ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿಗೆ ಕೊರೊನಾ ಪಾಸಿಟಿವ್

ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ ಅವರಿಗೆ ಕೊರೊನಾ ಸೋಂಕು ತಗುಲಿದೆ. ಈ ಕುರಿತು ಸ್ವತಃ ಪ್ರಜ್ವಲ್ ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.

Recommended Video

ಕೊರೊನಾ ಸೋಂಕಿಗೆ ಒಳಗಾದ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ | Filmibeat Kannada

''ನನಗೆ ಮತ್ತು ರಾಗಿಣಿಗೆ ಕೊರೊನಾ ಸೋಂಕು ತಗುಲಿದೆ. ಇಬ್ಬರೂ ಚಿಕಿತ್ಸೆ ಪಡೆದುಕೊಂಡು ವಿಶ್ರಾಂತಿ ಪಡೆದುಕೊಳ್ಳುತ್ತಿದ್ದೇವೆ. ನಿಮ್ಮವರಿಗೆ ಆತಂಕ ಉಂಟು ಮಾಡಬೇಡಿ. ಸುರಕ್ಷಿತವಾಗಿರಿ, ನಿಮ್ಮ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದಗಳು'' ಎಂದು ಪ್ರಜ್ವಲ್ ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

ಫೆಬ್ರವರಿ 5 ರಂದು ಪ್ರಜ್ವಲ್ ದೇವರಾಜ್ ಅಭಿನಯಿಸಿದ್ದ 'ಇನ್ಸ್‌ಪೆಕ್ಟರ್ ವಿಕ್ರಂ' ಸಿನಿಮಾ ಬಿಡುಗಡೆಯಾಗಿತ್ತು. ಕೊರೊನಾ ಭೀತಿಯಲ್ಲೂ ಸಿನಿಮಾ ತೆರೆಕಂಡು ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Prajwal Devaraj and his wife Ragini tested positive for COVID-19

ಇದೀಗ, ಪ್ರಜ್ವಲ್ ನಟಿಸಿರುವ ಮತ್ತೊಂದು ಸಿನಿಮಾ 'ಅರ್ಜುನ್ ಗೌಡ' ಬಿಡುಗಡೆಗೆ ಸಜ್ಜಾಗಿದ್ದು, ಏಪ್ರಿಲ್ ಎರಡನೇ ವಾರ ತೆರೆಗೆ ಬರಲಿದೆ ಎಂದು ತಿಳಿದು ಬಂದಿದೆ.

ಈ ಸಂಬಂಧ 'ಅರ್ಜುನ್ ಗೌಡ' ಚಿತ್ರದ ಪ್ರಚಾರದಲ್ಲೂ ಪ್ರಜ್ವಲ್ ದೇವರಾಜ್ ಭಾಗವಹಿಸಿದ್ದರು. ಪ್ರಿಯಾಂಕಾ ತಿಮ್ಮೇಶ್ ಈ ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದಾರೆ.

ಮತ್ತೊಂದೆಡೆ ಪ್ರಜ್ವಲ್ ದೇವರಾಜ್ ಸತತ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಚಿತಾ ರಾಮ್ ನಾಯಕಿಯಾಗಿರುವ 'ವೀರಂ' ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ. 'ಅಂಬಿ ನಿಂಗ್ ವಯಸ್ಸಾಯ್ತೋ' ಖ್ಯಾತಿಯ ನಿರ್ದೇಶಕ ಗುರುದತ್ ಗಾಣಿಗ ಜೊತೆ ಹೊಸ ಸಿನಿಮಾ ಆರಂಭಿಸಿದ್ದಾರೆ. ಈ ಚಿತ್ರದಲ್ಲಿ ಅದಿತಿ ಪ್ರಭುದೇವ ನಾಯಕಿಯಾಗಿದ್ದಾರೆ.

More from Filmibeat

English summary
Kannada actor Prajwal Devaraj and His Wife Ragini Tested Positive For Covid 19.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X