಬಹುದಾದ ಈ ಸಿನಿಮಾ ಪ್ರೇಕ್ಷಕರ ಪ್ರೀತಿ, ವಿಶ್ವಾಸ ಗಳಿಸಲಿದೆ. ಸಿನಿಮಾ ಯಶಸ್ವಿಗೆ ಪ್ರೇಕ್ಷಕರು ಬಹುಮುಖ್ಯ. ಧೃವ ಸರ್ಜಾ ಪ್ರತಿಭಾವಂತ ನಟ. ಇನ್ನು ಎತ್ತರಕ್ಕೆ ಬೆಳೆಯಲಿ. ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಿದ ಹಿರಿಯ ನಟ ಡಾ. ರಾಜ್ ಕುಮಾರ್ ಅವರಂತೆ ಧೃವ ಸರ್ಜಾ ಸಹ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಹೆಸರು ಮಾಡಲಿ ಎಂದು ಶುಭಹಾರೈಸಿದರು.

    ಶುಭಹಾರೈಕೆಗಳ ಸುರಿಮಳೆ

    ಶುಭಹಾರೈಕೆಗಳ ಸುರಿಮಳೆ

    ಇದೇ ವೇಳೆ ವೇದಿಕೆ ಹಂಚಿಕೊಂಡ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾರ್ಚಾ ಮಾತನಾಡಿ, ಸಿನಿಮಾ ಹೆಸರೇ ಪೊಗರು. ಜೊತೆಗಿದ್ದಾರೆ ಟಗರು ಎಂದು ಸಿದ್ದರಾಮಯ್ಯ ಅವರ ಸೇರಿಕೊಂಡು ಹೇಳಿದರು. ನಾಡಿನ ಉತ್ತಮ ಚಿತ್ರವಾಗಿ ಹೊರಹೊಮ್ಮಲಿ ಎಂದು ಹಾರಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಮಾತನಾಡಿ, 'ಧ್ರುವ ಸರ್ಜಾ ಕನ್ನಡ ಚಿತ್ರರಂಗಕ್ಕೆ ಇನ್ನೂ ಹೆಚ್ಚಿನ ಉತ್ತಮ ಚಿತ್ರ ನೀಡಲಿ. ಫೆ. 19ರಂದು ತೆರೆ ಕಾಣಲಿರುವ ಚಿತ್ರವನ್ನು ಜನರು ವೀಕ್ಷಿಸುವ ಮೂಲಕ ಆಶೀರ್ವಾದ ಮಾಡಬೇಕು. ಚಿತ್ರ ಶತದಿನೋತ್ಸವ ಆಚರಿಸಲಿ' ಎಂದು ಆಶಿಸಿದರು. ಬಳಿಕ ಅವರಿಗೆ ಬೆಳ್ಳಿ ಕಿರೀಟ ತೊಡಿಸಿ ಅಭಿನಂದಿಸಲಾಯಿತು.

    ಸಂಸದ ಜಿ.ಎಂ.ಸಿದ್ದೇಶ್ವರ ಮಾತು

    ಸಂಸದ ಜಿ.ಎಂ.ಸಿದ್ದೇಶ್ವರ ಮಾತು

    ಸಂಸದ ಜಿ.ಎಂ. ಸಿದ್ದೇಶ್ವರ ಮಾತನಾಡಿ, 'ಚಿರಂಜೀವಿ ಸರ್ಜಾರ ಅವರನ್ನು ಸ್ಮರಿಸಿದರು. ನಾನು ಸಂಸದನಾದ ನಂತರ ದಾವಣಗೆರೆಯಲ್ಲಿ ಮೂರನೇ ಬಾರಿ ಚಿತ್ರವೊಂದರ ಆಡಿಯೊ ಬಿಡುಗಡೆ ನಡೆಯುತ್ತಿರುವುದು. ಪೊಗರು ಚಿತ್ರದ ಹಾಡೊಂದನ್ನುಇಡೀ ವಿಶ್ವದ್ಯಾಂತ 20 ಕೋಟಿ ಜನರು ವೀಕ್ಷಿಸಿರುವುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ನಮ್ಮ ತಂದೆ ಜಿ. ಮಲ್ಲಿಕಾರ್ಜುನಪ್ಪ ಅವರು 1969ರಲ್ಲಿ 'ಅರಿಶಿಣ ಕುಂಕುಮ' ಚಿತ್ರ ನಿರ್ಮಿಸಿದ್ದರು. ನಾನೂ ಆ ಚಿತ್ರದಲ್ಲಿ ಬಣ್ಣ ಹಚ್ಚಿ ಕುಳಿತಿದ್ದೆ' ಎಂದು ಸ್ಮರಿಸಿದರು.

    ಹುರಿದುಂಬಿಸಿದ ನಿರೂಪಕಿ ಅನುಶ್ರೀ

    ಹುರಿದುಂಬಿಸಿದ ನಿರೂಪಕಿ ಅನುಶ್ರೀ

    'ಪೊಗರು' ಆಡಿಯೊ ಬಿಡುಗಡೆ ಕಾರ್ಯಕ್ರಮಕ್ಕೆ ನಿರೂಪಕಿ ಅನುಶ್ರೀ ಅವರು ತಮ್ಮ ನವಿರಾದ ನಿರೂಪಣೆಯಿಂದ ಪ್ರೇಕ್ಷಕರನ್ನು ಹುರಿದುಂಬಿಸಿದರು. ' ನಮಸ್ಕಾರ ದಾವಣಗೆರೆ' ಎಂದು ಮಾತು ಆರಂಭಿಸುತ್ತಲೇ ಬೆಣ್ಣೆದೋಸೆ ನಗರಿ ಜನ ತುಂಬಾ ಹೃದಯವಂತರು, ಆದರೆ. ಅವರ ಮೇಲೆ ಎಗರಿದರೆ ದಾವಣಗೆರೆ ದಾಟಿ ಹೊರ ಹೋಗುವುದಕ್ಕೆ ಆಗೋದಿಲ್ಲ. ಅಷ್ಟು ಪೊಗರಿದೆ' ಎಂದು ಹೇಳಿ ಪಡ್ಡೆ ಹುಡುಗರು ಶಿಳ್ಳೆ ಹೊಡೆಯುವಂತೆ ಮಾಡಿದರು.

    English summary
    Pogaru audio release function happen in Davangere. Siddaramaiah, Arjun Sarja and many politicians and celebrities were participated in the function.
    Monday, February 15, 2021, 12:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X