For Quick Alerts
  ALLOW NOTIFICATIONS  
  For Daily Alerts

  ಮಾಲ್ಡೀವ್ಸ್ ನಲ್ಲಿ ಸ್ಕೂಬಾ ಡೈವಿಂಗ್ ಎಂಜಾಯ್ ಮಾಡಿದ ನಟಿ ಪ್ರಣಿತಾ

  |

  ಸ್ಯಾಂಡಲ್ ವುಡ್ ನಟಿ ಪ್ರಣಿತಾ ಸುಭಾಷ್ ಸದ್ಯ ಬಾಲಿವುಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡದ ಜೊತೆಗೆ ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾರಂಗದಲ್ಲೂ ಪ್ರಣಿತಾ ಖ್ಯಾತಿಗಳಿಸಿದ್ದಾರೆ. ಇತ್ತೀಚಿಗಷ್ಟೆ ಬಾಲಿವುಡ್ ಸಿನಿಮಾದ ಚಿತ್ರೀಕರಣ ಮುಗಿಸಿರುವ ಪ್ರಣಿತಾ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ.

  ಮಾಲ್ಡೀವ್ಸ್ ಪ್ರವಾಸವನ್ನು ಸಖತ್ ಎಂಜಾಯ್ ಮಾಡುತ್ತಿರುವ ಪೊರ್ಕಿ ಸುಂದರಿ ಸಾಮಾಜಿಕ ಜಾಲತಾಣದಲ್ಲಿ ತರಹೇವಾರಿ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಪ್ರಣಿತಾ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ. ಇತ್ತೀಚಿಗೆ ಪ್ರಣಿತಾ ಅಂಡರ್ ವಾಟರ್ ಸ್ಕೂಟರ್ ಡೈವಿಂಗ್ ಮಾಡಿರುವ ವಿಡಿಯೋ ಶೇರ್ ಮಾಡಿದ್ದು ಈ ವಿಡಿಯೋ ಈಗ ಎಲ್ಲಾ ಕಡೆ ಹರಿದಾಡುತ್ತಿದೆ.

  ವಿಡಿಯೋ ಶೇರ್ ಮಾಡಿ ಮೊದಲ ಬಾರಿಗೆ ಸಾಗರದಲ್ಲಿ ಸ್ಕೂಟರ್ ಡೈವಿಂಗ್ ಮಾಡಿರುವುದಾಗಿ ಹೇಳಿದ್ದಾರೆ. 'ಮಾಲ್ಡೀವ್ಸ್ ನಲ್ಲಿ ನನ್ನ ಮೊದಲ ಸಾಗರದ ಸ್ಕೂಟರ್ ಡೈವಿಂಗ್ ಅನುಭವ' ಎಂದು ಬರೆದು ಕೊಂಡಿದ್ದಾರೆ. ಪ್ರಣಿತಾ ಹಂಚಿಕೊಂಡಿರುವ ವಿಡಿಯೋಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  Pranitha Subhash spotted with scooter diving underwater in the Maldives
  ಪಾರ್ಟ್ನರ್ ಗಳನ್ನ ಮಿಸ್ ಮಾಡಿಕೊಳ್ಳುತ್ತಿದ್ದಾರೆ KL Rahul | Filmibeat Kannada

  ಅಂದಹಾಗೆ ಪ್ರಣೀತಾ ಸದ್ಯ ಹಿಂದಿಯ ಹಂಗಮಾ-2 ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರದಲ್ಲಿ ಪರೇಶ್ ರಾವಲ್, ಶಿಲ್ಪ ಶೆಟ್ಟಿ ಮೀಝಾನ್ ಜಾಫೆರಿ ಸೇರಿದಂತೆ ಅನೇಕರು ಅಭಿನಯಿಸುತ್ತಿದ್ದಾರೆ. ಲಾಕ್ ಡೌನ್ ಬಳಿಕ ಚಿತ್ರೀಕರಣ ಪ್ರಾರಂಭ ಮಾಡಿದ್ದು, ಚಿತ್ರದ ಹೆಚ್ಚಿನ ಭಾಗ ಮನಾಲಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.

  English summary
  Sandalwood Actress Pranitha Subhash spotted with scooter diving underwater in the Maldives.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X