For Quick Alerts
ALLOW NOTIFICATIONS  
For Daily Alerts

ಅಂದು ಅಪ್ಪ ಕೆಲಸ ಮಾಡಿದ ಜಾಗದಲ್ಲೇ ಇಂದು ಮಗನ ಸಿನಿಮಾ ಚಿತ್ರೀಕರಣ

|

ಪ್ರಜ್ವಲ್ ದೇವರಾಜ್ ಸದ್ಯ 'ಜಂಟಲ್ ಮನ್' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. 'ಜಂಟಲ್ ಮನ್' ಮಾತ್ರವಲ್ಲ ಪ್ರಜ್ವಲ್ ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ನಾಲ್ಕೈದು ಸಿನಿಮಾಗಳಲ್ಲಿ ಡೈನಾಮಿಕ್ ಪ್ರಿನ್ಸ್ ಬ್ಯುಸಿಯಾಗಿದ್ದಾರೆ.

ಲೋಕಸಭಾ ಚುನಾವಣೆ 2019 | ವಿಶೇಷ ಪುಟ | ಗ್ಯಾಲರಿ

'ಚೌಕ' ಚಿತ್ರದ ನಂತರ ಪ್ರಜ್ವಲ್ ಅಭಿಮಾನಿಗಳ ಮುಂದೆ ಬಂದಿಲ್ಲ. 'ಚೌಕ' ರಿಲೀಸ್ ಆಗಿ ಎರಡು ವರ್ಷದ ಮೇಲಾಯಿತು. ಪ್ರಜ್ವಲ್ ದೇವರಾಜ್ ಅವರನ್ನು ತೆರೆಮೇಲೆ ನೋಡಲು ಚಿತ್ರಪ್ರಿಯರು ಕಾಯುತ್ತಿದ್ದಾರೆ. ಸದ್ಯ ಚಿತ್ರೀಕರಣದಲ್ಲಿ ಬ್ಯುಸಿ ಇರುವು ಪ್ರಜ್ವಲ್ ಇಂಟ್ರಸ್ಟಿಂಗ್ ವಿಶಯ ಒಂದನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ.

ವಿದೇಶದಲ್ಲಿ ಜಾಲಿ ಮಾಡುತ್ತಿರುವ ಪ್ರಜ್ವಲ್ ದೇವರಾಜ್ ದಂಪತಿ

ಹೌದು, 'ಜಂಟಲ್ ಮನ್' ಚಿತ್ರದ ಚಿತ್ರೀಕರಣ ಹೆಚ್ ಎಂ ಟಿ ಫ್ಯಾಕ್ಟರಿಯಲ್ಲಿ ನಡೆಯುತ್ತಿದೆ. ಚಿತ್ರೀಕರಣದ ಆ ಜಾಗವನ್ನು ನೋಡಿ ಪ್ರಜ್ವಲ್ 30ವರ್ಷದ ಹಿಂದಿನ ನೆನಪನ್ನು ಮೆಲಕುಹಾಕಿದ್ದಾರೆ. ತಂದೆ ದೇವರಾಜ್ 30 ವರ್ಷಗಳ ಹಿಂದೆ ಹೆಚ್ ಎಂ ಟಿ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರಂತೆ.

ಅಂದು ಅಪ್ಪ ಕಷ್ಟು ಪಟ್ಟು ಕೆಲಸ ಮಾಡಿದ ಜಾಗದಲ್ಲಿ ಇಂದು ಚಿತ್ರೀಕರಣ ಮಾಡುತ್ತಿವುದು ಹೆಮ್ಮೆ ಎನಿಸುತ್ತಿದೆ ಎಂದು ಹೇಳಿಕೊಂಡಿದ್ದಾರೆ.

"30ವರ್ಷಗಳ ಹಿಂದೆ ಅಪ್ಪ ಕೆಲಸ ಮಾಡಿದ ಜಾಗ ಹೆಚ್ ಎಂ ಟಿ ಫ್ಯಾಕ್ಟರಿಯಲ್ಲಿ ಇಂದು ಚಿತ್ರೀಕರಣ ಮಾಡುತ್ತಿದ್ದೇವೆ. ನಾನು ಇವತ್ತು ಸಂತೋಷವಾಗಿ ಜೀವಿಸುತ್ತಿರುವ ಪ್ರತೀಕ್ಷಣಕ್ಕು ಅವರ ಕಠಿಣ ಶ್ರಮ ಮತ್ತು ಹೋರಾಟದ ಫಲವೇ ಕಾರಣ. ಮುಂದೊಂದು ದಿನ ದೊಡ್ಡ ನಟನಾಗುತ್ತೇನೆ ಎಂದು ಅವರು ಕನಸಲ್ಲು ಅಂದುಕೊಂಡಿರಲ್ಲಿಲ್ಲ. ಅಲ್ಲದೆ ಮಗ ಕೂಡ ಇದೇ ಫ್ಯಾಕ್ಟರಿಯಲ್ಲಿ ಚಿತ್ರೀಕರಣ ಮಾಡುತ್ತಾನೆ ಅಂತಾನು ಅಂದುಕೊಂಡಿರಲ್ಲಿ. ಡೈನಾಮಿಕ್ ಸ್ಟಾರ್ ಮಗನಾಗಿರುವುದು ಲಕ್ಕಿ ನಾನು. ಲವ್ ಯು" ಎಂದು ಅಪ್ಪನ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

View this post on Instagram

Shooting at the hmt factory today where my dad used to work 30 yrs back. His struggles and hard work are the reason for every bit of life I’m getting to live today. He even in his wildest dreams wouldn’t have thought that he would be such a big star and his son would become an actor to be shooting in the same factory one day. That’s life!! It gives you what you deserve , when you deserve it only if you work hard towards it. So lucky to be the son of the “dynamic star” and to be working in this industry entertaining all you lovely people. Thank you for everything that you have done for us dad!! Love you!! @devarajramachandrappa ❤️ ಈ ಜೀವಭಿಕ್ಷೆಗೆ ನಾನು ಸಧಾ ಚಿರಋಣಿ

A post shared by Prajwal Devaraj (@prajwaldevaraj) on

'ಜಂಟಲ್ ಮನ್' ಜಡೇಶ್ ಕುಮಾರ್ ನಿರ್ದೇಶನದ ಚಿತ್ರ. ಚಿತ್ರದಲ್ಲಿ ಪ್ರಜ್ವಲ್ ಕುಂಭಕರಣನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದಿನದ 18 ಗಂಟೆ ನಿದ್ದೆ ಮಾಡಲೇಬೇಕಾದ ಕಾಯಿಲೆ ಇಂದ ಬಳಲುತ್ತಿರುತ್ತಾನೆ. ಇನ್ನು 'ಇನ್ಸ್ಪೆಕ್ಟರ್ ವಿಕ್ರಮ್', 'ಅರ್ಜುನ್ ಗೌಡ' ಸೇರಿದಂತೆ ಅನೇಕ ಚಿತ್ರಗಳು ಪ್ರಜ್ವಲ್ ಬಳಿ ಇವೆ.

English summary
Kannada Actor Prajwal Devaraj is feeling happy to work at his father Devaraj's office. He is shooting in a factory for his upcoming movie, where his father had worked 30 years ago.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more