»   » ಮೈಸೂರಿನಲ್ಲಿ ಪೂನಂ ಪಾಂಡೆ ಮಿಂಚಿನ ಸಂಚಾರ

ಮೈಸೂರಿನಲ್ಲಿ ಪೂನಂ ಪಾಂಡೆ ಮಿಂಚಿನ ಸಂಚಾರ

Posted By:
Subscribe to Filmibeat Kannada

ಹೊಸ ವರ್ಷಕ್ಕೆ ಬೆಂಗಳೂರಿನಲ್ಲಿ ಕುಣಿದು ಹೋಗಿದ್ದ ಬಾಲಿವುಡ್ ತಾರೆ ಪೂನಂ ಪಾಂಡೆ ಇದೀಗ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ತಮ್ಮ ಚೊಚ್ಚಲ ಕನ್ನಡ ಚಿತ್ರ 'ಲವ್ ಈಸ್ ಪಾಯಿಸನ್' ಚಿತ್ರ ಇದೇ ಶುಕ್ರವಾರ (ಜೂ.20) ರಾಜ್ಯದಾದ್ಯಂತ ತೆರೆಕಾಣುತ್ತಿದೆ. ತಮ್ಮ ಚಿತ್ರದ ಪ್ರಚಾರಕ್ಕಾಗಿ ರಾಜ್ಯದಲ್ಲಿ ಪ್ರವಾಸ ಕೈಗೊಂಡಿದ್ದಾರೆ ಪೂನಂ.

ಮಂಗಳವಾರ (ಜೂ.17) ರಾತ್ರಿ ಮುಂಬೈನಿಂದ ಬೆಂಗಳೂರಿಗೆ ಬಂದಿಳಿದ ಪೂನಂ ಪಾಂಡೆ ಅಲ್ಲಿಂದ ಸೀದಾ ಮೈಸೂರಿಗೆ ಪ್ರಯಾಣ ಬೆಳಸಿದರು. ಬೆಳಗ್ಗೆ ಚಾಮುಂಡೇಶ್ವರಿ ದರ್ಶನ ಪಡೆದು ಬಳಿಕ ಇಡ್ಲಿ ವಡೆ ಚಟ್ನಿಯನ್ನು ಚಪ್ಪರಿಸಿ ತಿಂದು ಚಕಿತರಾಗಿದ್ದಾರೆ. [ಪೂನಂ ಪಾಂಡೆ ಕನ್ನಡ ಐಟಂ ಹಾಡಿನ ಚಿತ್ರಗಳು]

ಬಳಿಕ ಚಿತ್ರದ ನಾಯಕ ನಟ ರಾಜೇಶ್ ಅವರನ್ನು ನೆನೆದು ಕಣ್ಣೀರಾಗಿದ್ದಾರೆ. ದುರಂತ ಸಾವಪ್ಪಿದ ಚಿತ್ರದ ನಾಯಕ ನಟ ಹಳ್ಳಿಹೈದ ರಾಜೇಶ್ ಅವರ ತಂದೆತಾಯಿಯನ್ನು ಭೇಟಿಯಾಗಿ ಅವರಿಗೆ ಸಾಂತ್ವನದ ಮಾತುಗಳನ್ನು ಆಡಿದರು. ಅಲ್ಲಿಂದ ಅವರು ಬೆಂಗಳೂರಿಗೆ ವಾಪಸ್ ಬಂದು ನಾಲ್ಕು ದಿನಗಳ ಕಾಲ ಅವರು 'ಲವ್ ಈಸ್ ಪಾಯಿಸನ್' ಚಿತ್ರದ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ. [ಪೂನಂಗೂ ಫುಟ್ಟಾಲ್ ಫೀವರ್, ಬಿಕಿನಿ ಡ್ಯಾನ್ಸ್]

ಪೂನಂ ಪಾಂಡೆಗೆ ನಾಯಕಿ ಖುಷಿ ಸಾಥ್

ಪ್ರಚಾರ ಕಾರ್ಯದಲ್ಲಿ ಪೂನಂ ಪಾಂಡೆ ಅವರಿಗೆ ಚಿತ್ರದ ನಾಯಕಿ ಖುಷಿಗಡವಿ ಅವರು ಸಾಥ್ ನೀಡಲಿದ್ದಾರೆ. ಒಟ್ಟು ಐದು ನಗರಗಳಲ್ಲಿ ಪೂನಂ ಪಾಂಡೆ ಮಿಂಚಿನ ಸಂಚಾರ ಮಾಡಲಿದ್ದಾರೆ.

rn

ಐದು ನಗರಗಳಲ್ಲಿ ಪೂನಂ ಮಿಂಚಿನ ಸಂಚಾರ

ಚಿತ್ರಂಡದ ಜೊತೆಗೆ ಪೂನಂ ಪಾಂಡೆ ಅವರು ಮೈಸೂರು, ಬೆಂಗಳೂರು, ತುಮಕೂರು, ಹುಬ್ಬಳ್ಳಿ, ಹಾವೇರಿಯಲ್ಲಿ ತಮ್ಮ ಚಿತ್ರದ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ ಎನ್ನುತ್ತಾರೆ ಚಿತ್ರದ ನಿರ್ಮಾಪಕರು ಕೇಶವಮೂರ್ತಿ.

ಬರುವ ಲಾಭ ರಾಜೇಶ್ ಅವರ ತಂದೆತಾಯಿಗೆ

ಪೂನಂ ಪಾಂಡೆ ಅವರು ಮೊದಲೇ ಅಗ್ರಿಮೆಂಟ್ ಗೆ ಸಹಿಹಾಕಿದ್ದರು. ಹಾಗಾಗಿ ಅವರು ಈಗ ಪ್ರಚಾರಕ್ಕೆ ಬಂದಿದ್ದಾರೆ. ಇದರಲ್ಲಿ ಬೇರೆ ಯಾವುದೇ ಗಿಮ್ಮಿಕ್ಕು, ದುರುದ್ದೇಶವಿಲ್ಲ. ಯಾವುದೇ ಲಾಭಾಪೇಕ್ಷೆಗಳನ್ನಿಟ್ಟುಕೊಂಡು ನಾವು ಈ ಚಿತ್ರವನ್ನು ತೆರೆಗೆ ತರುತ್ತಿಲ್ಲ. ಚಿತ್ರದಿಂದ ಬರುವ ಲಾಭವನ್ನು ರಾಜೇಶ್ ಅವರ ತಂದೆತಾಯಿ ಅವರ ಮಡಿಲಿಗೆ ಹಾಕುತ್ತೇವೆ ಎಂದಿದ್ದಾರೆ ನಿರ್ಮಾಪಕರು.

ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಪೂನಂ

ಪೂನಂ ಪಾಂಡೆ ಅವರಿಗೆ ಬೆಂಗಳೂರಿನ ಪಂಚತಾರಾ ಹೋಟೆಲ್ ನಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಭದ್ರತೆ ಕಾರಣದಂದ ಹೋಟೆಲ್ ಹೆಸರನ್ನು ಗೋಪ್ಯವಾಗಿಟ್ಟಿದ್ದೇವೆ ಎನ್ನುತ್ತಾರೆ ನಿರ್ಮಾಪಕರು.

ಬೌನ್ಸರ್ ಗಳು, ಗನ್ ಮೆನ್ ಗಳ ಜೊತೆಗೆ ಪೂನಂ

ಬೌನ್ಸರ್ಸ್ ಸಹ ನೇಮಿಸಿಕೊಳ್ಳಲಾಗಿದೆ. ಜೊತೆ ಅವರದೇ ಆದ ಭದ್ರತಾ ಸಿಬ್ಬಂದಿಯೂ ಇರುತ್ತಾರೆ. ಅವರ ಇಬ್ಬರು ಗನ್ ಮೆನ್ ಗಳು ಜೊತೆಗಿರುತ್ತಾರೆ. ಅವರಿಗೆ ವಸತಿ ಸೌಕರ್ಯ, ಪ್ರಯಾಣದ ಖರ್ಚು ವೆಚ್ಚಗಳನ್ನು ನಾವೇ ಭರಿಸುತ್ತಿದ್ದೇವೆ ಎನ್ನುವ ಕೇಶವಮೂರ್ತಿ ಅವರು

ಕೇಶವಮೂರ್ತಿ ಅವರ ಚೊಚ್ಚಲ ಕಾಣಿಕೆ ಇದು

ಇನ್ನು ಲವ್ ಈಸ್ ಪಾಯಿಸನ್ ಚಿತ್ರದ ವಿವರಗಳನ್ನು ನೋಡುವುದಾದರೆ, ಆಕಾಶ್ ಎಂಟರ್ ಪ್ರೈಸಸ್ ಲಾಂಛನದಡಿಯಲ್ಲಿ ಕೆ.ಸೋಮಶೇಖರ್ ಹಾಗೂ ಕೇಶವ ಮೂರ್ತಿ ನಿರ್ಮಿಸುತ್ತಿರುವ ಚೊಚ್ಚಲ ಕಾಣಿಕೆ 'ಲವ್ ಈಸ್ ಪಾಯಿಸನ್'.

ಚಿತ್ರಕಥೆ ಮತ್ತು ನಿರ್ದೇಶನ ನಂದನ ಪ್ರಭು

ಚಿತ್ರಕ್ಕೆ ರವಿಶಂಕರನಾಗ್ ಸಾಹಿತ್ಯ ಸಂಭಾಷಣೆ, ವೀನಸ್ ಮೂರ್ತಿ ಛಾಯಾಗ್ರಹಣ, ಸಾಯಿಕಿರಣ್ ಸಂಗೀತ, ಸಂಕರ್, ಸಧಾ, ರಘು ನೃತ್ಯ, ಉಮೇಶ್ ತಿಪಟೂರು ನಿರ್ದೇಶನ ಸಹಕಾರ, ವೇಣು ನಿರ್ಮಾಣ ಮೇಲ್ವಿಚಾರಣೆ, ಈಶ್ವರ್ ಸಂಕಲನ, ಥ್ರಿಲ್ಲರ್ ಮಂಜು ವಿಕ್ರಂ, ಸಾಹಸವಿದ್ದು, ಚಿತ್ರದ ಚಿತ್ರಕಥೆ ಮತ್ತು ನಿರ್ದೇಶನ ನಂದನ ಪ್ರಭು.

ತಾರಾಗಣದಲ್ಲಿ ಯಾರೆಲ್ಲಾ ಇದ್ದಾರೆ?

ತಾರಾಗಣದಲ್ಲಿ ರಾಜೇಶ್, ಖುಷಿ, ದೂಹಿ, ಚಂದ್ರು, ಸಾಧುಕೋಕಿಲ, ಬುಲೆಟ್ ಪ್ರಕಾಶ್, ಹೊನ್ನವಳ್ಳಿ ಕೃಷ್ಣ, ಬಿರಾದಾರ್, ಪದ್ಮಾವಾಸಂತಿ, ನಾಗಮಂಗಲ ಜಯರಾಂ ಮುಂತಾದವರಿದ್ದಾರೆ.

English summary
'Jungle Jackie' Rajesh acted last Kannada movie 'Love is Poison' all set to release on 20th June, 2014. Actress Poonam Pandey done a special song in this movie. She arrived Bangalore on 17th June, Tuesday night and will be here for four days.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada