»   » ಇನ್ನೂರು ಚಿತ್ರಮಂದಿರಗಳಿಗೆ ಪ್ರೇಮ್ ಅಡ್ಡ ಲಗ್ಗೆ

ಇನ್ನೂರು ಚಿತ್ರಮಂದಿರಗಳಿಗೆ ಪ್ರೇಮ್ ಅಡ್ಡ ಲಗ್ಗೆ

Posted By:
Subscribe to Filmibeat Kannada
ಈ ವರ್ಷ ನಾನಾ ಕಾರಣಗಳಿಗಾಗಿ ಸುದ್ದಿ ಮಾಡಿರುವ ಮತ್ತೊಂದು ಕನ್ನಡ ಚಿತ್ರ ಪ್ರೇಮ್ ಅಡ್ಡ. ಮಹೇಶ್ ಬಾಬು ಆಕ್ಷನ್ ಕಟ್ ಹೇಳಿರುವ ಈ ಚಿತ್ರ ನವೆಂಬರ್ 30ಕ್ಕೆ ಇನ್ನೂರಕ್ಕೂ ಹೆಚ್ಚು ಚಿತ್ರಮಂದಿರಗಳಿಗೆ ಲಗ್ಗೆ ಹಾಕುತ್ತಿದೆ.

ತಮಿಳಿನ ಯಶಸ್ವಿ ಸುಬ್ರಹ್ಮಣ್ಯಪುರಂ ರೀಮೇಕ್ ಚಿತ್ರವಿದು. ಬೇರೆಯವರ ನಿರ್ದೇಶನದಲ್ಲಿ ಪ್ರೇಮ್ ಅಭಿನಯಿಸುತ್ತಿರುವ ಮೊಟ್ಟ ಮೊದಲ ಚಿತ್ರ. ಕೃತಿ ಖರಬಂಧ ಚಿತ್ರದ ನಾಯಕಿ. ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಿರುವ ಬಂಗಾರದ ಜಿಂಕೆ ಐಂದ್ರಿತಾ ರೇ ತಮ್ಮ ಸೊಂಟ ಕುಣಿಸಿದ್ದಾರೆ.

"ಮೇಲುಕೋಟೆ ಹುಡುಗಿ ಒಬ್ಳು ಪಡುವಾರಳ್ಳಿ ಜಾತ್ರೇನಾಗ ಇಣುಕಿ ಇಣುಕಿ ನೋಡುತ್ತಾಳೆ ಏನ್ ಸಿಂಗಾರ.." ಎಂಬ ಹಾಡು ಈಗಾಗಲೆ ಮೊಬೈಲ್ ಗಳಲ್ಲಿ, ಎಫ್ಎಂ ರೇಡಿಯೋಗಳಲ್ಲಿ ಎಲ್ಲೆಂದರಲ್ಲಿ ಸದ್ದು ಮಾಡುತ್ತಿದೆ. ಈ ಹಾಡನಲ್ಲಿನ ಮೇಲುಕೋಟೆ ಬದಲಾಗಿ ಏಳುಕೋಟೆ ಬಳಸುವುದಾಗಿ ಪ್ರೇಮ್ ಹೇಳಿದ್ದಾರೆ.

ಪ್ರೇಮ್ ನಟನೆಯ 'ಪ್ರೀತಿ ಏಕೆ ಭೂಮಿ ಮೇಲಿದೆ' ಚಿತ್ರ ಸೋತಮೇಲೆ ಪ್ರೇಮ್ ನಟನಾಗುವುದಕ್ಕೆ ಲಾಯಕ್ಕೇ ಎಂಬ ಪ್ರಶ್ನೆ ಉದ್ಯಮದಲ್ಲಿ ಹಾಗೂ ಕನ್ನಡ ಸಿನಿಪ್ರೇಕ್ಷಕ ವಲಯದಲ್ಲಿ ಕೇಳಿಬಂದಿತ್ತು. ನಂತರ ಶಿವರಾಜ್ ಕುಮಾರ್ ಅಭಿನಯ ಹಾಗೂ ಪ್ರೇಮ್ ನಿರ್ದೇಶನದ 'ಜೋಗಯ್ಯ' ಚಿತ್ರ ಸೋತ ಮೇಲೆ ಪ್ರೇಮ್ ನಿರ್ದೇಶನದ ಬಗ್ಗೆಯೂ ಅಪಸ್ವರ ಕೇಳಿಬಂತು. ಆದರೆ ಇದೀಗ ಬಿಡುಗಡೆಯಾಗುತ್ತಿರುವ 'ಪ್ರೇಮ್ ಅಡ್ಡ' ಎಲ್ಲ ಪ್ರಶ್ನೆ, ಅಪಸ್ವರಗಳಿಗೂ ಉತ್ತರ ನೀಡಿದರೆ ಅಚ್ಚರಿಯಿಲ್ಲ. (ಏಜೆನ್ಸೀಸ್)

English summary
Kannada film Prem Adda all set to release on 30th November in about 200 theaters. The film is directed by Mahesh Babu and the film music is scored by V. Harikrishna. The film is the remake of Tamil film Subramaniapuram.
Please Wait while comments are loading...