Just In
Don't Miss!
- News
'ಮಮತಾರನ್ನು 50 ಸಾವಿರ ಮತಗಳಿಂದ ಸೋಲಿಸದಿದ್ದರೆ ರಾಜಕೀಯ ತ್ಯಜಿಸುತ್ತೇನೆ'
- Automobiles
ಇನ್ಮುಂದೆ ಮನೆ ಬಾಗಿಲಿಗೆ ಡೀಸೆಲ್ ಪೂರೈಕೆ ಮಾಡಲಿದೆ ಹೊಸ ಸ್ಟಾರ್ಟ್ ಅಪ್ ಕಂಪನಿ
- Education
IIMB Recruitment 2021: ಪ್ರಾಜೆಕ್ಟ್ ಎಕ್ಸಿಕ್ಯುಟಿವ್- ಡೆವಲಪ್ಮೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಐಎಸ್ಎಲ್: ಚೆನ್ನೈಯಿನ್ ಎಫ್ಸಿ vs ಎಸ್ಸಿ ಈಸ್ಟ್ ಬೆಂಗಾಲ್, Live ಸ್ಕೋರ್
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 18ರ ಚಿನ್ನ, ಬೆಳ್ಳಿ ದರ
- Lifestyle
ಬಂಜೆತನಕ್ಕೆ ಕಾರಣವಾಗುವ ಥೈರಾಯ್ಡ್ ಲಕ್ಷಣಗಳು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡಕ್ಕೆ ಬರ್ತಿದ್ದಾರೆ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್?
ಪ್ರಿಯಾ ಪ್ರಕಾಶ್ ವಾರಿಯರ್ ಕಣ್ಸನ್ನೆಯ ಮೂಲಕ ರಾತ್ರೊ ರಾತ್ರಿ ಸ್ಟಾರ್ ಆದ ಮಲಯಾಳಿ ನಟಿ. 'ವರು ಆಡಾರ್ ಲವ್' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಪ್ರಿಯಾ ಮೊದಲ ಸಿನಿಮಾದಲ್ಲೆ ಸೆನ್ಸೆಷನ್ ಸೃಷ್ಟಿಸಿದವರು. ಈ ಸಿನಿಮಾ ಹೇಳುವಷ್ಟು ಮಟ್ಟಕ್ಕೆ ಸಕ್ಸಸ್ ಕಾಣದಿದ್ರು ಪ್ರಿಯಾ ಮಾತ್ರ ಸ್ಟಾರ್ ನಟಿಯಾಗಿ ಹೊರಹೊಮ್ಮಿದ್ರು.
ಇಂಟರ್ ನೆಟ್ ನಲ್ಲಿ ಖ್ಯಾತಿಗಳಿಸುತ್ತಿದಂತೆ ಪ್ರಿಯಾ ಬಾಲಿವುಡ್ ನತ್ತ ಮುಖಮಾಡಿದ್ರು. 'ಶ್ರೀದೇವಿ ಬಂಗ್ಲೋ' ಚಿತ್ರದಲ್ಲಿ ಅಭಿನಯಿಸುವ ಮೂಲಕ ಬಾಲಿವುಡ್ ನಲ್ಲಿ ಖಾತೆ ಓಪನ್ ಮಾಡಿದ್ರು. ಮೊದಲ ಹಿಂದಿ ಸಿನಿಮಾ ರಿಲೀಸ್ ಆಗುವ ಮೊದಲೆ ಸಾಕಷ್ಟು ಆಫರ್ ಗಳು ಪ್ರಿಯಾ ಅವರನ್ನು ಹುಡುಕಿಕೊಂಡು ಬರುತ್ತಿವೆ.
'ಲವ್ ಹ್ಯಾಕರ್ಸ್' ಜೊತೆ ಸೇರಿದ ಕಣ್ ಸನ್ನೆಯ ಪ್ರಿಯಾ ವಾರಿಯರ್!
ಆದ್ರೀಗ ಪ್ರಿಯಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು ನಿರ್ದೇಶಕ ರಘು ಕೋವಿ. ಹೌದು, ಸ್ಯಾಂಡಲ್ ವುಡ್ ನಲ್ಲಿ ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ರಘು ಕೋವಿ ಹೊಸ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕಿಯಾಗಿ ಪ್ರಿಯಾ ಪ್ರಕಾಶ್ ಅವರನ್ನು ಕರೆತರುವ ಪ್ಲಾನ್ ಮಾಡಿದ್ದಾರಂತೆ.
ಈಗಾಗಲೆ ಪ್ರಿಯಾ ಪ್ರಕಾಶ್ ಜೊತೆ ಮಾತುಕತೆ ಮಾಡಿದ್ದಾರೆ. ಕೇರಳಗೆ ಹೋಗಿ ಪ್ರಿಯಾ ಮನೆಗೆ ತೆರಳಿರುವ ರಘು, ಪ್ರಿಯಾ ಭೇಟಿಯಾಗಿ ಚಿತ್ರದ ಕತೆಯ ಬಗ್ಗೆ ವಿವರಿಸಿದ್ದಾರಂತೆ. ಕತೆ ಕೇಳಿ ಪ್ರಿಯಾ ತುಂಬಾ ಇಂಪ್ರೆಸ್ ಆಗಿದ್ದಾರಂತೆ. ಆದ್ರೆ ಪ್ರಿಯಾ ಕಡೆಯಿಂದ ಇನ್ನು ಗ್ರೀನ್ ಸಿಗ್ನಲ್ ಸಿಗುವುದೊಂದೆ ಬಾಕಿಯಿದೆಯಂತೆ.
ಇದೊಂದು ಲವ್ ಸ್ಟೋರಿ ಆಧಾರಿತ ಚಿತ್ರವಂತೆ. ಮತ್ತೊಂದು ವಿಶೇಷ ಅಂದ್ರೆ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ನ ನಟರೊಬ್ಬರ ಮಗನನ್ನು ಚಿತ್ರರಂಗಕ್ಕೆ ಪರಿಚಯಿಸುವ ಪ್ಲಾನ್ ನಡೆಯುತ್ತಿದೆಯಂತೆ. ಆದ್ರೆ ಯಾವ ನಟ ಎನ್ನುವುದನ್ನ ಬಹಿರಂಗ ಪಡಿಸಿಲ್ಲ. ಎಲ್ಲವು ಅಂದುಕೊಂಡಂತೆ ಆದ್ರೆ ಸಿನಿಮಾ ಆಗಸ್ಟ್ ನಲ್ಲಿ ಸೆಟ್ಟೇರುವ ಸಾಧ್ಯತೆ ಇದೆ.
ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ಸಂಯೋಜನೆ ಮಾಡಲಿದ್ದಾರೆ. ಚಿತ್ರಕ್ಕೆ ಕಿಲ್ಲಿಂಗ್ ವೀರಪ್ಪನ್ ಖ್ಯಾತಿ ನಿರ್ಮಾಪಕರಲ್ಲಿ ಒಬ್ಬರಾಗಿದ್ದ ಬಿ ಎಸ್ ಸುಧೀಂದ್ರ ಬಂಡವಾಳ ಹೂಡಲಿದ್ದಾರೆ. ಇನ್ನು ಈ ಚಿತ್ರ ಕನ್ನಡ ಸೇರಿದಂತೆ, ತಮಿಳು, ತೆಲುಗು ಮತ್ತು ಮಲಯಾಳಂ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡುತ್ತಿದೆ ಚಿತ್ರತಂಡ.