For Quick Alerts
  ALLOW NOTIFICATIONS  
  For Daily Alerts

  ಅನುಶ್ರೀ ಬಂಧನಕ್ಕೆ 'ಪ್ರಭಾವಿ' ವ್ಯಕ್ತಿ ಅಡ್ಡಗಾಲು, ಸಂಬರ್ಗಿ ಹೇಳಿದ ಆ 'ಶುಗರ್ ಡ್ಯಾಡಿ' ಯಾರು?

  |

  ಡ್ರಗ್ಸ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮತ್ತು ನಿರೂಪಕಿ ಅನುಶ್ರೀ ಮಂಗಳೂರು ಸಿಸಿಬಿ ಪೊಲೀಸರ ವಿಚಾರಣೆ ಎದುರಿಸಿದ್ದಾರೆ. ಡ್ರಗ್ಸ್ ಪೆಡ್ಲರ್ ಗಳ ಜೊತೆ ನಟಿ ಅನುಶ್ರೀ ಪಾರ್ಟಿ ಮಾಡಿದ್ದಾರೆ, ಅವರ ಜೊತೆ ಸಂಪರ್ಕದಲ್ಲಿದ್ದಾರೆ ಎನ್ನುವ ಕಾರಣಕ್ಕೆ ಅನುಶ್ರೀಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು.

  ನೋಟಿಸ್ ನೀಡಿದ ಮಾತ್ರಕ್ಕೆ, ವಿಚಾರಣೆಗೆ ಹಾಜರಾದೆ ಎಂದ ಮಾತ್ರಕ್ಕೆ ಆರೋಪಿ ಎಂದೆಲ್ಲ ಎಂದು ಅನುಶ್ರೀ ಸ್ಪಷ್ಟನೆ ನೀಡಿದ್ದರು. ವಿಚಾರಣೆಗೆ ಸಂಪೂರ್ಣ ಸಹಕರಿಸುವುದಾಗಿ ಹೇಳಿದ್ದಾರೆ. ಇನ್ನೇನು ಅನುಶ್ರೀ ಪ್ರಕರಣ ಮುಗಿಯಿತು ಎನ್ನುವಷ್ಟೊತ್ತಿಗೆ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. ಮುಂದೆ ಓದಿ...

  ಫೇಸ್‌ಬುಕ್‌ನಲ್ಲಿ ವಿಡಿಯೋ ಪೋಸ್ಟ್ ಮಾಡಿ ಕಣ್ಣೀರಿಟ್ಟ ನಿರೂಪಕಿ ಅನುಶ್ರೀ

  ಅನುಶ್ರೀ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು?

  ಅನುಶ್ರೀ ಬಗ್ಗೆ ಪ್ರಶಾಂತ್ ಸಂಬರಗಿ ಹೇಳಿದ್ದೇನು?

  ಅನುಶ್ರೀ ಬಗ್ಗೆ ಪ್ರಶಾಂತ್ ಸಂಬರಗಿ ಹೊಸ ಬಾಂಬ್ ಸಿಡಿಸಿದ್ದಾರೆ. 'ಅನುಶ್ರೀ 'ಶುಗರ್ ಡ್ಯಾಡಿ' ಅನುಶ್ರೀ ಬಂಧನವನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ತುಂಬಾ ಸಮಯ ನಡೆಯಲ್ಲ. ಇನ್ನಷ್ಟು ರಹಸ್ಯಗಳು ಹೊರಬರಲಿವೆ.' ಎಂದು ಫೇಸ್ ಬಕ್ ನಲ್ಲಿ ಬರೆದುಕೊಂಡಿದ್ದಾರೆ. ಒಬ್ಬ ಪ್ರಭಾವಿ ವ್ಯಕ್ತಿ ಅನುಶ್ರೀ ರಕ್ಷಣೆಗೆ ನಿಂತಿದ್ದಾರೆ ಎಂದು ಸಂಬರಗಿ ಹೇಳುತ್ತಿದ್ದಾರೆ.

  ಶುಗರ್ ಡ್ಯಾಡಿ ಅಂದ್ರೆ ಯಾರು?

  ಶುಗರ್ ಡ್ಯಾಡಿ ಅಂದ್ರೆ ಯಾರು?

  ಸಂಬರಗಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದಂತೆ ಅನುಶ್ರೀ ಶುಗರ್ ಡ್ಯಾಡಿ ಯಾರು ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಹೀಗೆ ಪರೋಕ್ಷವಾಗಿ ಹೇಳುವುದಕ್ಕಿಂತ ಯಾರು ಎಂದು ನೇರವಾಗಿ ಹೇಳಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ. ಆ ಪ್ರಭಾವಿ ವ್ಯಕ್ತಿ ಯಾರು? ಅನುಶ್ರೀ ರಕ್ಷಣೆಗೆ ನಿಂತ ಆ ರಾಜಕಾರಣಿ ಯಾರು ಎನ್ನುವುದನ್ನು ಸಂಬರಗಿ ರಿವೀಲ್ ಮಾಡಿಲ್ಲ.

  ಪ್ರಭಾವಿ ವ್ಯಕ್ತಿಗಳಿಗೆ ಫೋನ್ ಮಾಡಿದ್ರಾ ಅನುಶ್ರೀ?

  ಪ್ರಭಾವಿ ವ್ಯಕ್ತಿಗಳಿಗೆ ಫೋನ್ ಮಾಡಿದ್ರಾ ಅನುಶ್ರೀ?

  ಅನುಶ್ರೀಗೆ ನೋಟಿಸ್ ಬರುತ್ತಿದ್ದಂತೆ ರಾಜ್ಯದ ಪ್ರಭಾವಿ ರಾಜಕಾರಣಿಗಳಿಗೆ ಕರೆ ಮಾಡಿ ಅವರ ಜೊತೆ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದೆ. ವಿಚಾರಣೆ ವೇಳೆ ಅನುಶ್ರೀ ಕರೆ ಮಾಡಿರುವ ಪ್ರಭಾವಿ ವ್ಯಕ್ತಿಗಳು ಯಾರು ಎನ್ನುವುದು ಬಹಿರಂಗವಾಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ.

  ವಿಡಿಯೋ ಮೂಲಕ ಕಣ್ಣೀರಿಟ್ಟ ಅನುಶ್ರೀ

  ವಿಡಿಯೋ ಮೂಲಕ ಕಣ್ಣೀರಿಟ್ಟ ಅನುಶ್ರೀ

  ''ಸೆಪ್ಟೆಂಬರ್ 24, 2020....ನನ್ನ ಜೀವನದಲ್ಲಿ ಮತ್ತೆ ಎಂದಿಗೂ ನೆನಪಿಸಿಕೊಳ್ಳಲು ಇಷ್ಟ ಪಡದ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಗೆದ್ದಾಗ ಅಂದುಕೊಂಡಿರಲಿಲ್ಲ. ಮತ್ತೆ ಅದೇ ದಿನ ನನಗೆ ಜೀವನದಲ್ಲಿ ಮುಳ್ಳಾಗಿ ಬರುತ್ತೆ ಅಂತ. ಈ ವಿಡಿಯೋವನ್ನು ನನ್ನನ್ನು ನಾನು ಸಮರ್ಥನೆ ಮಾಡಿಕೊಳ್ಳುವುದಕ್ಕೋ ಅಥವಾ ಕರುಣೆಗಾಗಿ ಮಾಡ್ತಿಲ್ಲ. ನನ್ನ ಸುತ್ತ ಹಲವು ಚರ್ಚೆಗಳು ಆಗ್ತಿರುವ ಕಾರಣ ಈ ವಿಡಿಯೋ ಮಾಡ್ತಿದ್ದೀನಿ'' ಎಂದು ನೋವು ಹಂಚಿಕೊಂಡಿದ್ದಾರೆ ಅನುಶ್ರೀ.

  ಡ್ರಗ್ಸ್ ಪ್ರಕರಣ: ಸಿಸಿಬಿ ವಿಚಾರಣೆ ಬಳಿಕ ಅನುಶ್ರೀ ಹೇಳಿದ್ದೇನು?

  ಕರುಣೆ ಬರ್ಲಿ ನನ್ ಮೇಲೆ ಅಂತ ನಾನು ಈ ವಿಡಿಯೋ ಮಾಡ್ತಿಲ್ಲ | Anushree | Filmibeat Kannada
  ನಮ್ಮ ಮನೆಯವರ ನೆಮ್ಮದಿ ಹಾಳಾಗಿದೆ

  ನಮ್ಮ ಮನೆಯವರ ನೆಮ್ಮದಿ ಹಾಳಾಗಿದೆ

  ''ಸಿಸಿಬಿ ನೋಟಿಸ್ ಬಂದಿದ್ದು ಬೇಜಾರಾಗಿಲ್ಲ. ವಿಚಾರಣೆಗಾಗಿ ನಾನು ಹೋದ ಮಾತ್ರಕ್ಕೆ ಅಪರಾಧಿ ಅಥವಾ ಆರೋಪಿಯಾಗಲ್ಲ. ಈ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ತುಂಬಾ ನೋವು ಉಂಟು ಮಾಡಿದೆ. ನೋವು ಎನ್ನುವುದು ತುಂಬ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿ ಹಾಳು ಮಾಡಿದೆ'' ಎಂದು ಕಣ್ಣೀರಿಟ್ಟಿದ್ದಾರೆ.

  English summary
  Prashanth Sambargi says Anushree's sugar daddy has managed to prevent her arrest till now.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X