For Quick Alerts
ALLOW NOTIFICATIONS  
For Daily Alerts

  ಡಿ.31ರ ರಾತ್ರಿ ಬೆಂಗಳೂರಲ್ಲಿ ಪೂನಂ ಏರಿಸಲಿದ್ದಾಳೆ ನಶಾ

  By ರಸಿಕ
  |

  ಡಿಸೆಂಬರ್ ತಿಂಗಳ ಕೊರೆಯುವ ಚಳಿಗೆ ಬೆಂಗಳೂರಿನ ಜನರು ಬೆಚ್ಚಿಬಿದ್ದಿದ್ದಾರೆ. ಬೆಳಿಗ್ಗೆ ಹತ್ತು ಗಂಟೆಯಾದರೂ ಹಾಕಿಕೊಂಡ ಸ್ವೆಟರ್, ಮಫ್ಲರನ್ನು ಜನರು ತೆಗೆಯಲು ಹಿಂಜರಿಯುತ್ತಿದ್ದಾರೆ. ಇಂಥಾ ಚಳಿ ಇತ್ತೀಚಿನ ವರ್ಷಗಳಲ್ಲಿ ನೋಡೇ ಇಲ್ಲ ಎಂದು ಹಲ್ಲುಗಳನ್ನು ಕಟಕಟಿಸುತ್ತ ಜನರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ಮೈಯಲ್ಲಿ ಹೊಕ್ಕಿರುವ ಚಳಿಯನ್ನು ಒದ್ದೋಡಿಸುವಂಥ ಸುದ್ದಿಯೊಂದು ಮೊಳಕೆಯೊಡೆದಿದೆ.

  ಅದೇನೆಂದರೆ, ಕನ್ನಡದ 'ಲವ್ ಈಸ್ ಪಾಯ್ಸನ್' ಚಿತ್ರದಲ್ಲಿ ಕನಿಷ್ಠ ಬಟ್ಟೆಯಲ್ಲಿ ಐಟಂ ಹಾಡಿಗೆ ಮೈನವಿರೇಳಿಸುವಂತೆ ಕುಣಿದಿರುವ ಬಾಲಿವುಡ್ ಬಿಂದಾಸ್ ಬೆಡಗಿ ಪೂನಂ ಪಾಂಡೆ ಅವರು 2013ರ ಕೊನೆಯ ದಿನದಂದು ಮೊತ್ತಮೊದಲ ಬಾರಿಗೆ ಲೈವ್ ಪರ್ಫಾರ್ಮನ್ಸ್ ನೀಡುತ್ತಿದ್ದಾರೆ. ಲವ್ ಈಸ್ ಪಾಯ್ಸನ್ ಚಿತ್ರದ ಹಾಡಿಗೇ ಪೂನಂ ಅವರು ಕುಣಿಯಲಿದ್ದಾರೆ, ಅಭಿಮಾನಿಗಳನ್ನು ಕುಣಿಸಲಿದ್ದಾರೆ.

  ಪಡ್ಡೆಗಳಿಗೆ ಈ ಸಂಗತಿ ಚಳಿಗುಳ್ಳೆಗಳೇಳುವಂತೆ ಮಾಡಿದೆ. ಕನಕಪುರ, ಬನ್ನೇರುಘಟ್ಟ ರಸ್ತೆರಸ್ತೆಗಳಲ್ಲಿ ಈ ಕಾರ್ಯಕ್ರಮದ ಹೋರ್ಡಿಂಗ್ ಗಳನ್ನು ನೋಡಿ ಪುಳಕಿತರಾಗುತ್ತಿದ್ದಾರೆ. ಈಪಾಟಿ ನೋಡೇಬಿಡೋಣ ಅಂತ ಹೋರ್ಡಿಂಗ್ ಮೇಲೆ ನೀಡಿದ್ದ ನಂಬರುಗಳಿಗೆ ಪಡ್ಡೆಗಳು ಡಯಲ್ ಮಾಡಿ, ಫ್ರೀಪಾಸ್ ಸಿಗುತ್ತೇನೋ ಅಂತ ವಿಚಾರಿಸಿ, ನಂತರ ಪೆಚ್ಚುಮುಖ ಹಾಕಿಕೊಂಡು ಹೋರ್ಡಿಂಗ್ ನಲ್ಲಿನ ಚಿತ್ರನೋಡಿ ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. [ಪೂನಂ ಐಟಂ ಹಾಡಿನ ಚಿತ್ರಗಳು]

  ಈ ಕಾರ್ಯಕ್ರಮ ಎಲ್ಲಿ ನಡೆಯುತ್ತಿದೆ, ಎಂತೆಂಥ ಡಾನ್ಸ್ ಗಳಿರುತ್ತವೆ, ಯಾರ್ಯಾರು ಹೋಗಬಹುದು, ಯಾರನ್ನು ಕರೆದುಕೊಂಡು ಹೋಗಬಹುದು, ಎಷ್ಟೊತ್ತಿಂದ ಎಷ್ಟೊತ್ತಿನವರೆಗೆ ಪೂನಂ ಅಭಿಮಾನಿಗಳನ್ನು ರಂಜಿಸಲಿದ್ದಾಳೆ, ಪಾಸ್ ಗಳಿಗೆ ಟಿಕೆಟ್ ಎಷ್ಟು, ಅಲ್ಲಿ ಮತ್ತೆ ಏನೇನು ಸಿಗಲಿದೆ ಎಂಬ ಸಂಗತಿಗಳನ್ನು ಮುಂದೆ ಸ್ಲೈಡ್ ಗಳಲ್ಲಿ ನೋಡಿ ತಿಳಿಯಿರಿ. [ಎಲ್ಲಾ ಓಕೆ ಪೂನಂ ಯಾಕೆ]

  ಪೂನಂ ಪಾಂಡೆ ಲೈವ್ ಎಲ್ಲಿ?

  ಜೆಪಿ ನಗರದ 9ನೇ ಹಂತದಲ್ಲಿರುವ ಕ್ಯಾಪಿಟಲ್ ಕ್ಲಬ್ ರೆಸಾರ್ಟ್ ನಲ್ಲಿ ಡಿಸೆಂಬರ್ 31ರ ಮಂಗಳವಾರ ಸಂಜೆ 7.30ಕ್ಕೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆ ಆರಂಭವಾದರೆ ಕಾರ್ಯಕ್ರಮ ಮುಗಿಯುವುದು ರಾತ್ರಿ 1 ಗಂಟೆಗೆ. ಆದರೆ, ಮರುದಿನ ಬೆಳಿಗ್ಗೆ ಹ್ಯಾಪಿ ನ್ಯೂ ಇಯರ್ ಎಂದು ಅಕ್ಕಪಕ್ಕದವರು ಹ್ಯಾಂಡ್ ಶೇಕ್ ಮಾಡಿದಾಗಲೆ.

  ಪೂನಂ ಪಡೆಯುತ್ತಿರುವುದು ಎಷ್ಟು ಗೊತ್ತಾ?

  ಲವ್ ಈಸ್ ಪಾಯ್ಸನ್ ಚಿತ್ರದ ಹಾಡಿಗೆ ನರ್ತಿಸುವುದರ ಜೊತೆಗೆ ಬೆಲ್ಲಿ ಡಾನ್ಸ್, ಬಾಲಿವುಡ್ ಚಿತ್ರಗಳ ಜನಪ್ರಿಯ ಹಾಡಿಗೆ ಸುಂದರಿಯರು ಪುಳಕಿಸುವ ದಿರಿಸು ಧರಿಸಿ ನರ್ತಿಸುವುದನ್ನು ನೋಡುವ ಅವಕಾಶ ನೋಡುಗರಿಗೆ ದೊರೆಯಲಿದೆ. ಈ ಒಂದು ಹಾಡಿಗೆ ಪೂನಂ ಪಾಂಡೆ ಪಡೆದದ್ದು ಎಷ್ಟು ಗೊತ್ತಾ? ಬರೋಬ್ಬರಿ 1 ಕೋಟಿ ರು.!

  ಪೂನಂ ಡಾನ್ಸ್ ನೋಡಬೇಕಿದ್ದರೆ...

  ಪೂನಂ ಪಾಂಡೆಗೇ 1 ಕೋಟಿ ರು. ಕೊಟ್ಟಮೇಲೆ ಜನರಿಂದ ಕೀಳದೆ ಬಿಡುತ್ತಾರೆಯೆ? ಗಂಡ ಹೆಂಡತಿ, ಹುಡುಗ ಹುಡುಗಿ ಅಥವಾ ಏಕಾಂಗಿಯಾಗಿ ಸ್ನೇಹಿತರೊಂದಿಗೆ ಹೋಗಿ ಮಜಾ ತೆಗೆದುಕೊಳ್ಳಬಹುದು. ಕಪಲ್‌ಗೆ ಅಂದರೆ ಪುರುಷನ ಜೊತೆ ಹೆಂಡತಿಯೂ ಇರಬಹುದು ಅಥವಾ ಯಾವುದೇ ಮಹಿಳೆಯೂ ಇರಬಹುದು, ಜೋಡಿಗೆ 6,000 ರು. (ಸೊನ್ನೆ ಸರಿಯಾಗಿ ಎಣಿಸಿಕೊಳ್ಳಿ).

  ಡಿಸ್ಕೌಂಟ್ ಏನಾದ್ರೂ ಸಿಗತ್ತಾ?

  ಇನ್ನು ಏಕಾಂಗಿಯಾಗಿ ಹೋದರೆ ಪ್ರತಿ ವ್ಯಕ್ತಿಗೆ 5,000 ರು.! ಏನ್ರೀ ಕಪಲ್‌ಗೆ 6 ಸಾವಿರ ರು. ಒಬ್ಬಂಟಿಗೇಕೆ 5 ಸಾವಿರ ರು. ಅಂತ ವಿಚಾರಿಸಿದರೆ, 'ಕಚೇರಿಗೆ ಬನ್ನಿ ಸಾರ್ ಸ್ವಲ್ಪ ಡಿಸ್ಕೌಂಟ್ ಕೊಡೋಣ. ಬೇಕಿದ್ರೆ ನಾಲ್ಕೂವರೆ ಸಾವಿರ ಕೊಡಿ, ಅದಕ್ಕಿಂತ ಕಡಿಮೆ ಕೊಡೋಕೆ ಆಗಲ್ಲ, ಎಷ್ಟು ಜನ ಬರ್ತೀರಿ' ಅಂತ ಮಹಿಳೆಯೊಬ್ಬಳು ಬಡಬಡ ಬಡಕೊಳ್ಳುತ್ತಾಳೆ.

  ತಿನ್ನಲು, ಕುಡಿಯಲು ಏನೇನು ಸಿಗಲಿದೆ?

  ಇಷ್ಟೆಲ್ಲ ದುಡ್ಡು ತೆತ್ತರೆ ಏನೇನು ಬೇಕೋ ಬೇಡವೋ ಎಲ್ಲವೂ ಅಲ್ಲಿ ಸಿಗಲಿದೆ. ಪೂನಂ ಪಾಂಡೆ ವೇದಿಕೆಯ ಮೇಲೆ ಮೈಮರೆತು ನರ್ತಿಸುತ್ತಿದ್ದರೆ, ಅಭಿಮಾನಿಗಳೂ ಹೆಜ್ಜೆ ಹಾಕಬಹುದು. ಜೊತೆಗೆ ಅನ್‌ಲಿಮಿಡೆಟ್ ವೆಜ್, ನಾನ್-ವೆಜ್ ಪುಷ್ಕಳ ಭೋಜನ, ಅನ್‌ಲಿಮಿಟೆಡ್ ಕಾಕ್‌ಟೇಲ್, ಅನ್‌ಲಿಮಿಟೆಡ್ ಗುಂಡು. ಇನ್ನೇನು ಬೇಕು? ಪೊಲೀಸ್ ಅಧಿಕಾರಿಗಳೇ ಪ್ಲೀಸ್ ಕೀಪ್ ಅ ವಾಚ್!

  ಪೂನಂ ನಶೆಯಲ್ಲಿ ಕಳೆದುಹೋಗಬೇಡಿ

  ಕುಣಿತ ನೋಡಿ, ಮನಸೋಇಚ್ಛೆ ಕುಡಿದು ಕುಪ್ಪಳಿಸಿದ ನಂತರ ಮನೆಗೆ ಮರಳಲೇಬೇಕಲ್ಲ? ವಾಹನ ಓಡಿಸುವಾಗ ಎಚ್ಚರವಿರಲಿ, ಪೂನಂ ಪಾಂಡೆ ಏರಿಸಿದ 'ನಶೆ'ಯಲ್ಲಿ ವಾಹನ ಚಲಾಯಿಸಬೇಡಿ, ಜೊತೆಗೆ ಕುಡಿಯದವರು ಇದ್ದರೆ ಒಳ್ಳೆಯದೇನು, ಇರಲೇಬೇಕು. ಇಲ್ಲದಿದ್ದರೆ ಪೊಲೀಸರು ದಂಡ ಹಾಕುತ್ತಾರೆ ಹುಷಾರ್! ಎಲ್ಲಕ್ಕಿಂತ ನಿಮ್ಮ ಪ್ರಾಣ, ಹೆಂಗಸರ ಮಾನ ಎಲ್ಲಕ್ಕಿಂತ ಮುಖ್ಯ, ಎಚ್ಚರ!

  ಲವ್ ಈಸ್ ಪಾಯ್ಸನ್ ಯಾವಾಗ ಬಿಡುಗಡೆ?

  ಪೂನಂ ಪಾಂಡೆ ನರ್ತಿಸಿರುವ ಲವ್ ಈಸ್ ಪಾಯ್ಸನ್ ಚಿತ್ರದ ನಾಯಕನಾಗಿದ್ದ 'ಹಳ್ಳಿ ಹೈದ ಪ್ಯಾಟೆಗ್ ಬಂದ' ಖ್ಯಾತಿಯ ರಾಜೇಶ್ ಕೆಲ ದಿನಗಳ ಹಿಂದೆ ಮೈಸೂರಿನ ತಾನಿದ್ದ ಅಪಾರ್ಟ್ಮೆಂಟಿನ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು. ಈ ಚಿತ್ರ 2014ರ ಜನವರಿಯಲ್ಲಿ ಬಿಡುಗಡೆಯಾಗಲಿದೆ.

  English summary
  Poonam Pandey is all set to rock this New Year's Eve. This is for the first time that the actress will be performing live. The event is to be held at Capital Club resort in Bangalore. Poonam Pandey has been paid a whopping amount of Rs. 1 Crore to take to the stage.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more