For Quick Alerts
  ALLOW NOTIFICATIONS  
  For Daily Alerts

  '1980'ಕ್ಕೆ ವಾಪಸ್ ಹೋಗುತ್ತಿದ್ದಾರೆ ಪ್ರಿಯಾಂಕಾ ಉಪೇಂದ್ರ

  |

  ಲಾಕ್‌ಡೌನ್ ಬ್ರೇಕ್‌ ಆದ್ಮೇಲೆ ನಟಿ ಪ್ರಿಯಾಂಕಾ ಉಪೇಂದ್ರ ಚುರುಕುಗೊಂಡಿದ್ದಾರೆ. ಈಗಾಗಲೇ ಕೈಗೆತ್ತಿಕೊಂಡಿರುವ ಚಿತ್ರಗಳ ಶೂಟಿಂಗ್ ಮಾಡುವುದರ ಜೊತೆ ಹೊಸ ಹೊಸ ಸಿನಿಮಾಗಳನ್ನು ಸಹ ಒಪ್ಪಿಕೊಳ್ಳುತ್ತಿದ್ದಾರೆ.

  ಪ್ರಿಯಾಮಣಿ, ಛಾಯಾ ಸಿಂಗ್ ಜೊತೆ ನಟಿಸುತ್ತಿರುವ ಹಾರರ್ ಥ್ರಿಲ್ಲರ್ ಸಿನಿಮಾ ಇತ್ತೀಚಿಗಷ್ಟೆ ಆರಂಭವಾಗಿತ್ತು. ಈ ಹಿಂದೆ ಶುರುವಾಗಿರುವ ಉಗ್ರಾವತಾರ ಚಿತ್ರೀಕರಣ ನಡೆಯುತ್ತಿದೆ. ಈ ನಡುವೆ 'ಲೈಫ್ ಈಸ್ ಬ್ಯೂಟಿಫುಲ್' ಚಿತ್ರದಲ್ಲೂ ನಟಿಸುತ್ತಿದ್ದಾರೆ.

  '1980'ರಲ್ಲಿ ಪ್ರಿಯಾಂಕಾ: ರೆಟ್ರೋ ಲುಕ್ ನಲ್ಲಿ ಉಪೇಂದ್ರ ಪತ್ನಿ ಮಿಂಚಿಂಗ್'1980'ರಲ್ಲಿ ಪ್ರಿಯಾಂಕಾ: ರೆಟ್ರೋ ಲುಕ್ ನಲ್ಲಿ ಉಪೇಂದ್ರ ಪತ್ನಿ ಮಿಂಚಿಂಗ್

  ಇದೀಗ, 1980 ಎಂಬ ರೆಟ್ರೋ ಸ್ಟೈಲ್ ಚಿತ್ರದಲ್ಲೂ ಪ್ರಿಯಾಂಕಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಟೈಟಲ್ ಪೋಸ್ಟರ್ ರಿಲೀಸ್ ಆಗಿದೆ.

  1980 ಚಿತ್ರದ ಶೂಟಿಂಗ್ ಸದ್ಯದಲ್ಲೇ ಆರಂಭವಾಗಲಿದ್ದು, ಮಡಿಕೇರಿಯಲ್ಲಿ ಮೊದಲ ಹಂತದ ಚಿತ್ರೀಕರಣ ನಡೆಯಲಿದೆ. ಹಾಗಾಗಿ ಪ್ರಿಯಾಂಕಾ ಉಪೇಂದ್ರ ಕೂರ್ಗ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

  ಅಂದ್ಹಾಗೆ, ಇದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರವಾಗಿದ್ದು, ಸಂಪೂರ್ಣ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ. ಬಹುತೇಕ ಸಿನಿಮಾ ಕೊಡಗು ಮತ್ತು ಚಿಕ್ಕಮಗಳೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಯಲಿದೆ.

  ಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕಪ್ರಿಯಾಂಕಾ ಉಪೇಂದ್ರ ಕೈಯಲ್ಲಿ ಲಾಂಗ್ ಕೊಟ್ಟ ನಿರ್ದೇಶಕ

  ಭಜರಂಗಿ ಭಾಯಿಜಾನ್ ಪುಟ್ಟ ಪೋರಿ ಈಗ ಹೇಗಿದ್ದಾಳೆ ನೋಡಿ | Filmibeat Kannada

  ಈ ಸಿನಿಮಾಗೆ ರಾಜ್ ಕಿರಣ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸವಾರಿ-2, ವಸಂತ ಕಾಲ, ಮಿಸ್ಡ್ ಕಾಲ್ ಮುಂತಾದ ಚಿತ್ರಗಳಿಗೆ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ರಾಜ್ ಕಿರಣ್ ಇದೀಗ 1980 ಸಿನಿಮ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗಿ ಗುರುತಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಪ್ರಮುಖ ಜೊತೆಯಲ್ಲಿ ಅರವಿಂದ್ ರಾವ್, ಶ್ರೀಧರ್, ಮುರಳಿ ಶರ್ಮಾ ಮುಂತಾದವರು ನಟಿಸುತ್ತಿದ್ದಾರೆ.

  English summary
  Kannada actress Priyanka Upendra Starrer 1980 movie shooting begins Today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X