For Quick Alerts
  ALLOW NOTIFICATIONS  
  For Daily Alerts

  ಚೇತನ್ ಮಾತಿಗೆ ಸಿಕ್ಕಾಪಟ್ಟೆ ಬೇಸರ ಮಾಡಿಕೊಂಡ ಪ್ರಿಯಾಂಕಾ ಉಪೇಂದ್ರ

  |

  ಕಳೆದ ಒಂದು ವಾರದಿಂದ ಸ್ಯಾಂಡಲ್ ವುಡ್ ನಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. 'ಫೈರ್' ಸಂಸ್ಥೆಯನ್ನ ಇಟ್ಟುಕೊಂಡು ನಟಿ ಶ್ರುತಿ ಹರಿಹರನ್ ಪ್ರೆಸ್ ಮೀಟ್ ಮಾಡಿದ್ಮೇಲೆ, 'ಫೈರ್' ಸಂಸ್ಥೆಯಿಂದ ಪ್ರಿಯಾಂಕಾ ಉಪೇಂದ್ರ, ರೇಖಾ ರಾಣಿ, ವೀಣಾ ಸುಂದರ್ ಸೇರಿದಂತೆ ಹಲವರು ಹೊರ ನಡೆದರು.

  ಈ ಬೆಳವಣಿಗೆ ಗಮನಿಸಿದ ಚೇತನ್, ''ಹಿಂದಿನ ಅಧ್ಯಕ್ಷರಿಗೆ (ಪ್ರಿಯಾಂಕಾ ಉಪೇಂದ್ರ) ಕಾರ್ಯದಕ್ಷತೆ, ಸಾಮರ್ಥ್ಯ, ಒಳಗೊಳ್ಳುವಿಕೆ, ಜವಾಬ್ದಾರಿಯುತವಾಗಿ 'ಫೈರ್' ಅನ್ನು ಮುನ್ನಡೆಸುವ ಧೈರ್ಯ ಇರಲಿಲ್ಲ'' ಎಂದು ತಮ್ಮ ಫೇಸ್ ಬುಕ್ ಪುಟದಲ್ಲಿ ಬರೆದುಕೊಂಡಿದ್ದಾರೆ.

  ''ಸಾಮರ್ಥ್ಯ, ಧೈರ್ಯ ಇರಲಿಲ್ಲ'' ಎಂದು ಚೇತನ್ ಆಡಿರುವ ಮಾತುಗಳಿಗೆ 'ಫೈರ್' ಸಂಸ್ಥೆಯ ಮಾಜಿ ಅಧ್ಯಕ್ಷೆ, ನಟಿ ಪ್ರಿಯಾಂಕಾ ಉಪೇಂದ್ರ ಬೇಸರ ವ್ಯಕ್ತಪಡಿಸಿದ್ದಾರೆ. ಮುಂದೆ ಓದಿರಿ...

  ಅವರ ದಾರಿಯೇ ಬೇರೆ

  ಅವರ ದಾರಿಯೇ ಬೇರೆ

  ''ಅವರು ಇದನ್ನ ಬೇರೆ ತರಹ ನಡೆಸಿಕೊಂಡು ಹೋಗಬೇಕಿತ್ತು. ನನ್ನ ದಾರಿ ಬೇರೆ ಇತ್ತು. ಉದ್ದೇಶ ಒಂದೇ ಆಗಿದ್ದರೂ, ದಾರಿ ಬೇರೆ ಆಗಿತ್ತು. ಚೇತನ್ ಆಡಿರುವ ಮಾತಿನ ಬಗ್ಗೆ ನನಗೆ ತುಂಬಾ ಬೇಸರ ಆಗಿದೆ'' - ಪ್ರಿಯಾಂಕಾ ಉಪೇಂದ್ರ

  ಆಶ್ಚರ್ಯಗೊಂಡ ಪ್ರಿಯಾಂಕಾ ಉಪೇಂದ್ರ

  ಆಶ್ಚರ್ಯಗೊಂಡ ಪ್ರಿಯಾಂಕಾ ಉಪೇಂದ್ರ

  ''ಎರಡು ವರ್ಷಗಳಿಂದ FIRE ಗಾಗಿ ಕಷ್ಟ ಪಟ್ಟಿದ್ದೇವೆ. ಹಲವು ಮಿನಿಸ್ಟರ್, ವಕೀಲರನ್ನು ಭೇಟಿ ಮಾಡಿದ್ದೇವೆ. ತುಂಬಾ ಖರ್ಚು ಕೂಡ ಆಗಿದೆ. ಆದರೂ ಈಗ ಸಾಮರ್ಥ್ಯ ಇಲ್ಲ ಎಂದರೆ ಆಶ್ಚರ್ಯ ಆಗುತ್ತೆ'' - ಪ್ರಿಯಾಂಕಾ ಉಪೇಂದ್ರ

  ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!ಶ್ರುತಿ ಹರಿಹರನ್ ವಿವಾದ: 'ಫೈರ್' ಸಂಸ್ಥೆಗೆ ಗುಡ್ ಬೈ ಹೇಳಿದ ಪ್ರಿಯಾಂಕಾ ಮತ್ತು ತಂಡ.!

  ಸ್ವಾತಂತ್ರ್ಯ ಇರಲಿಲ್ಲ

  ಸ್ವಾತಂತ್ರ್ಯ ಇರಲಿಲ್ಲ

  ''ನಾನೇ ಅಧ್ಯಕ್ಷೆ ಆಗಬೇಕು ಅಂತ ಖಂಡಿತ ನಾನು ಕೇಳಿಲ್ಲ. ಎಲ್ಲಾ ನಿರ್ಧಾರಗಳನ್ನು ಚೇತನ್ ಅವರೇ ತೆಗೆದುಕೊಳ್ಳಲು ಶುರು ಮಾಡಿದರು. ನನಗೆ ಜಾಸ್ತಿ ಸ್ವಾತಂತ್ರ್ಯ ಇರಲಿಲ್ಲ'' - ಪ್ರಿಯಾಂಕಾ ಉಪೇಂದ್ರ

  ಅಂದು ನಾಲಿಗೆ ಸತ್ತಿತ್ತಾ.? #ಮೀಟೂ 'ನಟಿ'ಯರಿಗೆ ರೇಖಾ ರಾಣಿ ಖಡಕ್ ಪ್ರಶ್ನೆ.! ಅಂದು ನಾಲಿಗೆ ಸತ್ತಿತ್ತಾ.? #ಮೀಟೂ 'ನಟಿ'ಯರಿಗೆ ರೇಖಾ ರಾಣಿ ಖಡಕ್ ಪ್ರಶ್ನೆ.!

  ನನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿರುವೆ

  ನನ್ನ ಕೆಲಸ ಅಚ್ಚುಕಟ್ಟಾಗಿ ಮಾಡಿರುವೆ

  ''ಧೈರ್ಯ ಅಂದ್ರೆ ಯಾವ ತರಹ ಅಂತ ನನಗೆ ಗೊತ್ತಿಲ್ಲ. ಅದಕ್ಕೆ ಅವರೇ ಉತ್ತರ ಕೊಡಬೇಕು. ಅಧ್ಯಕ್ಷೆ ಆಗಿ ನನ್ನ ಕೆಲಸವನ್ನ ನಾನು ಅಚ್ಚುಕಟ್ಟಾಗಿ ಮಾಡಿದ್ದೇನೆ. ನನ್ನ ಕಾರ್ಯವೈಖರಿ ಹೇಗಿತ್ತು ಅಂತ ಫೈರ್ ಟೀಮ್ ನಲ್ಲಿ ಇದ್ದವರನ್ನ ಕೇಳಿ. ಯಾವುದೇ ಮೀಟಿಂಗ್ ನೂ ನಾನು ಮಿಸ್ ಮಾಡಿಕೊಂಡಿಲ್ಲ'' - ಪ್ರಿಯಾಂಕಾ ಉಪೇಂದ್ರ

  ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.! ಅರ್ಜುನ್ ಸರ್ಜಾ ಹೆಸರನ್ನ ಮಾತ್ರ ಹೇಳಲು ಒಂದು ಕಾರಣ ಇದೆ ಎಂದ ಶ್ರುತಿ ಹರಿಹರನ್.!

  ಕೂಗಾಡುವುದು ಧೈರ್ಯ ಅಲ್ಲ

  ಕೂಗಾಡುವುದು ಧೈರ್ಯ ಅಲ್ಲ

  ''ಕೂಗಾಡುವುದಷ್ಟೇ ಧೈರ್ಯ ಅಲ್ಲ. ನಮ್ಮ ಪರ್ಮಿಷನ್ ಇಲ್ಲದೆ, ಎಷ್ಟೋ ಜನರನ್ನ 'ಫೈರ್'ಗೆ ಚೇತನ್ ಸೇರಿಸಿಕೊಂಡಿದ್ದಾರೆ. ಶ್ರುತಿ ಹರಿಹರನ್ ನಮ್ಮಲ್ಲಿ ಸದಸ್ಯೆ. ಪ್ರೆಸ್ ಮೀಟ್ ಗೂ ಮುನ್ನ ಶ್ರುತಿ ನಮ್ಮ ಜೊತೆಗೆ ಮಾತನಾಡಬಹುದಿತ್ತು. ಆದರೆ ಅದು ಆಗಲಿಲ್ಲ. ಫೈರ್ ಗೆ ಸುಮಾರು ಕಂಪ್ಲೇಂಟ್ ಬಂದಿವೆ. ಆದ್ರೆ, ಪ್ರೆಸ್ ಮೀಟ್ ನಲ್ಲಿ ಶ್ರುತಿ ವಿಷಯ ಮಾತ್ರ ಹೈಲೈಟ್ ಆಯ್ತು. ಬೇರೆಯವರ ವಿಷಯ ಅಲ್ಲಿ ಬರ್ಲಿಲ್ಲ. ಯಾಕೆ.? #ಮೀಟೂ ಅಂದ್ಮೇಲೆ, ಎಲ್ಲರಿಗೂ ಸಪೋರ್ಟ್ ಮಾಡಬೇಕು ಅಲ್ವಾ.? ಚೇತನ್ ತುಂಬಾ ಹಾರ್ಶ್ ಆಗಿ ಮಾತನಾಡುತ್ತಾರೆ. ನನಗೆ ಆ ತರಹ ಬರಲ್ಲ. ಮೀಟಿಂಗ್ ಅನೇಕ ಬಾರಿ ಆರ್ಗ್ಯುಮೆಂಟ್ ಆಗಿವೆ'' - ಪ್ರಿಯಾಂಕಾ ಉಪೇಂದ್ರ

  English summary
  Priyanka Upendra expresses displeasure over Chethan's statement.
  Friday, October 26, 2018, 18:13
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X