ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮುಗಿಸಿದ ನಿರ್ದೇಶಕ ಪ್ರೇಮ್
Recommended Video

'ದಿ ವಿಲನ್' ಚಿತ್ರದ ನಂತರ ನಿರ್ದೇಶಕ ಪ್ರೇಮ್ ಯಾವ ಸಿನಿಮಾ ಮಾಡ್ತಾರೆ ಎಂಬ ಕುತೂಹಲಕ್ಕೆ ಬ್ರೇಕ್ ಹಾಕಿದ್ದು, ಈಗಾಗಲೇ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿ ಮುಗಿಸಿದ್ದಾರೆ. ಪ್ರೇಮ್ ಮತ್ತು ಪತ್ನಿ ರಕ್ಷಿತಾ ಪ್ರೇಮ್ ಇಬ್ಬರು ಸೇರಿ ಹೊಸ ಚಿತ್ರದ ಸ್ಕ್ರಿಪ್ಟ್ ಪೂಜೆ ಮಾಡಿದ್ದಾರೆ.
ಮಾರ್ಚ್ 31ಕ್ಕೆ ರಕ್ಷಿತಾ ಪ್ರೇಮ್ ಅವರ ಹುಟ್ಟಹಬ್ಬವಿದ್ದು, ಆ ವಿಶೇಷ ದಿನದಂದು ತಮ್ಮ ಹೊಸ ಪ್ರಾಜೆಕ್ಟ್ ಘೋಷಣೆ ಮಾಡಲಿದ್ದಾರೆ. ಈ ಚಿತ್ರದ ಮೂಲಕ ತಮ್ಮ ಕುಟುಂಬದಿಂದ ಒಬ್ಬರ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎಂದು ಕೂಡ ಹೇಳಿದ್ದಾರೆ.
ಅಲ್ಲಿಗೆ ರಕ್ಷಿತಾ ಅವರ ಸಹೋದರ ಅಭಿಷೇಕ್ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡೋದು ಬಹುತೇಕ ಖಚಿತವಾಗಿದೆ. ಈ ಚಿತ್ರವನ್ನ ಸ್ವತಃ ರಕ್ಷಿತಾ ಪ್ರೇಮ್ ಅವರೇ ನಿರ್ಮಾಣ ಮಾಡುತ್ತಿದ್ದು, ತಮ್ಮದೇ ಬ್ಯಾನರ್ ನಲ್ಲಿ ತಮ್ಮ ಸಹೋದರನನ್ನು ಪರಿಚಯಿಸಲು ಪ್ರೇಮ್ ದಂಪತಿ ಸಜ್ಜಾಗಿದ್ದಾರೆ.
ಸದ್ಯ, ಸ್ಕ್ರಿಪ್ಟ್ ಪೂಜೆ ಮುಗಿಸಿರುವ ಪ್ರೇಮ್ 'ಎಕ್ಸ್ ಕ್ಯೂಸಮಿ 2' ಎಂದು ಸಿನಿಮಾ ಹೆಸರಿಡಲಿದ್ದಾರೆ ಎನ್ನಲಾಗಿದೆ. ವಿಶೇಷ ಅಂದ್ರೆ, ಈ ಚಿತ್ರಕ್ಕೆ ನಾಯಕಿಯಾಗಿ ಸುಧಾರಾಣಿ ಅವರ ಮಗಳನ್ನ ಕರೆತರುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನುಳಿದಂತೆ ಆರು ಜನ ಕಲಾವಿದರ ಜೊತೆ ದೊಡ್ಡ ಬಜೆಟ್ ಸಿನಿಮಾ ಮಾಡುವ ಯೋಜನೆಯನ್ನ ಕೂಡ ಪ್ರೇಮ್ ಹಾಕಿಕೊಂಡಿದ್ದು, ಈ ಸಿನಿಮಾ ಬಳಿಕ ಅದನ್ನ ಟೇಕ್ ಆನ್ ಮಾಡಲಿದ್ದಾರಂತೆ.


Click it and Unblock the Notifications











