For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ಸುದೀಪ್‌ ಸಂಬಂಧದಲ್ಲಿ ಏನಾಗಬೇಕು? ಒಳ್ಳೆ ಹುಡುಗನ ಲೆಕ್ಕಾಚಾರ!

  |

  ಗಳಸ್ಯ-ಕಂಠಸ್ಯ ಎಂಬಂತಿದ್ದ ದರ್ಶನ್ ಮತ್ತು ಸುದೀಪ್ ಪ್ರಸ್ತುತ ಉತ್ತರ ಧ್ರುವ-ದಕ್ಷಿಣ ಧ್ರುವ ಆಗಿದ್ದಾರೆ. ಒಂದು ಕಾಲದ ಸ್ನೇಹಿತರು ಈಗ ಬಹು ದೂರವಾಗಿಬಿಟ್ಟಿದ್ದಾರೆ.

  Ayogya ಸಿನಿಮಾದ ಕ್ಲೈಮ್ಯಾಕ್ಸ್ ಸನ್ನಿವೇಶದ ತೆರೆ ಹಿಂದಿನ ದೃಶ್ಯ | Ayogya Climax Making | Filmibeat Kannada

  ಆದರೆ ಇವರಿಬ್ಬರಿಗೂ ಸಂಬಂಧವಿದೆ ಎಂದು 'ಸಾಬೀತು' ಮಾಡಿದ್ದಾರೆ ಒಳ್ಳೆ ಹುಡ್ಗ ಪ್ರಥಮ್. ಹೌದು, ದರ್ಶನ್‌ ಗೆ ಸುದೀಪ್‌ ಸಂಬಂಧದಲ್ಲಿ ಸೋದರ ಮಾವ ಆಗಬೇಕಂತೆ. ಹೀಗೊಂದು ಡಿಫರೆಂಟ್ ವಾದ ಮುಂದಿಟ್ಟಿದ್ದಾರೆ ಪ್ರಥಮ್.

  ರವಿಶಂಕರ್ ಗೌಡ ಹುಟ್ಟುಹಬ್ಬಕ್ಕೆ ಸ್ಪೆಷಲ್ ಉಡುಗೊರೆ ಕಳುಹಿಸಿದ ಸುದೀಪ್

  ಒಳ್ಳೆ ಹುಡುಗ ಪ್ರಥಮ್ ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹಾಸ್ಯ ತುಂಬಿದ, ವ್ಯಂಗ್ಯದ ಪೋಸ್ಟ್‌ಗಳನ್ನು ಮಾಡುತ್ತಿರುತ್ತಾರೆ. ಈಗಲೂ ಅಂಥಹದ್ದೇ ಒಂದು ಪ್ರಯತ್ನವಾಗಿ ದರ್ಶನ್‌ ಗೆ ಸುದೀಪ್ ಸೋದರ ಮಾವ ಆಗಬೇಕೆಂಬ ವಾದ ಮುಂದಿಟ್ಟಿದ್ದಾರೆ ಅದಕ್ಕೆ 'ಸಾಕ್ಷ್ಯ'ವನ್ನೂ ನೀಡಿದ್ದಾರೆ.

  ಸುಮಲತಾ ಅವರನ್ನು ಅಮ್ಮ ಅನ್ನುತ್ತಾರೆ ದರ್ಶನ್

  ಸುಮಲತಾ ಅವರನ್ನು ಅಮ್ಮ ಅನ್ನುತ್ತಾರೆ ದರ್ಶನ್

  ಇಂದು ನಟಿ, ಸಂಸದೆ ಸುಮಲತಾ ಅಂಬರೀಶ್ ಹುಟ್ಟುಹಬ್ಬ. ಹುಟ್ಟುಹಬ್ಬಕ್ಕೆ ದರ್ಶನ್ ವಿಶ್ ಮಾಡಿ, 'ಸುಮಲತಾ ಅಮ್ಮನವರಿಗೆ ಹುಟ್ಟುಹಬ್ಬದ ಶುಭಾಶಯ' ಎಂದಿದ್ದಾರೆ. ದರ್ಶನ್ ಅವರು ಸುಮಲತಾ ಅವರಿಗೆ ಅಮ್ಮನೆಂದೇ ಸಂಭೋಧಿಸುವ ರೂಡಿ ಇಟ್ಟುಕೊಂಡಿದ್ದಾರೆ. ಸುಮಲತಾ ಅವರಿಗೂ ದರ್ಶನ್ ಮಗನಂತೆಯೇ.

  ಸುಮಲತಾ ಅವರನ್ನು ಅಕ್ಕ ಅಂದಿದ್ದಾರೆ ಸುದೀಪ್

  ಸುಮಲತಾ ಅವರನ್ನು ಅಕ್ಕ ಅಂದಿದ್ದಾರೆ ಸುದೀಪ್

  ಸುದೀಪ್ ಸಹ ಸುಮಲತಾ ಅವರಿಗೆ ವಿಶ್ ಮಾಡಿದ್ದು, 'ಸುಮಲತಾ ಅಕ್ಕ ಅವರಿಗೆ ಹುಟ್ಟುಹಬ್ಬದ ಶುಭಾಶಯ. ಆರೋಗ್ಯ, ಐಶ್ವರ್ಯ ನಿಮ್ಮದಾಗಲಿ' ಎಂದು ಹಾರೈಸಿದ್ದಾರೆ. ಸುದೀಪ್ ಅವರು ಸುಮಲತಾ ಅವರಿಗೆ ಅಕ್ಕ ಎಂದು ಕರೆದಿದ್ದಾರೆ.

  ಅತಿ ಹೆಚ್ಚು ಟ್ವಿಟ್ಟರ್ ಫಾಲೋವರ್ಸ್ ಹೊಂದಿರುವ ಕನ್ನಡ ನಟ ಯಾರು?

  ಹಾಗಿದ್ದರೆ ದರ್ಶನ್‌ಗೆ ಸುದೀಪ್ ಸೋದರ ಮಾವ ಆಗ್ಬೇಕಲ್ವೆ?

  ಹಾಗಿದ್ದರೆ ದರ್ಶನ್‌ಗೆ ಸುದೀಪ್ ಸೋದರ ಮಾವ ಆಗ್ಬೇಕಲ್ವೆ?

  ಈ ಇಬ್ಬರೂ ನಟರು ಸುಮಲತಾ ಅವರಿಗೆ ಮಾಡಿರುವ ವಿಶ್ ಗಮನಿಸಿದ ಪ್ರಥಮ್. ಸುಮಲತಾ ಅವರು ದರ್ಶನ್‌ ಗೆ ಅಮ್ಮ ಆದರೆ, ಸುದೀಪ್‌ಗೆ ಅಕ್ಕ ಆಗಿದ್ದರೆ. ಸುದೀಪ್, ದರ್ಶನ್‌ ಗೆ ಸೋದರ ಮಾವ ಆಗಬೇಕಲ್ಲವೇ ಎಂಬ ತರ್ಲೆ ಪ್ರಶ್ನೆ ಮುಂದಿಟ್ಟಿದ್ದಾರೆ ಪ್ರಥಮ್. ಅಷ್ಟೆ ಅಲ್ಲ ಸುಮಲತಾ ಅವರನ್ನು ದೊಡ್ಡಮ್ಮ ಎಂದು ಕರೆದಿದ್ದಾರೆ ಪ್ರಥಮ್.

  ಇದು ಪ್ರಥಮ್ ಮಾಡಿರುವ ಟ್ವೀಟ್

  ಇದು ಪ್ರಥಮ್ ಮಾಡಿರುವ ಟ್ವೀಟ್

  'ದರ್ಶನ್ ಅವರಿಗೆ ಅಮ್ಮ, ಸುದೀಪ್ ಅವರಿಗೆ ಅಕ್ಕ ಹಾಗಿದ್ರೆ, ದರ್ಶನ್ ಸರ್‌ ಗೆ ಸುದೀಪ್ ಅವರು ಲೆಕ್ಕಾಚಾರದ ಪ್ರಕಾರ ಸೋದರ ಮಾವ ಆಗ್ತಾರೆ. ಅಂತೂ ಸಿನಿಮಾ ಇಂಡಸ್ಟ್ರಿ ಒಂದೇ ಕುಟುಂಬ ಅನ್ನೋದು ನಿಜ ಆಯಿತು. ಹ್ಯಾಪಿ ಬರ್ತಡೇ ಸುಮಲತಾ ದೊಡ್ಡಮ್ಮ. ನಮ್ಮಮ್ಮನಿಗಿಂತ ಸ್ವಲ್ಪ ದೊಡ್ಡವರು ನೀವು‌. ಹಾಗಾಗಿ ನಾನು ದೊಡ್ಡಮ್ಮನ್ನ ಮಾಡ್ಕೊಂಡೆ' ಹೀಗೆಂದು ಟ್ವೀಟ್ ಮಾಡಿದ್ದಾರೆ ಪ್ರಥಮ್.

  ಕೊರೊನಾ ವೈರಸ್ ಭಯ: ಗುಣಮುಖರಾದ ಸುಮಲತಾ ಅಂಬರೀಷ್ ಹೇಳಿದ ಕಿವಿಮಾತು

  English summary
  Olle Hudga Pratham did funny tweet about Darshan and Sudeep relationship.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X