»   » ಗುರುಪ್ರಸಾದ್ ಚಿತ್ರದಲ್ಲಿ ಪೂಜಾಗಾಂಧಿ ಐಟಂ ಡಾನ್ಸ್

ಗುರುಪ್ರಸಾದ್ ಚಿತ್ರದಲ್ಲಿ ಪೂಜಾಗಾಂಧಿ ಐಟಂ ಡಾನ್ಸ್

Posted By:
Subscribe to Filmibeat Kannada
'ದಂಡುಪಾಳ್ಯ' ಚಿತ್ರದಲ್ಲಿ ತಮ್ಮ ದುಂಡಗಿನ ಮೈಕೈಯನ್ನು ತೋರಿಸಿ ಅಮೋಘ ಅಭಿನಯ ನೀಡಿದ್ದ ತಾರೆ ಪೂಜಾಗಾಂಧಿ ಈಗ ಐಟಂ ಡಾನ್ಸ್ ಮಾಡಲು ಮುಂದಾಗಿದ್ದಾರೆ. ಮಾತಿನ ಮಲ್ಲ 'ಮಠ' ಗುರುಪ್ರಸಾದ್ ಮೂರು ವರ್ಷಗಳ ಹಿಂದೆಯೇ ಕೈಗೆತ್ತಿಕೊಂಡಿರುವ 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದಲ್ಲಿ ತಮ್ಮ ಸೊಂಟ ಕುಣಿಸಲಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಸರಿದಾಡುತ್ತಿದೆ.

ಈ ಚಿತ್ರದ ಕತೆ ಏನು, ಕಲಾವಿದರು ಯಾರು ಎಂಬ ಬಗ್ಗೆ ಗುರು ಇದುವರೆಗೂ ಗುಟ್ಟು ಬಿಟ್ಟುಕೊಟ್ಟಿಲ್ಲ. 'ಡೈರೆಕ್ಟರ್ಸ್ ಸ್ಪೆಷಲ್' ಚಿತ್ರದ ಐಟಂ ಹಾಡಿಗೆ ಪೂಜಾಗಾಂಧಿಗೆ ಆಫರ್ ಬಂದಿದೆ ಎಂಬ ಸುದ್ದಿ ಮಾತ್ರ ಇದೀಗ ಬಹಿರಂಗವಾಗಿದೆ.

ಸಾಮಾನ್ಯವಾಗಿ ಐಟಂ, ಬಾಟಂ ಸೀನ್ ಗಳಿಗೆ ಗುರು ಪ್ರಸಾದ್ ಅಷ್ಟಾಗಿ ಪ್ರಾಮುಖ್ಯತೆ ಕೊಡುವುದಿಲ್ಲ. ಏನಿದ್ದರೂ ಸಂಭಾಷೆಣೆಯಲ್ಲೇ ಕೊಚ್ಚಿ ಕೊಂದು ಹಾಕುತ್ತ್ತಾರೆ. ಯಾರಿಗೆ ಗೊತ್ತು ಈಗ ಅವರೂ ಬದಲಾಗಿರಬಹುದು. ತಮ್ಮ ಚಿತ್ರದಲ್ಲಿ ಐಟಂ ಹಾಡು ಇರಲಿ ಎಂಬ ಆಲೋಚನೆ ಅವರಿಗೂ ಬಂದಿರಬಹುದು.

ಈ ಹಾಡನ್ನು ಸ್ವತಃ ಅವರೇ ಬರೆದಿದ್ದು ಇನ್ನೆರಡು ವಾರಗಳಲ್ಲಿ ಶೂಟಿಂಗ್ ಕೂಡ ನಡೆಯಬಹುದು. ಮೂಲಗಳ ಪ್ರಕಾರ, ಚಿತ್ರದಲ್ಲಿನ ಐಟಂ ಹಾಡಿಗೆ ಪೂಜಾಗಾಂಧಿಗೆ ರು.5 ಲಕ್ಷ ಸಂಭಾವನೆ ನೀಡುವುದಾಗಿ ಹೇಳಲಾಗಿದೆ. ಈ ಹಾಡಿಗೆ ಪೂಜಾಗಾಂಧಿ ಒಪ್ಪಿದರೆ ರಂಗಾಯಣ ರಘು ಹೆಜ್ಜೆ ಹಾಕುವುದು ಗ್ಯಾರಂಟಿ ಎನ್ನಲಾಗಿದೆ.

ಈ ಚಿತ್ರದ ಮೂಲಕ ಗುರು ಪ್ರಸಾರ್ ಹೊಸಬ ಧನಂಜಯ ಎಂಬುವವರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ. ಐಟಂ ಡಾನ್ಸ್ ಬಗ್ಗೆ ಪೂಜಾಗಾಂಧಿ ಕೂಡ ಸುಳಿವು ಬಿಟ್ಟುಕೊಡುತ್ತಿಲ್ಲ. ಬಹಳಷ್ಟು ಆಫರ್ ಗಳು ಬರುತ್ತಿವೆ. ವಿಭಿನ್ನ ಪಾತ್ರಗಳಿಗೆ ಪ್ರಾಮುಖ್ಯತೆ ನೀಡುತ್ತಿದ್ದೇನೆ ಎಂದಿದ್ದಾರೆ. (ಏಜೆನ್ಸೀಸ್)

English summary
If the news to be belived actress Pooja Gandhi is likely to shake a leg to a special number in director Guruprasad’s much awaited flick, ‘Director’s Special’.
Please Wait while comments are loading...