twitter
    For Quick Alerts
    ALLOW NOTIFICATIONS  
    For Daily Alerts

    ಗೋವಾದ ಜೂಜು ಅಡ್ಡೆಯಲ್ಲಿ ತಾರೆ ಪ್ರಿಯಾಮಣಿ

    By Rajendra
    |

    ಗೋವಾದ ಸಮುದ್ರತೀರದಲ್ಲಿ ಲಂಗರು ಹಾಕಿರುವ ಗ್ಯಾಂಬ್ಲಿಂಗ್ ಹಡಗಿನಲ್ಲಿ ನಡೆಯುವ ಜೂಜು ಅಡ್ಡೆಯಲ್ಲಿ ಬೆಂಗಳೂರು ಬೆಡಗಿ ಪ್ರಿಯಾಮಣಿ ಪ್ರತ್ಯಕ್ಷರಾಗಿದ್ದಾರೆ. ವಿಶೇಷ ಎಂದರೆ ಅವರ ಜೊತೆ ನಮ್ಮ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಇರುವುದು. ವಿಶೇಷ ಪರವಾನಗಿ ಪಡೆದು ಈ ಹಡಗನ್ನು ಹತ್ತಿದ್ದಾರೆ ಪ್ರಿಯಾಮಣಿ ಹಾಗೂ ಶಿವಣ್ಣ.

    ಸಾಮಾನ್ಯವಾಗಿ ಜೂಜಾಟಕ್ಕೆ ಭಾರತದಲ್ಲಿ ಅನುಮತಿ ಇಲ್ಲ. ಆದರೆ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಗೋವಾ ಸರ್ಕಾರ ಬೃಹದಾಕಾರದ ಹಡಗಿನಲ್ಲಿ ಜೂಜಾಟ ನಡೆಸುತ್ತಿದೆ. ಇದರಲ್ಲಿ 'ಕ್ಯಾಸಿನೋ ಪ್ರೈಡ್' ಎಂಬ ಜೂಜಾಟದ ಅಡ್ಡೆಯನ್ನು ತೆರೆದಿದೆ.

    ಈ ಹಡಗಿನಲ್ಲಿ ಸಿನೆಮಾಗಳ ಚಿತ್ರೀಕರಣಕ್ಕ್ಕೆ ಅವಕಾಶ ಬಂದ್ ಮಾಡಲಾಗಿದೆ. ಆದರೆ ವಿಶೇಷ ಎಂದರೆ ಈ ಹಡಗಿನಲ್ಲಿ ರಾಘವ ಲೋಕಿ ಆಕ್ಷನ್ ಕಟ್ ಹೇಳುತ್ತಿರುವ ಕನ್ನಡದ 'ಲಕ್ಷ್ಮಿ' ಚಿತ್ರವನ್ನು ಚಿತ್ರೀಕರಿಸಿರುವುದು. ಈ ಹಡಗಿನಲ್ಲಿರುವ ಅತ್ಯಾಕರ್ಷಕ ಒಳಾಂಗಣ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ.

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಪ್ರಿಯಾಮಣಿ ಅಭಿನಯದ 'ಲಕ್ಷ್ಮಿ' ಚಿತ್ರ ಗ್ರಾಫಿಕ್ಸ್ ಕಾರಣದಿಂದ ಲೇಟ್ ಆಗುತ್ತಿದೆ ಎಂದು ಚಿತ್ರದ ನಿರ್ಮಾಪಕ ಭಾಸ್ಕರ್ ಹಾಗೂ ಆದಿ ನಾರಾಯಣ ತಿಳಿಸಿದ್ದಾರೆ. ಹೆಸರಾಂತ ಉದ್ಯಮ ಭರಣಿ ಮಿನರಲ್ಸ್ ಅವರ ಮೊದಲ ಪ್ರಯತ್ನ 'ಲಕ್ಷ್ಮಿ'.

    ಅದ್ದೂರಿ ಮುಹೂರ್ತದ ಬಳಿಕ ಬೆಂಗಳೂರು ಹಾಗೂ ಹೊರದೇಶಗಳಲ್ಲೂ ಚಿತ್ರೀಕರಣ ಮಾಡಿ ತಾಂತ್ರಿಕ ಗ್ರಾಫಿಕ್ಸ್ ಕೆಲಸಕ್ಕಾಗಿ ಹಲವಾರು ತಿಂಗಳುಗಳೆ ಹಿಡಿಯಿತು ಎಂದು ತಿಳಿಸುತ್ತಾರೆ ನಿರ್ದೇಶಕ ರಾಘವ ಲೋಕಿ.

    ಗುರುಕಿರಣ್ ಅವರು ಆರು ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಕೆ ಎಸ್ ಚಂದ್ರಶೇಖರ್ ಅವರ ಛಾಯಾಗ್ರಹಣ, ಕೆ. ಎಂ ಪ್ರಕಾಶ್ ಅವರ ಸಂಕಲನ, ಎಂ ಎಸ್ ರಮೇಶ್ ಅವರ ಸಂಭಾಷಣೆ, ಇಸ್ಮಾಯಿಲ್ ಅವರ ಕಲಾ ನಿರ್ದೇಶನ, ಥ್ರಿಲ್ಲರ್ ಮಂಜು ಸ್ಟಂಟ್ಸ್, ಪ್ರದೀಪ್ ಆಂಟೋನಿ ನೃತ್ಯ ನಿರ್ದೇಶನ, ಆನಂದಪ್ರಿಯ ಅವರ ಸಹಾಯ ನಿರ್ದೇಶನ, ಬಾಬು ಹಾಗೂ ಸಾನಿಯಾ ಸರ್ದಾರಿಯ ವಸ್ತ್ರ ವಿನ್ಯಾಸ ಚಿತ್ರಕ್ಕಿದೆ.

    ಆಶಿಷ್ ವಿದ್ಯಾರ್ಥಿ, ರವಿಕಾಳೆ, ವಿನ್ಸೆಂಟ್, ಕೋಮಲ್, ರಂಗಾಯಣ ರಘು ಹಾಗೂ ಇತರರು ಪಾತ್ರವರ್ಗದಲ್ಲಿದ್ದಾರೆ. ಲಕ್ಷ್ಮಿ ಚಿತ್ರದ ಅಡಿಬರಹ "ನೋ ವನ್ ಕ್ಯಾನ್ ಟಚ್ ಮೀ". ಆಕ್ಷನ್ ಥ್ರಿಲ್ಲರ್ ಆದ ಚಿತ್ರದ ಕಥಾವಸ್ತುವು ಭಿನ್ನವಾಗಿದೆ. ಸಾಮಾನ್ಯನೊಬ್ಬ ಭಯೋತ್ಪಾದನೆಯೊಂದಿಗೆ ಮುಖಾಮುಖಿಯಾಗುವುದೇ ಚಿತ್ರದ ಕಥಾಹಂದರ. (ಏಜೆನ್ಸೀಸ್)

    English summary
    Priyamani has visited Casino Pride, a floating casino in Goa on Wednesday. She is shooting for a Kannada film titled Lakshmi which features Shivarajkumar in the title role. The management of Casinos doesn’t allow anything to be shoot inside. But they had made an exception for this film as Priyamani managed to capture the interiors.
    Friday, August 3, 2012, 16:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X