Just In
Don't Miss!
- News
ಶಿವಮೊಗ್ಗದಲ್ಲಿ ಭಾರೀ ಸ್ಫೋಟ; ಸಿಬಿಐ ತನಿಖೆ ಇಲ್ಲ
- Finance
"ಟಿಕ್ ಟಾಕ್ ಸೇರಿ ಚೀನಾದ ಕೆಲವು ಆಪ್ ಗಳಿಗೆ ಭಾರತದಲ್ಲಿ ಶಾಶ್ವತ ನಿಷೇಧ"
- Sports
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಗೆ ಪ್ರೇಕ್ಷಕರಿಗೆ ಅವಕಾಶ ನೀಡಲು ಬಿಸಿಸಿಐ ಉತ್ಸಾಹ
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಉಡಿಸ್ ಮಾಡುತ್ತೇನೆ ಎಂದು ಜಯಣ್ಣ ಬೆದರಿಕೆ': ದ್ವಾರಕೀಶ್ ಕಣ್ಣೀರು
ನಿರ್ಮಾಪಕ ಜಯಣ್ಣ ಹಾಗೂ ದ್ವಾರಕೀಶ್ ನಡುವಿನ ಹಣಕಾಸಿನ ವ್ಯವಹಾರದ ಗಲಾಟೆ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಘಟನೆಯ ಬಗ್ಗೆ ಇದೀಗ ದ್ವಾರಕೀಶ್ ಪುತ್ರ ಯೋಗೇಶ್ ದ್ವಾರಕೀಶ್ ಮಾಧ್ಯಮಗಳ ಜೊತೆಗೆ ಮಾತನಾಡಿದ್ದಾರೆ.
''ಹಣ ನೀಡುವುದಿಲ್ಲ ಎಂದು ನಾವು ಹೇಳಿಲ್ಲ. ಈಗಲೂ ನಾನು ಹಣ ನೀಡುತ್ತೇನೆ. ಆದರೆ, ಸಮಯ ಬೇಕು. ಈ ಬಗ್ಗೆ ಫಿಲ್ಮ್ ಚೆಂಬರ್ ನಲ್ಲಿಯೂ ಮಾತುಕತೆ ಮಾಡಲು ಸಿದ್ಧ.'' ಎಂದು ಯೋಗೇಶ್ ಹೇಳಿದ್ದಾರೆ.
Exclusive: ದ್ವಾರಕೀಶ್-ಜಯಣ್ಣ ಗಲಾಟೆ ಹಿಂದಿನ '5 ಕೋಟಿ' ವ್ಯವಹಾರದ ಅಸಲಿ ಸತ್ಯ
'ಆಯುಷ್ಮಾನ್ ಭವ' ಸಿನಿಮಾ ದ್ವಾರಕೀಶ್ ಬ್ಯಾನರ್ ನಲ್ಲಿ ನಿರ್ಮಾಣವಾಗಿತ್ತು. ಆ ಚಿತ್ರದ ವಿತರಣೆಯನ್ನು ಜಯಣ್ಣ ಮಾಡಿದ್ದರು. ಈ ಸಮಯದಲ್ಲಿ ಫೈನಾನ್ಸರ್ ರಿಂದ 5 ಕೋಟಿ ಹಣವನ್ನು ಯೋಗೇಶ್ ಗೆ ಜಯಣ್ಣ ನೀಡಿದ್ದರು. ಈ ಹಣವನ್ನು ಕೇಳಲು ದ್ವಾರಕೀಶ್ ಮನೆಗೆ ಹೋದ ಜಯಣ್ಣ ಗಲಾಟೆ ಮಾಡಿದ್ದಾರೆ ಎನ್ನುವ ಆರೋಪ ಯೋಗೇಶ್ ಮಾಡಿದ್ದಾರೆ.
ಅಂದಹಾಗೆ, ಈ ಘಟನೆಯ ಬಗ್ಗೆ ಸದ್ಯ ದ್ವಾರಕೀಶ್ ಹಾಗೂ ಅವರ ಪುತ್ರ ಯೋಗೇಶ್ ದ್ವಾರಕೀಶ್ ಸ್ಪಷ್ಟನೆ ನೀಡಿದ್ದಾರೆ.

ಉಡಿಸ್ ಮಾಡಿಬಿಡುತ್ತೇನೆ
''ಶುಕ್ರವಾರ ಮಧ್ಯಾಹ್ನ ನಮ್ಮ ಮನೆಗೆ ಜಯಣ್ಣ, ರಮೇಶ್ ಹಾಗೂ ಇನ್ನಿಬ್ಬರು ಬಂದರು. ಜೋರಾಗಿ ಬಾಗಿಲು ತಟ್ಟಿದರು. ಬಾಗಿಲು ತೆಗೆದ ತಕ್ಷಣ ಮಾತು ಶುರು ಮಾಡಿದರು. ನಿಮ್ಮ ಮಗ ಹಾಗೆ ಮಾಡಿದ್ದಾನೆ, ಹೀಗೆ ಮಾಡಿದ್ದಾನೆ. ಅವನ್ನು ಉಡಿಸ್ ಮಾಡಿ ಬಿಡುತ್ತೇನೆ ಎಂದೆಲ್ಲ ಹೇಳಿದರು. ನನಗೆ ಸರಿಯಾಗಿ ವಿಷಯ ಏನು ಅಂತಲೂ ಹೇಳಲಿಲ್ಲ'' - ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ

ಕಾನೂನು ಪ್ರಕಾರ ಹೋಗಲಿ
''ಅಂದು ನಾನು ಮತ್ತು ನನ್ನ ಹೆಂಡತಿ ಇಬ್ಬರೇ ಮನೆಯಲ್ಲಿ ಇದ್ದೆವು. ನಾವು 78 ವರ್ಷದ ಮುದುಕ ಮುದುಕಿ. ನಮ್ಮ ಬಳಿ ಬಂದು ಏನೇನೋ ಹೇಳಿದರು. ರಮೇಶ್ ಹೆಚ್ಚೆ ಮಾತನಾಡಿದರು. ಸಿನಿಮಾ ವ್ಯಾಪಾರ ಅದೇನೇ ಇದ್ದರೂ, ಕಾನೂನು ಪ್ರಕಾರ ಹೋಗಲಿ. ಕಾನೂನು ಎಲ್ಲರಿಗೂ ಒಂದೇ. ಹಾಗಾಗಿ ನಾವೇ ದೂರು ನೀಡಿದೆವು.'' - ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ
ಸಾಲದ ಹಣ ವಾಪಸ್ ನೀಡಿಲ್ಲ ಎಂದು ದ್ವಾರಕೀಶ್ ಮನೆಯಲ್ಲಿ ನಿರ್ಮಾಪಕರ ಗಲಾಟೆ

ಮನೆ ಮಾರಿ ಹಣ ನೀಡುತ್ತೇನೆ
''ಅವರು ಬೇಕಾದರೆ, ಕೋರ್ಟ್ ಗೆ ಹೋಗಲಿ. ಕೋರ್ಟ್ ಮನೆ ಮಾರಿ ಹಣ ನೀಡಿ ಎಂದರೆ, ಅದನ್ನೂ ಮಾಡಲು ಸಿದ್ಧ. 80 ಕೋಟಿ ಮೌಲ್ಯದ ಮನೆಗಳನ್ನು ಈ ಹಿಂದೆ ಮಾರಿದ್ದೇನೆ. ನಾನು ಸಿನಿಮಾ ಬಿಟ್ಟು ಬೇರೇನೂ ಮಾಡಿಲ್ಲ. ಸಿನಿಮಾಗಾಗಿಯೇ ಸತ್ತಿದ್ದೇನೆ. ನಾವು ಕೂಡ ಸಿನಿಮಾಗಳನ್ನು ವಿತರಣೆ ಮಾಡಿದ್ದೇನೆ. ನಮಗೂ ಕೂಡ ಲಾಸ್ ಆಗಿದೆ. ಆದರೆ, ಆಗ ನಾವು ಈ ತರ ನೆಡೆದುಕೊಂಡಿಲ್ಲ.''- ದ್ವಾರಕೀಶ್, ಹಿರಿಯ ನಟ, ನಿರ್ಮಾಪಕ

ನಮಗೆ ಸಮಯ ಕೊಡಿ
ಇನ್ನು ಯೋಗೇಶ್ ದ್ವಾರಕೀಶ್ ಸಹ ಪ್ರತಿಕ್ರಿಯೆ ನೀಡಿದ್ದು, ''ಜಯಣ್ಣ ಸರಿಯಾಗಿ ಮಾತನಾಡಲಿಲ್ಲ. ಹಾಗೆ ಮಾಡುತ್ತೇನೆ ಹೀಗೆ ಮಾಡುತ್ತೇನೆ ಎನ್ನುತ್ತಿದ್ದರು. ನಾವು ನ್ಯಾಯವಾಗಿ ನೀಡಬೇಕಾದ ಹಣವನ್ನು ನೀಡುತ್ತೇವೆ. ಆದರೆ, ನಮಗೆ ಸಮಯ ಬೇಕು. ದೊಡ್ಡ ಮಟ್ಟದ ಲಾಸ್ ಆಗಿದೆ. ಆ ಹಣ ನೀಡಲು ಸ್ವಲ್ಪ ಸಮಯ ಬೇಕಾಗುತ್ತದೆ.'' ಎಂದಿದ್ದಾರೆ.