Don't Miss!
- News
Aero India 2023: ಬೆಂಗಳೂರು ಯಲಹಂಕದಲ್ಲಿ ನಿರ್ಮಾಣ ಹಂತದ ಕಟ್ಟಡಗಳ ಕ್ರೇನ್ ಎತ್ತರ ಇಳಿಕೆಗೆ ಸೂಚನೆ
- Automobiles
ಹೋಂಡಾ ಆಕ್ಟೀವಾ 6Gಗೆ ಸೆಡ್ಡು ಹೊಡೆಯಲು ಮಾರುಕಟ್ಟೆಗಿಳಿದ ಹೀರೋ Xoom... ಏನಿದರ ವಿಶೇಷತೆ!
- Finance
Economic Survey 2022-23: ಆರ್ಥಿಕ ಸಮೀಕ್ಷೆಯ ಪ್ರಮುಖಾಂಶ ಇಲ್ಲಿದೆ
- Technology
ಜಿಯೋ ಟ್ರೂ 5G ಸೇವೆ ಈಗ ಚಿತ್ರದುರ್ಗದಲ್ಲಿಯೂ ಲಭ್ಯ!..5G ರೀಚಾರ್ಜ್ ಬೆಲೆ ಎಷ್ಟು?
- Sports
WIPL 2023: ಮಹಿಳಾ ಐಪಿಎಲ್ನಲ್ಲಿ ಗುಜರಾತ್ ಜೈಂಟ್ಸ್ ತಂಡದ ಮೆಂಟರ್ ಆಗಿ ಮಿಥಾಲಿ ರಾಜ್ ನೇಮಕ
- Lifestyle
ಥೈರಾಯ್ಡ್ ನಿಯಂತ್ರಣಕ್ಕೆ ಕೊತ್ತಂಬರಿ ಹೇಗೆ ಸಹಕಾರಿ ನೋಡಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'96' ಸಿನಿಮಾ ಕನ್ನಡದಲ್ಲಿ : ಹೀರೋ, ಡೈರೆಕ್ಟರ್ ಇವರೇ!
Recommended Video

ಈ ವರ್ಷ ಸೌತ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಪ್ರೇಕ್ಷಕರ ಪ್ರೀತಿ ಪಡೆದ ಸಿನಿಮಾ '96'. ವಿಜಯ್ ಸೇತುಪತಿ ಹಾಗೂ ತ್ರಿಶಾ ಪ್ರೇಮ ಕಥೆ ಎಲ್ಲರ ಮನಸ್ಸು ತಟ್ಟಿತ್ತು. ಎಲ್ಲರಿಗೂ ಅವರವರ ಲವ್ ಸ್ಟೋರಿಯನ್ನು ಈ ಸಿನಿಮಾ ನೆನಪು ಮಾಡಿತ್ತು.
'96' ಮಧುರ ಭಾವನೆಗಳ ಮಂದಿರ. ಈ ಹಿಂದೆ ಎಷ್ಟೋ ಪ್ರೇಮಕಥೆ ನೋಡಿದ್ದ ಜನರಿಗೆ ಈ ಸಿನಿಮಾ ಮತ್ತೊಂದು ಹೊಸ ಅನುಭವ ನೀಡಿತ್ತು. ಇಂತಹ ಸೂಪರ್ ಹಿಟ್ ಸಿನಿಮಾ ಈಗ ಕನ್ನಡದಲ್ಲಿ ಬರುತ್ತಿದೆ. ಸ್ಯಾಂಡಲ್ ವುಡ್ ನಲ್ಲಿ ರಿಮೇಕ್ ಆಗುತ್ತಿರುವ ಈ ಚಿತ್ರಕ್ಕೆ ಈಗಾಗಲೇ ನಟ, ನಿರ್ದೇಶಕ ಹಾಗೂ ನಿರ್ಮಾಪಕರ ಹೆಸರು ಬಹಿರಂಗವಾಗಿದೆ.
ಗಣೇಶ್
ಮನೆಯಲ್ಲಿ
ತಾರೆಯರ
ಸಂಭ್ರಮದ
ದೀಪಾವಳಿ
ಈ ಕುರಿತು ಸಿನಿಮಾದ ನಿರ್ದೇಶಕರು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತನಾಡಿದ್ದು, ಚಿತ್ರದ ಬಗ್ಗೆ ಹೆಚ್ಚಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...

ಪ್ರೀತಮ್ ಗುಬ್ಬಿ ನಿರ್ದೇಶನ
'96' ಸಿನಿಮಾವನ್ನು ಕನ್ನಡಕ್ಕೆ ತಂದಿರುವುದು ನಿರ್ದೇಶಕ ಪ್ರೀತಮ್ ಗುಬ್ಬಿ. ಈಗಾಗಲೇ ಅನೇಕ ಪ್ರೇಮಕಥೆ ಹೇಳಿ ಗೆದ್ದಿರುವ ಅವರು ಈಗ ಮತ್ತೊಮ್ಮೆ ಲವ್ ಸ್ಟೋರಿ ಮೂಲಕ ಕಮ್ ಬ್ಯಾಕ್ ಮಾಡುವ ತಯಾರಿಯಲ್ಲಿದ್ದಾರೆ. 'ಜಾನಿ ಜಾನಿ ಎಸ್ ಪಪ್ಪಾ' ಬಳಿಕ ಈ ಸಿನಿಮಾವನ್ನು ಪ್ರೀತಮ್ ಗುಬ್ಬಿ ಕೈಗೆತ್ತಿಕೊಂಡಿದ್ದಾರೆ. ಸಿನಿಮಾದ ಬಗ್ಗೆ ಸ್ವತಃ ಅವರೇ ಸಂತಸ ಹಂಚಿಕೊಂಡಿದ್ದಾರೆ.

ವಿಜಯ್ ಸೇತುಪತಿಯಾದ ಗಣೇಶ್
ಕಾಲಿವುಡ್ ನಲ್ಲಿ ಹೊಸ ಟ್ರೆಂಡ್ ಶುರು ಮಾಡಿರುವ ವಿಜಯ್ ಸೇತುಪತಿ '96' ಚಿತ್ರದ ಕೆ ರಾಮಚಂದ್ರನ್ ಪಾತ್ರಕ್ಕೆ ಜೀವ ತುಂಬಿದ್ದರು. ಕನ್ನಡದಲ್ಲಿ ಆ ಪಾತ್ರದಲ್ಲಿ ಗಣೇಶ್ ನಟಿಸುತ್ತಿದ್ದಾರೆ. ಈ ಮೂಲಕ ಮತ್ತೊಮ್ಮೆ ಪ್ರೀತಮ್ ಗುಬ್ಬಿ ಹಾಗೂ ಗಣೇಶ್ ಒಂದಾಗಿದ್ದಾರೆ. ಈ ಗೋಲ್ಡನ್ ಚಿತ್ರಕ್ಕೆ ಗೋಲ್ಡನ್ ಸ್ಟಾರ್ ಹೀರೋ ಆಗಿದ್ದಾರೆ.
ಹ್ಯಾಟ್ರಿಕ್
ಸಿನಿಮಾಗಾಗಿ
ಮತ್ತೆ
ಒಂದಾದ
ಗಣೇಶ್
-
ಪ್ರೀತಮ್
ಗುಬ್ಬಿ

'99' ಆಗಿ ಬದಲಾದ '96'
'96' ಸಿನಿಮಾಗೆ ಕನ್ನಡದಲ್ಲಿ '99' ಎಂಬ ಹೆಸರನ್ನು ಇಡಲಾಗಿದೆ. '99' ಬ್ಯಾಚ್ ವಿಧ್ಯಾರ್ಥಿಗಳ ಕಥೆ ಇಲ್ಲಿ ಇರಲಿದೆ. ರಾಮು ಫಿಲ್ಮ್ಸ್ ಬ್ಯಾನರ್ ನಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ. ತಮಿಳಿನಲ್ಲಿ ಸಿನಿಮಾ ನೋಡಿ ಇಷ್ಟ ಪಟ್ಟ ರಾಮು ಅದನ್ನು ಕನ್ನಡಕ್ಕೆ ತರುತ್ತಿದ್ದಾರೆ.

ನಾಯಕಿ ಯಾರು ?
ಈ ಸಿನಿಮಾದ 'ಜಾನು' ಪಾತ್ರವನ್ನು ಯಾರು ಮರೆಯಲು ಸಾಧ್ಯವಿಲ್ಲ. ನಟಿಯ ಪಾತ್ರ ಚಿತ್ರದಲ್ಲಿ ತುಂಬನೇ ಗಟ್ಟಿಯಾಗಿದೆ. ಈ ಪಾತ್ರಕ್ಕೆ ಸದ್ಯಕ್ಕೆ ನಾಯಕಿಯ ಆಯ್ಕೆ ಇನ್ನು ಆಗಿಲ್ಲ. ಈಗಾಗಲೇ ಚಿತ್ರರಂಗದಲ್ಲಿ ಇರುವ ನಾಯಕಿಯನ್ನೇ ಈ ಪಾತ್ರವಾಗಿ ನೋಡಬೇಕು ಎಂಬುದು ಚಿತ್ರತಂಡದ ಬಯಕೆ. ತಮಿಳಿನಲ್ಲಿ ಈ ಪಾತ್ರದಲ್ಲಿ ಅದ್ಬುತವಾಗಿ ತ್ರಿಶಾ ನಟಿಸಿದ್ದರು.
ಗಣೇಶ್
ಗೆ
ಸಿಕ್ಕ
'ಗೀತಾ'
:
ಕನ್ನಡಕ್ಕೆ
ಬಂದ
ಮತ್ತೊಬ್ಬ
ಮಲೆಯಾಳಂ
ಹುಡುಗಿ

ಅರ್ಜುನ್ ಜನ್ಯ ಮ್ಯೂಸಿಕ್
'96' ಸಿನಿಮಾದ ಗೆಲುವಿನಲ್ಲಿ ಕಾರಣವಾದ ಅಂಶಗಳಲ್ಲಿ ಮ್ಯೂಸಿಕ್ ಕೂಡ ಒಂದಾಗಿತ್ತು. ಕನ್ನಡಕ್ಕೆ ಈ ಸಿನಿಮಾದ ಸಂಗೀತದ ಜವಾಬ್ದಾರಿಯನ್ನು ಅರ್ಜುನ್ ಜನ್ಯ ವಹಿಸಿಕೊಂಡಿದ್ದಾರೆ. ಈ ಹಿಂದೆ ಪ್ರೀತಮ್ ಗುಬ್ಬಿ ಹಾಗೂ ಗಣೇಶ್ ಕಾಂಬಿನೇಶನ್ ನಲ್ಲಿ ಬಂದ 'ದಿಲ್ ರಂಗೀಲ' ಚಿತ್ರಕ್ಕೆ ಸಹ ಅರ್ಜುನ್ ಮ್ಯೂಸಿಕ್ ನೀಡಿದ್ದರು.

ಜನವರಿಗೆ ಶುರು
ಪ್ರೀತಮ್ ಗುಬ್ಬಿ ತಿಳಿಸಿರುವ ಪ್ರಕಾರ ಸಿನಿಮಾ ಮುಂದಿನ ವರ್ಷದ ಪ್ರಾರಂಭದಲ್ಲಿ ಶುರು ಮಾಡುವ ಆಲೋಚನೆ ಇದೆಯಂತೆ. ಸದ್ಯ, ಈ ಚಿತ್ರದ ಹೊರತು ಪಡಿಸಿ ಗಣೇಶ್ 'ಗೀತಾ' ಹಾಗೂ 'ಗಿಮಿಕ್' ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ.