For Quick Alerts
  ALLOW NOTIFICATIONS  
  For Daily Alerts

  ಮೊದಲ ಚಿತ್ರದ ಬಿಡುಗಡೆ ಮುನ್ನವೇ ಪ್ರಣಮ್ ಹೊಸ ಚಿತ್ರ

  By Pavithra
  |

  ಡೈನಾಮಿಕ್ ದೇವರಾಜ್ ಪುತ್ರ ಪ್ರಣಮ್ ದೇವರಾಜ್ 'ಕುಮಾರಿ ಎಫ್ 21' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. 'ಕುಮಾರಿ ಎಫ್ 21' ಸಿನಿಮಾ ಶೂಟಿಂಗ್ ಮುಗಿದು ತೆರೆಗೆ ಬರುವುದಕ್ಕೆ ಸಿದ್ದವಾಗಿದೆ. ಇತ್ತಿಚಿಗಷ್ಟೇ ಚಿತ್ರದ ಟ್ರೇಲರ್ ಅನ್ನು ಚಾಲೆಂಜಿಂಗ್ ಸ್ಟಾರ್ ಬಿಡುಗಡೆ ಮಾಡಿಕೊಟ್ಟಿದ್ದರು.

  ಚೊಚ್ಚಲ ಚಿತ್ರ ಬಿಡುಗಡೆ ಆಗುವ ಮುನ್ನವೇ ಪ್ರಣಮ್ ದೇವರಾಜ್ ಹೊಸ ಚಿತ್ರಕ್ಕೆ ಸಹಿ ಹಾಕಿದ್ದಾರೆ. ಆಷಾಡ ಶುರುವಾಗುವ ಮುನ್ನವೇ ಚಿತ್ರತಂಡ ಸದ್ದಿಲ್ಲದೇ ಮುಹೂರ್ತವನ್ನು ಮಾಡಿ ಮುಗಿಸಿದೆ.

  ಪ್ರಣಮ್ ದೇವರಾಜ್ ಬಗ್ಗೆ ದರ್ಶನ್ ಮೆಚ್ಚುಗೆ ಮಾತುಪ್ರಣಮ್ ದೇವರಾಜ್ ಬಗ್ಗೆ ದರ್ಶನ್ ಮೆಚ್ಚುಗೆ ಮಾತು

  ಶ್ರೀಭ್ರಮರಾಂಭ ಸಮೇತ ಮಲ್ಲಿಕಾರ್ಜುನಸ್ವಾಮಿ ಫಿಲಂಸ್ ಹಾಗೂ ಸಿಂಹ ಫಿಲಂಸ್ ಲಾಂಛನದಲ್ಲಿ ಮಲ್ಲಿಕಾರ್ಜುನ ಜಂಗಮ್, ಅನಿಲ್ ಹಾಗೂ ಕಿಶೋರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಸಿನಿಮಾಗೆ ಇನ್ನು ಶೀರ್ಷಿಕೆ ಫೈನಲ್ ಆಗಿಲ್ಲ.

  ಪ್ರೊಡಕ್ಷನ್ ನಂ1 ಹೆಸರಿನಲ್ಲಿ ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಬೆಂಗಳೂರಿನ ಮೋದಿ ಆಸ್ಪತ್ರೆ ಬಳಿಯ ಗಣಪತಿ ದೇವಸ್ಥಾನದಲ್ಲಿ ನಡೆದಿದೆ. ನಿರ್ದೇಶಕ ಪವನ್ ಒಡೆಯರ್ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದ್ದು . ನಟ ದೇವಾರಾಜ್ ಕುಟುಂಬ ಸಮೇತ ಆಗಮಿಸಿ ನೂತನ ಚಿತ್ರಕ್ಕೆ ಶುಭ ಕೋರಿದ್ದಾರೆ.

  ಸಾಯಿಶಿವನ್ ಜೆ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಸಾಗರ್ ಮಹತಿ ಸಂಗೀತ ನೀಡುತ್ತಿದ್ದಾರೆ. ಪ್ರಣಾಮ್ ದೇವರಾಜ್, ರವಿಶಂಕರ್,ಪವಿತ್ರಲೋಕೇಶ್, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿ ಅಭಿನಯ ಮಾಡಲಿದ್ದು, ಆಗಸ್ಟ್ ಎರಡನೇ ವಾರದಲ್ಲಿ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ.

  English summary
  Kannada actor Pranam Devaraj's new film 'Pooja' has been held recently, Pranam's debut kannada film is yet to be released

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X