For Quick Alerts
  ALLOW NOTIFICATIONS  
  For Daily Alerts

  ಕನ್ನಡ ಐಟಂ ಹಾಡಿಗೆ ಬಿಚ್ಚಮ್ಮ ಪೂನಂ ಪಾಂಡೆ ಎಂಟ್ರಿ

  By Rajendra
  |

  ಪೂನಂ ಪಾಂಡೆ ಹೆಸರು ಕೇಳಿದರೆ ಸಾಕು ಪಡ್ಡೆಗಳು ಅರ್ಧ ರಾತ್ರಿಯಲ್ಲೂ ಬೆವರಾಡುತ್ತಾರೆ. ಯೂಟ್ಯೂಬ್, ಟ್ವಿಟ್ಟರ್ ಗಳಲ್ಲಿ ಇರೋಬರೋ ವಸ್ತ್ರಗಳನ್ನೆಲ್ಲಾ ಕಳಚಿ ಬಿಸಾಡಿ ಸುದ್ದಿ ಮಾಡಿದ ತಾರೆ ಈಕೆ. ಈಗ ಕನ್ನಡಕ್ಕೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ. ಈ ಹಿಂದೊಮ್ಮೆ ಈಕೆ ಬರುತ್ತಾರೆ ಎಂಬ ಸುದ್ದಿ ಇತ್ತು.

  ಆದರೆ ಚಿತ್ರದ ನಿರ್ದೇಶಕರಿಗೇನೋ ಆಕೆಯನ್ನು ಕರೆತರುವ ತುಡಿತವಿತ್ತು. ಆದರೆ ಚಿತ್ರದ ನಾಯಕ ನಟ ತಮ್ಮ ಚಿತ್ರದಲ್ಲಿ ಇಬ್ಬರೂ ಡರ್ಟಿ ಗರ್ಲ್ಸ್ ಆದರೆ ಚಿತ್ರ ಡರ್ಟಿ ಆಗಿ ಎಕ್ಕುಟ್ಟಿ ಹೋಗುತ್ತದೆ ಎಂದಿದ್ದರು. ಹಾಗಾಗಿ ಈ ಸುದ್ದಿ ಅರೆಜೀವವಾಗಿ ಗಾಂಧಿನಗರಲ್ಲಿ ಹರಿದಾಡುತ್ತಿತ್ತು. ನಾವೀಗ ಮಾತನಾಡುತ್ತಿರುವುದು ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಚಿತ್ರದ ಬಗ್ಗೆ.

  ಈಗಾಗಲೆ ಈ ಚಿತ್ರದಲ್ಲಿ ಪಾಕಿಸ್ತಾನಿ ತಾರೆ ವೀಣಾ ಮಲಿಕ್ ಬಂದು ತಮ್ಮ ಸೊಂಟ ಕುಣಿಸಿ ಹೋಗಿದ್ದಾರೆ. ಈಗ ಮತ್ತೊಬ್ಬ ಪಾಕಿಸ್ತಾನಿ ತಾರೆಯನ್ನು ತರುವ ಸಿದ್ಧತೆಗಳನ್ನು ಚಿತ್ರತಂಡ ಮಾಡಿಕೊಂಡಿದೆ. ಈಕೆ ಇನ್ನೂ ಪಾಕಿಸ್ತಾನದಲ್ಲಿ ಅಷ್ಟಾಗಿ ಜನಪ್ರಿಯವಾಗಿಲ್ಲವಂತೆ. ಈಗಷ್ಟೇ ಇನ್ನೂ ಚಿಗುರಿಕೊಳ್ಳುತ್ತಿರುವ ಚಿಗುರು ತಾರೆ.

  ಇದರ ಜೊತೆಜೊತೆಗೆ ಪೂನಂ ಪಾಂಡೆಗೂ ಒಂದು ಕಲ್ಲು ಬೀಸಿದ್ದಾರೆ ಚಿತ್ರದ ನಿರ್ದೇಶಕರು. ಸದ್ಯಕ್ಕೆ ಸಂಭಾವನೆ ವಿಚಾರವಾಗಿ ಮಾತುಕತೆ ನಡೆಯುತ್ತಿದೆ. ಇಬ್ಬರೂ ಒಮ್ಮತಕ್ಕೆ ಬಂದರೆ ಪೂನಂ ಪಾಂಡೆ ರಾಜ್ಯಕ್ಕೆ ಅಡಿಯಿಡುವುದು ಗ್ಯಾರಂಟಿ ಆಗಲಿದೆ. ಅಲ್ಲಿಯವರೆಗೂ ಏನೂ ಹೇಳಲು ಸಾಧ್ಯವಿಲ್ಲ.

  ಈ ಹಾಡಿಗೆ ಸಾಹಿತ್ಯ ರಚಿಸುತ್ತಿರುವವರು 'ಪಂಚರಂಗಿ' ಯೋಗರಾಜ್ ಭಟ್. ಈಗಾಗಲೆ ಅವರು ತಮ್ಮ 'ಡ್ರಾಮಾ' ಶೂಟಿಂಗ್ ನಲ್ಲಿ ಬಿಜಿಯಾಗಿದ್ದುಕೊಂಡೇ ಈ ಹಾಡಿಗಾಗಿ ಪೆನ್ನು ಪೇಪರ್ ಹಿಡಿದು ಕೂತಿದ್ದಾರಂತೆ. ಇದು ಒಂಥರಾ ಕನ್ನಡ ಮತ್ತು ಹಿಂದಿ ಮಿಶ್ರಿತ ಹಾಡಂತೆ.

  ಐದು ದಿನಗಳ ಶೂಟಿಂಗ್ ಗೆ ಪೂನಂ ಪಾಂಡೆ ರು.50 ಲಕ್ಷ ಸಂಭಾವನೆ ಕೇಳಿದ್ದಾರಂತೆ. ನೀವು ಹೇಳಿದಂತೆ ಕುಣೀತೀನಿ. ಯಾವ ಡ್ರೆಸ್ ಬೇಕೋ ಅದನ್ನೇ ಹಾಕಿಕೊಳ್ಳುತ್ತೇನೆ ಎಂದಿದ್ದಾರಂತೆ. ಆದರೆ ಚೌಕಾಸಿ ವ್ಯಾಪಾರ ಇನ್ನೂ ಕುದುರಿಲ್ಲ. ಚಿತ್ರದ ನಿರ್ಮಾಪಕರು ಐವತ್ತು ಲಕ್ಷ ಎಣಿಸಿದರೆ ಪೂನಂ ಗಾಂಧಿನಗರಕ್ಕೆ ಎಂಟ್ರಿ ಕೊಡುತ್ತಾರೆ.

  ಏನಿದು ಡರ್ಟಿ ಪಿಕ್ಚರ್: ದಕ್ಷಿಣ ಭಾರತದ ಅಂದಕಾಲತ್ತಿಲ್ ನಟಿ ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ಈ ಭಾರಿ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿರುವವರು ವೆಂಕಟಪ್ಪ. ಈ ಚಿತ್ರಕ್ಕಾಗಿ ವೀಣಾರಿಗೆ ರು.70ರಿಂದ 80 ಲಕ್ಷ ಸಂಭಾವನೆ ನೀಡಿದ್ದಾರೆ. ಚಿತ್ರದ ನಾಯಕ ನಟ ಅಕ್ಷಯ್. (ಏಜೆನ್ಸೀಸ್)

  English summary
  'Dirty Picture - Silk Sakkath Maga' is back in news as director Trishul gets ready to shoot for two item songs for his film. Even Poonam Pandey has agreed. Only the remuneration has to be discussed and we will sign.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X