»   » ಉತ್ತರ ಕರ್ನಾಟದಿಂದ ಅಖಾಡಕ್ಕೆ ಪೂಜಾಗಾಂಧಿ, ರಕ್ಷಿತಾ

ಉತ್ತರ ಕರ್ನಾಟದಿಂದ ಅಖಾಡಕ್ಕೆ ಪೂಜಾಗಾಂಧಿ, ರಕ್ಷಿತಾ

Posted By:
Subscribe to Filmibeat Kannada

ಬಿಎಸ್ಆರ್ ಕಾಂಗ್ರೆಸ್ ಪಕ್ಷಕ್ಕೆ ಇವರಿಬ್ಬರನ್ನು ಸಂಭಾಳಿಸುವುದೇ ದೊಡ್ಡ ತಲೆನೋವಾಗಿದೆ. ಈ ಬಾರಿಯ ವಿಧಾನಸಭೆ ಚುನಾವಣೆಗೆ ಸಿನಿಮಾ ತಾರೆಗಳಾದ ಪೂಜಾಗಾಂಧಿ ಹಾಗೂ ರಕ್ಷಿತಾ ಅವರನ್ನು ಕಣಕ್ಕಿಳಿಸಲು ಬಿಎಸ್ಆರ್ ಕಾಂಗ್ರೆಸ್ ಮುಂದಾಗಿದೆ.

ಇವರಿಬ್ಬರನ್ನೂ ಯಾವ ಕ್ಷೇತ್ರದಿಂದ ಕಣಕ್ಕಿಳಿಸಿದರೆ ಗೆಲ್ಲುವ ಚಾನ್ಸಸ್ ಹೆಚ್ಚಾಗಿ ಎಂಬ ಬಗ್ಗೆ ತಲೆಕೆಡಿಸಿಕೊಳ್ಳುತ್ತಿದೆ. ಇಬ್ಬರನ್ನೂ ಉತ್ತರ ಕರ್ನಾಟಕದಿಂದ ಚುನಾವಣಾ ಕಣಕ್ಕಿಳಿಸಲು ಪಕ್ಷದ ಮುಖಂಡರು ಚಿಂತಿಸಿದ್ದಾರೆ.


ರಕ್ಷಿತಾ ಅವರೇನೋ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲು ಆಸಕ್ತಿ ತೋರಿಸಿದ್ದಾರೆ ಎನ್ನಲಾಗಿದೆ. ಆದರೆ ಪೂಜಾಗಾಂಧಿ ಮಾತ್ರ ಉ.ಕ ಒಲ್ಲೆ ಎಂದಿದ್ದಾರಂತೆ. ಅವರು ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಿಂದ ಕಣಕ್ಕಿಳಿಯಲು ಆಸಕ್ತಿ ತೋರಿಸಿದ್ದಾರಂತೆ.

ಹಾಗಾಗಿ ರಕ್ಷಿತಾ ಅವರನ್ನು ಗದಗ ಜಿಲ್ಲೆಯ ನರಗುಂದ, ಬಾಗಲಕೋಟೆಯ ಬಾದಾಮಿ ಅಥವಾ ಹುನಗುಂದ ಕ್ಷೇತ್ರದಿಂದ ಕಣಕ್ಕಿಳಿಸುವ ಸಾಧ್ಯತೆಗಳಿವೆ. ಇನ್ನು ಮಳೆ ಹುಡುಗಿ ಪೂಜಾಗಾಂಧಿ ಅವರನ್ನು ರಾಯಚೂರು ಕ್ಷೇತ್ರದಿಂದ ಕಣಕ್ಕಿಳಿಸಲು ತೀರ್ಮಾನಿಸಿದ್ದಾರೆ.

ಒಂದು ವೇಳೆ ರಾಯಚೂರು ಒಲ್ಲೆ ಎಂದರೆ ಪೂಜಾಗಾಂಧಿ ಅವರನ್ನು ಬೆಂಗಳೂರಿನ ಯಶವಂತಪುರ, ರಾಜರಾಜೇಶ್ವರಿ ನಗರದಿಂದ ಅಖಾಡಕ್ಕಿಳಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಶೀಘ್ರದಲ್ಲೇ ಈ ಬಗ್ಗೆ ಪ್ರಕಟಣೆ ಹೊರಬೀಳುವ ಸಾಧ್ಯತೆಗಳಿವೆ. (ಏಜೆನ್ಸೀಸ್)

English summary
Kannada actresses Pooja Gandhi and Rakshita both to contest from North Karnataka for upcoming assembly elections in Karnataka. Probably BSR Congress party fields Pooja Gandhi from Raichur and Rakshita from Naragunda, Badami or Hunagunda constitutions.
Please Wait while comments are loading...