Just In
Don't Miss!
- News
ಫೋಟೋ ಸಾಕ್ಷ್ಯ: ಅಸ್ಪೃಶ್ಯತೆ ನಿವಾರಣೆ ಜಾಗೃತಿ ಮೂಡಿಸಿದ ತಹಶೀಲ್ದಾರ್!
- Sports
ಮುಂದಿನ ವಾರ ಸಿಎಸ್ಕೆ ಕ್ಯಾಂಪ್ ಸೇರಲಿದ್ದಾರೆ ಸುರೇಶ್ ರೈನಾ
- Lifestyle
ಕಡಿಮೆ ನೀರು ಕುಡಿಯುವ ಜನರು ಈ ಆಹಾರಗಳನ್ನು ಖಂಡಿತವಾಗಿಯೂ ಸೇವಿಸಬೇಕು!
- Education
RDPR Recruitment 2021: 189 ತಾಂತ್ರಿಕ ಸಹಾಯಕ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಕೈಗೆಟುಕುವ ದರದಲ್ಲಿ ಪನೋರಮಿಕ್ ಸನ್ರೂಫ್ ಸೌಲಭ್ಯವುಳ್ಳ ಕಾರುಗಳಿವು
- Finance
ಹೊಸ ಕಾರುಗಳ ಮುಂಭಾಗದ ಸೀಟುಗಳಿಗೆ ಏರ್ಬ್ಯಾಗ್ ಕಡ್ಡಾಯಗೊಳಿಸದ ಕೇಂದ್ರ ಸರ್ಕಾರ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾವ್.. 'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲನೇ ದಿನದ್ದು 'ಧಮಾಕಾ' ಕಲೆಕ್ಷನ್.!
ದುನಿಯಾ ಸೂರಿ ನಿರ್ದೇಶನದ ಔಟ್ ಅಂಡ್ ಔಟ್ ಮಾಸ್ ಎಂಟರ್ ಟೈನರ್ ಸಿನಿಮಾ 'ಪಾಪ್ ಕಾರ್ನ್ ಮಂಕಿ ಟೈಗರ್'. ರೌಡಿಸಂ ಜೊತೆಗೆ ಸೆಂಟಿಮೆಂಟ್ ಕೂಡ ಮಿಕ್ಸ್ ಆಗಿರುವ ಈ ಚಿತ್ರದಲ್ಲಿ 'ನಟ ರಾಕ್ಷಸ' ಧನಂಜಯ, ನಿವೇದಿತಾ ಮುಖ್ಯಭೂಮಿಕೆಯಲ್ಲಿದ್ದಾರೆ.
ಹೇಳಿ ಕೇಳಿ ದುನಿಯಾ ಸೂರಿ 'ರಾ' ಮೇಕಿಂಗ್ ನಲ್ಲಿ ಹೆಸರುವಾಸಿ. ಹೀಗಾಗಿ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದಲ್ಲೂ ಕೆಲ ಸನ್ನಿವೇಶಗಳನ್ನು ಸೂರಿ ಹಸಿ ಹಸಿಯಾಗಿಯೇ ತೋರಿಸಿದ್ದಾರೆ.
ಕಳೆದ ಶುಕ್ರವಾರವಷ್ಟೇ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ತೆರೆಗೆ ಬಂದಿದ್ದು, ಉತ್ತಮ ಓಪನ್ನಿಂಗ್ ಪಡೆದುಕೊಂಡಿದೆ. ಮಾಸ್ ಚಿತ್ರ ಆಗಿದ್ದರೂ, ಎಲ್ಲರ ನಿರೀಕ್ಷೆಗೂ ಮೀರಿದ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ. ಮುಂದೆ ಓದಿರಿ...

'ಪಾಪ್ ಕಾರ್ನ್ ಮಂಕಿ ಟೈಗರ್' ಮೊದಲ ದಿನದ ಕಲೆಕ್ಷನ್ ಎಷ್ಟು.?
'ಡಾಲಿ' ಧನಂಜಯ ಅಭಿನಯದ ದುನಿಯಾ ಸೂರಿ ನಿರ್ದೇಶನದ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಮೊದಲನೇ ದಿನ ಬಾಕ್ಸ್ ಆಫೀಸ್ ನಲ್ಲಿ 2.53 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಹಾಗಂತ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ'

ಹಲವೆಡೆ ಹೌಸ್ ಫುಲ್ ಪ್ರದರ್ಶನ
ಕರ್ನಾಟಕ ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಗೆ ಬಂದ 'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾ ಹಲವೆಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಿನ್ನೆ ಶನಿವಾರ ಕೂಡ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಕಮಾಲ್ ಮಾಡಿದ್ಯಂತೆ.

ಬಿಯರ್ ಅಭಿಷೇಕ.!
ನಟರ ಕಟೌಟ್ ಗಳಿಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುವುದು ಕಾಮನ್. ಆದರಿಲ್ಲಿ, 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ರಿಲೀಸ್ ವೇಳೆ, ಬೆಂಗಳೂರಿನ ಸಿದ್ದೇಶ್ವರ ಥಿಯೇಟರ್ ಮುಂದೆ ನಿಲ್ಲಿಸಿದ್ದ ಧನಂಜಯ ಕಟೌಟ್ ಗೆ ಫ್ಯಾನ್ಸ್ ಬಿಯರ್ ಅಭಿಷೇಕ ಮಾಡಿ ಸಂಭ್ರಮಿಸಿದ್ದರು.

ಸೂರಿ ಸ್ಟೈಲ್ ಇಷ್ಟ ಆಗಿದೆ.!
ಮಂಕಿ ಸೀನ ಅಲಿಯಾಸ್ ಟೈಗರ್ ಸೀನ ಮತ್ತು ಪಾಪ್ ಕಾರ್ನ್ ದೇವಿ ಸುತ್ತ ನಡೆಯುವ ಘಟನೆಗಳೇ 'ಪಾಪ್ ಕಾರ್ನ್ ಮಂಕಿ ಟೈಗರ್' ಚಿತ್ರದ ಕಥಾವಸ್ತು. ಸಿನಿಮಾದಲ್ಲಿ ಸೂರಿ ಕಥೆ ಹೇಳಿರುವ ಶೈಲಿ ಹಲವರಿಗೆ ಇಷ್ಟ ಆಗಿದೆ. ಬಿಯರ್ ಬಾಯ್ ಆಗಿ ಧನಂಜಯ, ನಟಿ ನಿವೇದಿತಾ, ಅಮೃತ ಅಯ್ಯಂಗಾರ್, ಸಪ್ತಮಿ ಅಭಿನಯ ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ.