»   » ಪ್ರಕಾಶ್ ರೈ ಎಲ್ಲೋದ್ರು ಅಂತ ಹುಡುಕುತ್ತಿದ್ದವರು ನೋಡಿ 'ರೈ' ಬಂದ್ರು.!

ಪ್ರಕಾಶ್ ರೈ ಎಲ್ಲೋದ್ರು ಅಂತ ಹುಡುಕುತ್ತಿದ್ದವರು ನೋಡಿ 'ರೈ' ಬಂದ್ರು.!

Posted By:
Subscribe to Filmibeat Kannada

ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗುತ್ತಿದ್ದು, ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ. ಕರ್ನಾಟಕದಲ್ಲಿ ಕಮಲ ಹೆಚ್ಚು ಅರಳಿದ ಹಿನ್ನೆಲೆ ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳಲ್ಲಿ ಸಂಭ್ರಮಿಸಿದರು.

ಇದೇ ಸಂತಸದಲ್ಲಿ ಬಿಜೆಪಿ ಸರ್ಕಾರವನ್ನ ಮತ್ತು ಮೋದಿ ಆಡಳಿತವನ್ನ ಟೀಕಿಸುತ್ತಿದ್ದ ನಟ ಪ್ರಕಾಶ್ ರೈ ಅವರನ್ನ ಬಿಜೆಪಿ ಫಾಲೋವರ್ಸ್ ಕಾಲೆಳೆಯಲು ಆರಂಭಿಸಿದರು. 'ರೈ' ಎಲ್ಲೋದ್ರು, 'ರೈ' ಎಲ್ಲೋದ್ರು ಎಂದು ಫೇಸ್ ಬುಕ್, ಟ್ವಿಟ್ಟರ್ ನಲ್ಲಿ ಕಾಮೆಂಟ್ ಮಾಡಲು ಶುರು ಮಾಡಿದ್ರು. ಕರ್ನಾಟಕದಲ್ಲಿ ಬಿಜೆಪಿ ಅಲೆ ನೋಡಿ ಪ್ರಕಾಶ್ ರೈ ತಲೆಮರೆಸಿಕೊಂಡಿದ್ದಾರೆ ಎಂದೆಲ್ಲ ಟೀಕಿಸಿದರು. ಇಷ್ಟೆಲ್ಲ ಗಮನಿಸಿದ ನಟ ಪ್ರಕಾಶ್ ರೈ ಪ್ರತ್ಯಕ್ಷವಾಗಿದ್ದಾರೆ.

ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ನಟ ಪ್ರಕಾಶ್ ರೈ ''ನಾನು ಎಲ್ಲೂ ಹೋಗಿಲ್ಲ ಫಲಿತಾಂಶ ನೋಡುತ್ತಿದ್ದೇನೆ'' ಎಂದು ಸರಣಿ ಟ್ವೀಟ್ ಮೂಲಕ ಟಾಂಗ್ ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ದಿನದಲ್ಲಿ ಏನೆಲ್ಲ ಬದಲಾವಣೆ ಆಗಬಹುದು ಎಂಬುದನ್ನ ಕಾದು ನೋಡಿ ಎಂದು ಕಿಡಿಕಾರಿದ್ದಾರೆ. ರೈ ಟ್ವೀಟ್ ನಲ್ಲಿ ಏನಿದೆ.? ಮುಂದೆ ಓದಿ....

ಆಟ ಇನ್ನು ಮುಗಿದಿಲ್ಲ

'' ಕರ್ನಾಟಕ ಚುನಾವಣೆ ನೋಡುತ್ತಿದ್ದೇನೆ..., ಬಿಜೆಪಿಯ ಆಟ, ಹಣ ಬಲ, ತೋಳು ಬಲದಿಂದ ಅಧಿಕಾರ ಹಿಡಿಯಲು ಹೋದ್ರಿ. ಆದ್ರೆ, ಸರ್ಕಾರ ನಡೆಸಲು ಬೇಕಾದ ಬಹುಮತ ನಿಮಗೆ ಸಿಗಲಿಲ್ಲ. ಈಗ ಎರಡು ಪಕ್ಷಗಳು ಒಟ್ಟಿಗೆ ಬಂದಿವೆ. ಪ್ರೀತಿಯ ನಾಗರೀಕರೇ ಆಟ ಇನ್ನು ಮುಗಿದಿಲ್ಲ'' ಎಂದು ನಟ ಪ್ರಕಾಶ್ ರೈ ಟ್ವೀಟ್ ಮಾಡಿದ್ದಾರೆ.

ಕುದುರೆ ವ್ಯಾಪರ ನೋಡುವುದು ಮಾತ್ರ ಬಾಕಿ

''ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಕಾರಣ ರಾಜ್ಯಪಾಲರಿಗೆ ಸರ್ಕಾರ ರಚಿಸಲು ಅವಕಾಶ ಕೊಡಿ ಎಂದು ಮನವಿ ಮಾಡಿದ್ದಾರೆ. ರಾಜ್ಯಪಾಲರು ಕೂಡ ಅವಕಾಶ ಕೊಟ್ಟಿದ್ದಾರೆ. (ಅಭ್ಯರ್ಥಿಗಳನ್ನ ಸೆರೆಹಿಡಿಯಲು ಚಾಣಕ್ಯ ಬರ್ತಿದ್ದಾರೆ) ಚಾಣಕ್ಯನ ಪ್ರತಿಭೆಯನ್ನ ವರ್ಣಿಸಲು ಕೆಲವು ಮಾಧ್ಯಮಗಳು ಸಿದ್ಧವಾಗಿದೆ. ಇನ್ನು ಪ್ರಜೆಗಳಿಗೆ 'ಕುದುರೆ ವ್ಯಾಪರ' ನೋಡುವುದು ಮಾತ್ರ ಕೆಲಸ'' - ಪ್ರಕಾಶ್ ರೈ

ಕನ್ನಡ ಸಿನಿಮಾರಂಗದವರ ಪಾಲಿಗೆ ಪ್ರಕಾಶ್ ರೈ ಹಿಟ್ಲರ್ ಅಂತೆ!

ನಾವು ಎಚ್ಚರವಾಗಬೇಕಿದೆ

''ನೀವು ಎಚ್ಚರವಾಗದೇ, justasking ಎಂದು ಪ್ರತಿ ರಾಜಕಾರಣಿಗಳನ್ನ ಮತ್ತು ರಾಜಕೀಯ ಪಕ್ಷಗಳನ್ನ ಕೇಳದಿದ್ದರೆ ನಿಮ್ಮ ಜನಾದೇಶಕ್ಕೆ ಬೆಲೆ ಇಲ್ಲದಂತಾಗುತ್ತೆ. ಆಮೇಲೆ ನಾವು ಪ್ರಜೆಗಳಾಗಿರುವ ಬದಲು ಕೇವಲ ವೀಕ್ಷಕರಾಗಿ ಮಾತ್ರ ಉಳಿಯುತ್ತೇವೆ'' - ಪ್ರಕಾಶ್ ರೈ

ಯಾವುದೇ ಸರ್ಕಾರ ಬಂದ್ರು ನಾನು ಪ್ರಶ್ನಿಸುವೆ

''ಈ ನಾಚಿಕೇಡಿನ ರಾಜಕೀಯ ನಾಟಕವನ್ನ ನೋಡಿ, ನಾನೀಗ ಕೈಗೊಂಡಿರುವ ತೀರ್ಮಾನವೇನೆಂದರೆ, ಯಾವುದೇ ಸರ್ಕಾರ ಬಂದರೂ ಪ್ರಜೆಗಳ ಪರವಾಗಿ ನಾನು 'justasking' ಎಂದು ಪ್ರಶ್ನಿಸಲು ಮುಂದಾಗುತ್ತೇನೆ. ಇದೇ ವೇಳೆ ಜೋಕರ್ ಗಳ ನಿಜಬಣ್ಣ ಬಯಲಾಗಲಿದೆ. ನೋಡುತ್ತಾ ಖುಷಿಪಡಿ'' ಎಂದು ತಿಳಿಸಿದ್ದಾರೆ.

ಸಿನಿ ಬದುಕಿನಲ್ಲಿ ಸುದೀಪ್ ಶರಣಾಗಿದ್ದು ಈ ಇಬ್ಬರಿಗೆ ಮಾತ್ರ.!

ಮುಂದಿನ ನಡೆ ಏನು.?

ಪ್ರಕಾಶ್ ರೈ ಪರೋಕ್ಷವಾಗಿ ಕಾಂಗ್ರೆಸ್ ಪಕ್ಷವನ್ನ ಬೆಂಬಿಲಿಸಿದ್ದರು. ಆದ್ರೆ, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಭಾರಿ ಹಿನ್ನೆಡೆ ಅನುಭವಿಸಿದೆ. ಹೀಗಿದ್ದರೂ, ಜೆಡಿಎಸ್ ಪಕ್ಷಕ್ಕೆ ಸರ್ಕಾರ ರಚನೆ ಮಾಡಲು ಸಂಪೂರ್ಣ ಬೆಂಬಲ ಸೂಚಿಸಿದೆ. ಹೀಗಾಗಿ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಯಶಸ್ವಿಯಾಗುತ್ತಾ.? ಅಥವಾ ಬಿಜೆಪಿಯ ಗೇಮ್ ಪ್ಲ್ಯಾನ್ ಗೆ ಮೈತ್ರಿ ಉಡೀಸ್ ಆಗುತ್ತಾ.? ಇದೆಲ್ಲರ ಜೊತೆಗೆ ರೈ ಮುಂದಿನ ನಡೆ ಹೇಗಿರುತ್ತೆ ಎಂಬುದು ಕೂಡ ಭಾರಿ ಕುತೂಹಲ ಮೂಡಿಸಿದೆ.

English summary
Karnataka Election Results 2018; Kannada actor Prakash raj has taken his twitter account to expressed his opinion about karnataka election results

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X