For Quick Alerts
  ALLOW NOTIFICATIONS  
  For Daily Alerts

  ರಂಭೆ ಊರ್ವಶಿ ಮೇನಕಾ ಜೊತೆ ಪ್ರಜ್ವಲ್ ಆಗಮನ!

  |

  ಗುಲಾಮ ಚಿತ್ರದ ನಂತರ ಕೋಟಿ ರಾಮು ನಿರ್ಮಾಣದ 'ಸಾಗರ್' ಚಿತ್ರದಲ್ಲಿ ಪ್ರಜ್ಡಲ್ ದೇವರಾಜ್ ಮತ್ತೆ ನಟಿಸಿದ್ದಾರೆ. ಈ ಚಿತ್ರ ಈ ಶುಕ್ರವಾರ, 10 ಆಗಸ್ಟ್ 2012 ರಂದು ತೆರೆಗೆ ಬರಲಿದೆ. ಕೆಜಿ ರಸ್ತೆಯ 'ಸಾಗರ್' ಚಿತ್ರಮಂದಿರಕ್ಕಾಗಿಯೇ ಕಾದಿದ್ದ 'ಸಾಗರ್' ಚಿತ್ರತಂಡ, ಅದ್ದೂರಿ ಚಿತ್ರ 50 ಯಶಸ್ವಿ ದಿನ ಪೂರೈಸಿಯೂ 'ಔಟ್' ಆಗದ ಹಿನ್ನೆಲೆಯಲ್ಲಿ 'ತ್ರಿವೇಣಿ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ. ಈ ಬಾರಿಯಾದರೂ ಪ್ರಜ್ವಲ್ ಗೆಲ್ತಾರಾ ಎಂಬ ಪ್ರಶ್ನೆ ಎಲ್ಲರಲ್ಲಿ ಮೂಡಿದೆ.

  ಇತ್ತೀಚಿಗೆ ಪ್ರಜ್ವಲ್ ದೇವರಾಜ್ ನಾಯಕತ್ವದ ಚಿತ್ರಗಳು ಘೋಷಣೆಯಾಗಿ ಮುಹೂರ್ತ ಕಂಡು ನಂತರ ಮಾಯವಾಗುವುದೇ ಹೆಚ್ಚು. ಕೆಲವು ಚಿತ್ರೀಕರಣ ಮುಗಿಸಿದರೂ ಅವು ಬಿಡುಗಡೆಯಾಗಿಲ್ಲ. ಬಿಡುಗಡೆಯಾಗಿದ್ದು ಸೋತಿದೆ. ಹೀಗಿರುವಾಗ ಈ ಸಾಗರ್ ಚಿತ್ರ ಬಿಡುಗಡೆಯಾಗುತ್ತಿರುವುದು ಪ್ರಜ್ವಲ್ ಅಭಿಮಾನಿಗಳಿಗೆ ಭಾರಿ ಸಂತಸ ತಂದಿದೆ. ಸ್ವತಃ ಪ್ರಜ್ವಲ್ ಕೂಡ ಖುಷಿಯಾಗಿದ್ದಾರೆ. ಆದರೆ ಗೆಲುವನ್ನು ಎಲ್ಲರೂ ನಿರೀಕ್ಷಿಸುವಂತಾಗಿದೆ.

  ಈ ವೇಳೆಯಲ್ಲಿ ಮರಳುಗಾಡಲ್ಲಿ ಓಯಸಿಸ್ ಸಿಕ್ಕಂತೆ ತೆರೆಗೆ ಬರಲು ರೆಡಿಯಾಗಿರುವ ಚಿತ್ರವೇ 'ಸಾಗರ್'. ಇಲ್ಲಿ ಪ್ರಜ್ವಲ್‌ಗೆ ಮೂವರು ಹೀರೋಯಿನ್‌ಗಳು. ರಾಧಿಕಾ ಪಂಡಿತ್, ಹರಿಪ್ರಿಯಾ ಮತ್ತು ಸಂಜನಾ ಎಂಬ ಮೂವರು ದಂತದ ಬೊಂಬೆಗಳ ಜತೆ ರೊಮ್ಯಾನ್ಸ್ ಮಾಡಿದ್ದಾರೆ ಈ 'ಸಿಕ್ಸರ್' ಹುಡುಗ. ಈ ಚಿತ್ರದ ಮೇಲೆ ಅವರಿಗೆ ಅಪಾರ ಭರವಸೆಯಿದೆ.

  ಈ ಹಿಂದೆ ಬಂದಿದ್ದ ಪ್ರಜ್ವಲ್ ಚಿತ್ರ 'ಗುಲಾಮ' ನಿರ್ಮಾಪಕ ಕೋಟಿ ರಾಮುಗೆ ಸಾಕಷ್ಟು ಲಾಸ್ ಮಾಡಿತ್ತು. ಈಗ ನಿರ್ದೇಶಕ ಎಂ.ಡಿ. ಶ್ರೀಧರ್ ನಂಬಿ ಮತ್ತೆ ಪ್ರಜ್ವಲ್ ಮೇಲೆ ಕೋಟಿ ಸುರಿದಿದ್ದಾರೆ. ಅದರಲ್ಲೂ ಆಶ್ಚರ್ಯದ ಸಂಗತಿ ಏನೆಂದರೆ ಸಾಮಾನ್ಯವಾಗಿ ರೀಮೇಕ್ ಚಿತ್ರ ಮಾಡುತ್ತಿದ್ದ ಶ್ರೀಧರ್, ಈ ಬಾರಿ ಅಪರೂಪವೆಂಬಂತೆ ಸ್ವಮೇಕ್‌ ಚಿತ್ರ ಸಾಗರ್ ಮಾಡಿದ್ದಾರೆ.

  ಈ ಚಿತ್ರದ ಮೂಲಕ 'ಮಗಧೀರ' ಖ್ಯಾತಿಯ ದೇವಗಿಲ್ ಕನ್ನಡಕ್ಕೆ ಬಂದಿದ್ದಾರೆ. ಅವರ ಪಾತ್ರಕ್ಕೆ ಡಬ್ಬಿಂಗ್ ಮಾಡಿರುವವರು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್. ನಿರ್ಮಾಪಕ ರಾಮು ಈ ಮೊದಲು ತೆಲುಗಿನಲ್ಲಿ ನಿರ್ಮಿಸಲು ಮುಂದಾಗಿದ್ದ ಸಾಗರ್ ಚಿತ್ರವನ್ನು ಅವರ ನಿರ್ಧಾರವನ್ನು ಬದಲಿಸಿ ನಿರ್ದೇಶಿಸಿದ್ದು ನಿರ್ದೇಶಕ ಎಂಡಿ ಶ್ರೀಧರ್. ಕನ್ನಡದಲ್ಲಿ ಯಶಸ್ವಿಯಾದರೆ ಮುಂದೆ 'ಸಾಗರ್' ಚಿತ್ರ ತೆಲುಗಿಗೆ ರಿಮೇಕ್ ಅಥವಾ ಡಬ್ ಆಗಲಿದೆ.

  ಅಂದಹಾಗೆ, ಈ ಚಿತ್ರದಲ್ಲಿ 'ಸಿಕ್ಸರ್' ಖ್ಯಾತಿಯ ನಟ ಪ್ರಜ್ವಲ್ ದೇವರಾಜ್, ಮೂರು ನಾಯಕಿಯರ ಜೊತೆ ರೊಮಾನ್ಸ್ ಮಾಡಲಿದ್ದಾರೆ. ಕನ್ನಡದ ಸುರಸುಂದರಿಯರಾದ ಹರಿಪ್ರಿಯಾ, ರಾಧಿಕಾ ಪಂಡಿತ್ ಹಾಗೂ ಸಂಜನಾ ಈ ಚಿತ್ರದಲ್ಲಿ ಪ್ರಜ್ವಲ್ ಜೋಡಿಯಾಗಿದ್ದಾರೆ. ಎಂಡಿ ಶ್ರೀಧರ್ ನಿರ್ದೇಶನದ ಈ ಚಿತ್ರಕ್ಕೆ ಗುರುಕಿರಣ್ ಸಂಗೀತ ನೀಡಿದ್ದಾರೆ. ಕೃಷ್ಣಕುಮಾರ್ ಛಾಯಾಗ್ರಹಣ ಚಿತ್ರಕ್ಕಿದೆ. (ಒನ್ ಇಂಡಿಯಾ ಕನ್ನಡ)

  English summary
  Prajwal Devaraj movie Sagar to Releases on 10th August 2012. Gurukiran Music is for this Koti Ramu Produced movie. Radhika Pandit, Haripriya and Sanjana are the heroines for this Sagar. 
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X