For Quick Alerts
  ALLOW NOTIFICATIONS  
  For Daily Alerts

  'ಬಂಧನಕ್ಕೆ ಮುಂದಾದ್ರೆ ಪಕ್ಕಾ ನಾಟಕ ಶುರುವಾಗುತ್ತೆ': ಅನುಶ್ರೀ 'ಡ್ರಾಮಾ ಕ್ವೀನ್' ಎಂದ ಸಂಬರ್ಗಿ

  |

  ಡ್ರಗ್ಸ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರಿಗಿಂತ ಹೆಚ್ಚು ಗಮನ ಸೆಳೆಯುತ್ತಿದ್ದಾರೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ. ಅನುಶ್ರೀಗೆ ವಿಚಾರಣೆಗೆ ನೋಟಿಸ್ ನೀಡಿದ್ದು ಆಯ್ತು, ವಿಚಾರಣೆ ಎದುರಿಸಿ ಬಂದ ಅನುಶ್ರೀ ''ನಾನು ತಪ್ಪು ಮಾಡಿಲ್ಲ, ಬರಿ ವಿಚಾರಣೆ ಅಷ್ಟೆ'' ಎಂದು ಸಮರ್ಥನೆ ನೀಡಿದ್ದು ಆಯ್ತು. ಇಲ್ಲಿಗೆ ಎಲ್ಲವೂ ಮುಗಿದು ಹೋಗುತ್ತದೆ ಎಂದು ಅಂದುಕೊಂಡಿದ್ದರಿಗೆ ಪ್ರಶಾಂತ್ ಸಂಬರ್ಗಿ ಬೇರೆನೇ ಆಗಲಿದೆ ಎಂದು ಹೇಳುತ್ತಿದ್ದಾರೆ.

  ನಿರೂಪಕಿ ಅನುಶ್ರೀಯ ಬಂಧನಕ್ಕೆ ಪ್ರಭಾವಿ ವ್ಯಕ್ತಿಯೊಬ್ಬರು ತಡೆಗೋಡೆಯಾಗಿ ನಿಂತಿದ್ದಾರೆ ಎಂದು ಆರೋಪಿಸಿದ್ದ ಸಂಬರ್ಗಿ, ಈಗ ಪೊಲೀಸರು ಬಂಧನಕ್ಕೆ ಮುಂದಾದ್ರೆ ಹೊಸ ನಾಟಕ ಶುರುವಾಗುತ್ತದೆ'' ಎಂದು ಟೀಕಿಸಿದ್ದಾರೆ. ಮುಂದೆ ಓದಿ....

  ಅನುಶ್ರೀ ಬಂಧನಕ್ಕೆ 'ಪ್ರಭಾವಿ' ವ್ಯಕ್ತಿ ಅಡ್ಡಗಾಲು, ಸಂಬರ್ಗಿ ಹೇಳಿದ ಆ 'ಶುಗರ್ ಡ್ಯಾಡಿ' ಯಾರು?ಅನುಶ್ರೀ ಬಂಧನಕ್ಕೆ 'ಪ್ರಭಾವಿ' ವ್ಯಕ್ತಿ ಅಡ್ಡಗಾಲು, ಸಂಬರ್ಗಿ ಹೇಳಿದ ಆ 'ಶುಗರ್ ಡ್ಯಾಡಿ' ಯಾರು?

  ಕೊರೊನಾ ಇದೆ, ಹತ್ತಿರ ಬರಬೇಡಿ..

  ಕೊರೊನಾ ಇದೆ, ಹತ್ತಿರ ಬರಬೇಡಿ..

  ''ಕೊರೊನಾ ಇದೆ, ಹತ್ತಿರ ಬರಬೇಡಿ.. ಇದು ಇವತ್ತು ಪ್ರದರ್ಶನ ಆಗಲಿರೋ ಹೊಸಾ ಡ್ರಾಮ. ಪೊಲೀಸ್ ಅರೆಸ್ಟ್ ಮಾಡ್ತಾರೆ ಅಂತ ಗೊತ್ತಾದ ತಕ್ಷಣಕ್ಕೆ ಶುರು ಆಗುತ್ತೆ ಕಥೆ. ನಾಟಕದ ರಾಣಿಯ ಹೊಸ ಅವತಾರ ಇಂದು'' ಎಂದು ಪರೋಕ್ಷವಾಗಿ ಅನುಶ್ರೀಯ ವಿರುದ್ಧ ಫೇಸ್‌ಬುಕ್‌ನಲ್ಲಿ ಟೀಕಿಸಿದ್ದಾರೆ.

  ಕೊರೊನಾ ಪಾಸಿಟಿವ್ ಬಂದಿದ್ಯಾ?

  ಕೊರೊನಾ ಪಾಸಿಟಿವ್ ಬಂದಿದ್ಯಾ?

  ನಿನ್ನೆಯಷ್ಟೇ ನಿರೂಪಕಿ ಅನುಶ್ರೀ ಫೇಸ್‌ಬುಕ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದು, ''ಡ್ರಗ್ಸ್ ಪ್ರಕರಣದಲ್ಲಿ ನನ್ನದು ಯಾವುದೇ ಪಾತ್ರವಿಲ್ಲ, ವಿಚಾರಣೆಗೆ ಹೋದ ಮಾತ್ರಕ್ಕೆ ನಾನು ಅಪರಾಧಿಯಲ್ಲ, ದಯವಿಟ್ಟು ಸುಮ್ಮನೆ ವದಂತಿಗಳನ್ನು ಹಬ್ಬಿಸಬೇಡಿ'' ಎಂದು ಕಣ್ಣೀರಿಟ್ಟಿದ್ದರು. ಆದ್ರೆ, ಕೊರೊನಾ ಪಾಸಿಟಿವ್ ಬಗ್ಗೆ ಇದುವರೆಗೂ ಮಾಹಿತಿ ಇಲ್ಲ. ಈ ಬಗ್ಗೆ ಅನುಶ್ರೀ ಸಹ ಹೇಳಿಲ್ಲ.

  ಡ್ರಗ್ ಕೇಸ್: ನಟಿ ಅನುಶ್ರೀಗೆ ಸಮನ್ಸ್ ನೀಡಿದ್ದ ಇನ್ಸ್ ಪೆಕ್ಟರ್ ವರ್ಗ

  ಅನುಶ್ರೀ ರಾಜಕಾರಣಿಗೆ ಮೆಸೆಜ್ ಮಾಡಿದ್ದರು

  ಅನುಶ್ರೀ ರಾಜಕಾರಣಿಗೆ ಮೆಸೆಜ್ ಮಾಡಿದ್ದರು

  ''ಡ್ರಗ್ಸ್ ಪ್ರಕರಣದಲ್ಲಿ ನನಗೆ ಸಹಾಯ ಮಾಡಿ ಎಂದು ನಿರೂಪಕಿ ಅನುಶ್ರೀ ಅವರು ಸೆಪ್ಟೆಂಬರ್ 24 ರಂದು ಪ್ರಭಾವಿ ರಾಜಕಾರಣಿಗೆ ಸಂದೇಶ ಕಳುಹಿಸಿದ್ದರು'' ಎಂದು ಪ್ರಶಾಂತ್ ಸಂಬರ್ಗಿ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

  ಅನುಶ್ರೀ ಬಂಧನಕ್ಕೆ 'ಶುಗರ್ ಡ್ಯಾಡಿ' ತಡೆ

  ಅನುಶ್ರೀ ಬಂಧನಕ್ಕೆ 'ಶುಗರ್ ಡ್ಯಾಡಿ' ತಡೆ

  ಅನುಶ್ರೀ ಅವರನ್ನು ಪೊಲೀಸರು ಬಂಧಿಸಬೇಕಿತ್ತು. ಆದ್ರೆ, ಅದಕ್ಕೆ ಶುಗರ್ ಡ್ಯಾಡಿ ತಡೆಯಾಗಿದ್ದಾರೆ. ನಿರೂಪಕಿಯ ಬಂಧನಕ್ಕೆ ತಡೆದಿದ್ದಾರೆ ಎಂದು ಸಂಬರ್ಗಿ ಆರೋಪಿಸಿ ಫೇಸ್‌ಬುಕ್‌ನಲ್ಲಿ ವಾಗ್ದಾಳಿ ಮಾಡಿದ್ದಾರೆ. ಆ ಪ್ರಭಾವಿ ರಾಜಕಾರಣಿ ಯಾರು? ಸಂಬರ್ಗಿ ಹೇಳಿದ ಶುಗರ್ ಡ್ಯಾಡಿ ಯಾರು ಎಂದು ಹೇಳಿಲ್ಲ. ಇದು ಸಹಜವಾಗಿ ಸಾಮಾಜಿಕ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

  ಸಂಜನಾ, ರಾಗಿಣಿ ವಿಚಾರದಲ್ಲಿ ಯಡವಟ್ಟು ಮಾಡಿದ ಪೊಲೀಸ್ | Filmibeat Kannada
  ಅಧಿಕಾರಿಯ ವರ್ಗಾವಣೆ ಅನುಮಾನ!

  ಅಧಿಕಾರಿಯ ವರ್ಗಾವಣೆ ಅನುಮಾನ!

  ಮಂಗಳೂರಿನಲ್ಲಿ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿದ್ದ ಹಾಗೂ ಅನುಶ್ರೀಗೆ ನೋಟಿಸ್ ನೀಡಿದ್ದ ಸಿಸಿಬಿ ಇನ್ಸ್ ಪೆಕ್ಟರ್ ಶಿವಪ್ರಕಾಶ್ ನಾಯ್ಕ್ ಅವರನ್ನು ದಿಢೀರ್ ವರ್ಗಾವಣೆ ಮಾಡಲಾಗಿದ್ದು, ಲೋಕಾಯುಕ್ತಕ್ಕೆ ಕಳಿಸಲಾಗಿದೆ. ಇದು ಸಹಜವಾಗಿ ಅನುಮಾನ ಮೂಡಿಸಿದೆ. ಅನುಶ್ರೀ ವಿಚಾರಣೆ ಮಾಡಿದ್ದಕ್ಕೆ ಈ ವರ್ಗಾವಣೆ ಆಯ್ತಾ ಎಂದು ಪ್ರಶ್ನಿಸುತ್ತಿದ್ದಾರೆ.

  English summary
  Drugs case: Prashanth sambargi called Drama Queen to anchor Anushree.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X