Just In
Don't Miss!
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Automobiles
ಟಾಟಾ ಆಲ್ಟ್ರೊಜ್ ಐಟರ್ಬೋ ಕಾರಿನ ಟೀಸರ್ ಬಿಡುಗಡೆ ಮಾಡಿದ ಟಾಟಾ ಮೋಟಾರ್ಸ್
- Sports
ಐಎಸ್ಎಲ್: ಪ್ಲೇ ಆಫ್ ನಿರೀಕ್ಷೆಯಲ್ಲಿ ಜೆಮ್ಷೆಡ್ಪುರ, ನಾರ್ಥ್ ಈಸ್ಟ್
- News
ಭಾರತದಲ್ಲಿ ಮೊದಲ ದಿನ ಕೊರೊನಾ ಲಸಿಕೆ ಪಡೆದವರೆಷ್ಟು ಮಂದಿ?
- Lifestyle
ಆರೋಗ್ಯಕರ ಋತುಚಕ್ರಕ್ಕೆ ಇಲ್ಲಿವೆ ಕೆಲವೊಂದು ಯೋಗಾಸನಗಳು
- Finance
ಬಜೆಟ್ 2021: MSME ವಲಯಕ್ಕೆ ಏನು ಸಿಗಬಹುದು?
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮದಗಜ: ಗಂಗಾ ನದಿ ತಟದಲ್ಲಿ ಸುಡುವ ಹೆಣಗಳ ಮಧ್ಯೆ ಶ್ರೀಮುರಳಿ ರೌದ್ರಾವತಾರ
ನಟ ಶ್ರೀಮುರಳಿ ಹುಟ್ಟುಹಬ್ಬದ ಶುಭ ಸಂದರ್ಭದಲ್ಲಿ ಅವರದ್ದೇ ನಟನೆಯ 'ಮದಗಜ' ಸಿನಿಮಾದ ಫರ್ಸ್ಟ್ ಲುಕ್ ಟೀಸರ್ ಅನ್ನು ನಿರ್ದೇಶಕ ಪ್ರಶಾಂತ್ ನೀಲ್ ಬಿಡುಗಡೆ ಮಾಡಿದ್ದಾರೆ.
1:41 ನಿಮಿಷದ ಈ ಟೀಸರ್‌ನಲ್ಲಿ ವಾರಣಾಸಿಯ ಸುಂದರ ದೃಶ್ಯಗಳ ಜೊತೆಗೆ ಶ್ರೀಮುರಳಿಯ ಕಂಚಿನ ಕಂಠ, ಕೆಲವು ಅದ್ಭುತ ಆಕ್ಷನ್ ದೃಶ್ಯಗಳ ಝಲಕ್ ನೀಡಲಾಗಿದೆ. ಕೊನೆಯಲ್ಲಿ ಮಾಸ್ ಲುಕ್‌ನಲ್ಲಿ ಶ್ರೀಮುರಳಿಯ ದರ್ಶನವಾಗುತ್ತದೆ.
'ಮದಗಜ' ಮೂರನೇ ಹಂತದ ಚಿತ್ರೀಕರಣಕ್ಕೆ ಸಜ್ಜಾದ ಶ್ರೀಮುರಳಿ
'ಸಿನಿಮಾ ರಂಗದಲ್ಲಿ ತಂತ್ರಜ್ಞನಾಗಿ 10 ವರ್ಷ ಅನುಭವ ಹೊಂದಿದ್ದೇನೆ, ಪ್ರೇಕ್ಷಕನಾಗಿ 35 ವರ್ಷ ಅನುಭವವಿದೆ. ಒಬ್ಬ ಪ್ರೇಕ್ಷಕನಾಗಿ ಮದಗಜ ಟೀಸರ್ ಬಗ್ಗೆ ಹೇಳುವುದಾದರೆ, ಅದೊಂದು ಅದ್ಭುತ ಟೀಸರ್, ಮಹೇಶ್, ಉಮಾಪತಿ ಶ್ರೀನಿವಾಸ್ ಎಲ್ಲಾ ಚಿತ್ರತಂಡಕ್ಕೂ ಶುಭಹಾರೈಕೆಗಳು. ಟೀಸರ್‌ನಲ್ಲಿ ಶ್ರೀ ಮುರಳಿ ಘರ್ಜಿಸುತ್ತಿದ್ದಾರೆ. ಅವರು ಮುಂದೆಯೂ ಹೀಗೆಯೇ ಘರ್ಜಿಸುತ್ತಲೇ ಇರಬೇಕು' ಎಂದಿದ್ದಾರೆ ಟೀಸರ್ ಬಿಡುಗಡೆ ಮಾಡಿದ ಪ್ರಶಾಂತ್ ನೀಲ್.
ಇಂದು (ಡಿಸೆಂಬರ್ 17) ಶ್ರೀಮುರಳಿ ಹುಟ್ಟುಹಬ್ಬವಿದ್ದು, ಈ ದಿನದ ವಿಶೇಷವಾಗಿ ಮದಗಜ ಸಿನಿಮಾ ತಂಡವು ಟೀಸರ್ ಅನ್ನು ಪ್ರಶಾಂತ್ ನೀಲ್ ಕಡೆಯಿಂದ ಬಿಡುಗಡೆ ಮಾಡಿಸಿದೆ.
'ಮದಗಜ' ಸಿನಿಮಾದ ಕತೆಯು ಕಾಶಿಯಲ್ಲಿ ನಡೆಯುತ್ತದೆ, ಬಹುತೇಕ ಚಿತ್ರೀಕರಣ ಕಾಶಿಯಲ್ಲಿ ಮಾಡಲಾಗಿದೆ. ಇದರ ಜೊತೆಗೆ ಮೈಸೂರು, ಬೆಂಗಳೂರುಗಳಲ್ಲಿ ಸಹ ಚಿತ್ರೀಕರಣ ಮಾಡಲಾಗಿದೆ. ಸಿನಿಮಾವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದು, ದರ್ಶನ್‌ರ ರಾಬರ್ಟ್ ಸಿನಿಮಾಕ್ಕೆ ಬಂಡವಾಳ ಹೂಡಿರುವ ಉಮಾಪತಿ ಶ್ರೀನಿವಾಸ್ ಈ ಸಿನಿಮಾಕ್ಕೂ ಬಂಡವಾಳ ಹೂಡಿದ್ದಾರೆ.
ಕೊನೆಗೂ 'ಮದಗಜ' ಚಿತ್ರಕ್ಕೆ ವಿಲನ್ ಆದ್ರು ಸೌತ್ ಸ್ಟಾರ್ ನಟ
ಮದಗಜ ಸಿನಿಮಾದಲ್ಲಿ ಶ್ರೀಮುರಳಿ ಎದುರು ಆಶಿಕಾ ರಂಗನಾಥ್ ನಾಯಕಿಯಾಗಿದ್ದಾರೆ. ಖಳನಟರಾಗಿ ಜಗಪತಿ ಬಾಬು ಇದ್ದಾರೆ, ಹಾಸ್ಯ ನಟ ಚಿಕ್ಕಣ್ಣ ಸೇರಿ ಇನ್ನೂ ಕೆಲವರು ಸಿನಿಮಾದಲ್ಲಿದ್ದಾರೆ.