»   » 'ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!

'ನಾನೇನು ಮಾಲಾಶ್ರೀ ಮನೆ ಕೆಲಸದವನಾ' ಎಂದ ಕೊಬ್ರಿ ಮಂಜು.!

Posted By:
Subscribe to Filmibeat Kannada

''ನಿಮ್ಮ ಪರ್ಫಾಮೆನ್ಸ್ ಅಂದುಕೊಂಡ ಮಟ್ಟಕ್ಕೆ ಇಲ್ಲ'' ಎಂದು ನಟಿ ಮಾಲಾಶ್ರೀಗೆ ನೃತ್ಯ ಸಂಯೋಜಕ ಹಾಗೂ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಕಳುಹಿಸಿದ ಮೆಸೇಜ್ ಬಗ್ಗೆ 'ನನಗೇನೂ ಗೊತ್ತಿಲ್ಲ' ಅಂತ ನಿನ್ನೆ ಮಾಧ್ಯಮಗಳ ಮುಂದೆ ಹೇಳಿದ್ದ ನಿರ್ಮಾಪಕ ಕೆ.ಮಂಜು ಇಂದು ಫುಲ್ ಗರಂ ಆಗಿದ್ದರು.

ನಿರ್ದೇಶಕ ಇಮ್ರಾನ್ ಸರ್ದಾರಿಯಾ ಜೊತೆ ಬೆಂಗಳೂರಿನ ಗ್ರೀನ್ ಹೌಸ್ ನಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ನಿರ್ಮಾಪಕ ಕೆ.ಮಂಜು ನಟಿ ಮಾಲಾಶ್ರೀ ವಿರುದ್ಧ ರೊಚ್ಚಿಗೆದ್ದಿದ್ದರು. [ಮಾಲಾಶ್ರೀ 'ಉಪ್ಪು ಹುಳಿ ಖಾರ'ದ 'ಕಹಿ' ಸತ್ಯ ಬಿಚ್ಚಿಟ್ಟ ಇಮ್ರಾನ್.!]

''ಮಾಲಾಶ್ರೀ ಮೇಡಂ ನನಗೆ ಸ್ಟುಪಿಡ್ ಅಂದಿದ್ದಾರೆ, ನಾನೇನು ಅವರ ಬಳಿ ಸಾಲ ಮಾಡಿದ್ದೀನಾ? ನಾನು ಅವರ ಮನೆ ಕೆಲಸಗಾರನಾ? ನಮಗೆ ಬೆಲೆ ಇಲ್ವಾ? ನಾವೇನು ಗುಲಾಮರಾ? ನಾನು ಅವಿವೇಕಿನಾ? ಥರ್ಡ್ ಕ್ಲಾಸಾ?'' ಎನ್ನುತ್ತಾ ಪತ್ರಿಕಾ ಹಾಗೂ ಮಾಧ್ಯಮಗಳ ಮುಂದೆ ಕೊಬ್ರಿ ಮಂಜು ತಮ್ಮ ಸಿಟ್ಟನ್ನ ಹೊರಹಾಕಿದರು.

'ಉಪ್ಪು ಹುಳಿ ಖಾರ' ಚಿತ್ರದ ಸುತ್ತ ಹುಟ್ಟಿಕೊಂಡಿರುವ ವಿವಾದ ಹಾಗೂ ನಟಿ ಮಾಲಾಶ್ರೀಗೆ ಬರೋಬ್ಬರಿ 45 ಲಕ್ಷ ರೂಪಾಯಿ ಕೊಟ್ಟಿರುವ ಬಗ್ಗೆ ನಿರ್ಮಾಪಕ ಕೆ.ಮಂಜು ದೊಡ್ಡ ಕಥೆ ಹೇಳಿದರು. ಅದನ್ನೆಲ್ಲಾ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.....

ದೇವರ ಮೇಲೆ ಆಣೆ, ನಾನು ಹೇಳುವುದೆಲ್ಲಾ ಸತ್ಯ!

''ನನ್ನ ಮನೆ ದೇವರ ಮೇಲೆ ಆಣೆ, ನಾನು ಹೇಳುವುದೆಲ್ಲಾ ಸತ್ಯ. ಇರುವ ಸತ್ಯಾಂಶ ಎಲ್ಲವನ್ನ ನಾನು ತಿಳಿಸಿಬಿಡುತ್ತೇನೆ. ಯಾರ ಬಗ್ಗೆ ನಾನು ಕಂಪ್ಲೇಂಟ್ ಹೇಳುತ್ತಿಲ್ಲ. ಇರುವ ಸತ್ಯ ಹೇಳುತ್ತಿದ್ದೇನೆ'' ಅಂತ ನಿರ್ಮಾಪಕ ಕೆ.ಮಂಜು ಸುದ್ದಿಗೋಷ್ಠಿಯಲ್ಲಿ ಮಾತನಾಡಲು ಆರಂಭಿಸಿದರು. [ಮಾಲಾಶ್ರೀ ಆಪಾದನೆಗಳಿಗೆ ಉತ್ತರಿಸಲು ಕೆ.ಮಂಜು ಸಿದ್ಧ.!]

2012 ರಲ್ಲಿ ಏನಾಗಿತ್ತು?

''ನಾನು 2012 ಮಾರ್ಚ್ ನಲ್ಲಿ 'ಚಿಂತಾಮಣಿ ಕೊಲೆ ಕೇಸ್' ಎನ್ನುವ ಮಲೆಯಾಳಂ ಚಿತ್ರದ ರೀಮೇಕ್ ರೈಟ್ಸ್ ತೆಗೆದುಕೊಂಡೆ. ದಯಾಳ್ ಪದ್ಮನಾಭನ್ ಸಿನಿಮಾ ಮಾಡಲು ಆಸೆ ಪಟ್ಟರು. ಮಾಲಾಶ್ರೀ ಮೇಡಂ ಆಕ್ಟಿಂಗ್ ಮಾಡಲಿ ಅಂತ ದಯಾಳ್ ಹೇಳಿದರು. ಅದರಂತೆ ನಾವು ಮಾಲಾಶ್ರೀ ಹತ್ರ ಮಾತನಾಡಲು ಹೋದ್ವಿ'' - ಕೆ.ಮಂಜು, ನಿರ್ಮಾಪಕ

25 ಲಕ್ಷ ಅಡ್ವಾನ್ಸ್ ಕೊಟ್ಟೆ!

''ತುಂಬಾ ವರ್ಷಗಳ ನಂತರ ಹೋಮ್ ಬ್ಯಾನರ್ ನಿಂದ ಹೊರಗಡೆ ಆಕ್ಟ್ ಮಾಡುತ್ತಿದ್ದೇನೆ ಅಂತ ಹೇಳಿದರು. ಅವತ್ತೇ 25 ಲಕ್ಷ ಅಡ್ವಾನ್ಸ್ ಕೊಟ್ಟಿದ್ದೆ. ಅದಾದ ನಂತರ ದಯಾಳ್ ಜೊತೆ ಮಾಲಾಶ್ರೀ 'ಘರ್ಷಣೆ' ಅಂತ ಸಿನಿಮಾ ಮಾಡಿದರು. ಶಂಕರೇಗೌಡರಿಗೂ ಮಾಲಾಶ್ರೀ ಸಿನಿಮಾ ಮಾಡಿ ಕೊಟ್ಟರು'' - ಕೆ.ಮಂಜು, ನಿರ್ಮಾಪಕ

ಹಠ ಮಾಡ್ಲಿಲ್ಲ!

''ಮೊದಲು ನಾನು ಅವರಿಗೆ ಅಡ್ವಾನ್ಸ್ ಕೊಟ್ಟಿದ್ದು, ಆದರೂ ಬೇರೆಯವರಿಗೆ ಸಿನಿಮಾ ಮಾಡಿದರು. ನಾನು ಬೇರೆಯವರ ತರಹ ಹಠ ಮಾಡ್ಲಿಲ್ಲ. ರಾಮು ನನಗೆ ಆತ್ಮೀಯರು, ಸಂಬಂಧಿ ಆದ ಕಾರಣ ನಾನೇ ಸುಮ್ಮನಾದೆ'' - ಕೆ.ಮಂಜು, ನಿರ್ಮಾಪಕ [ತುರ್ತು ಸುದ್ದಿಗೋಷ್ಠಿ ಕರೆದು ನಟಿ ಮಾಲಾಶ್ರೀ ಕಣ್ಣೀರಿಟ್ಟಿದ್ದು ಯಾಕೆ?]

'ಉಪ್ಪು ಹುಳಿ ಖಾರ' ಶುರು ಆಗಿದ್ದು...

''ಅದೇ ಸಮಯಕ್ಕೆ ಇಮ್ರಾನ್ ನನಗೆ 'ಉಪ್ಪು ಹುಳಿ ಖಾರ'ದ ಕಥೆ ಹೇಳಿದರು. ಅದರಲ್ಲಿನ ಪೊಲೀಸ್ ಪಾತ್ರಕ್ಕೆ ದೇವರಾಜ್ ರನ್ನ ಹಾಕಿಕೊಳ್ಳೋಣ ಎಂದೆ. ಆದ್ರೆ, ಇಮ್ರಾನ್ ಅವರು ಮಾಲಾಶ್ರೀ ಮಾಡಿದ್ರೆ ಚೆನ್ನ ಅಂದರು. ನಾನು, ''ಇಲ್ಲ ಅವರ ಜೊತೆ ಒಪ್ಪಿಕೊಂಡಿರುವ ಒಂದು ಚಿತ್ರವೇ ಇನ್ನೂ ಆಗಿಲ್ಲ. ಎರಡನೇಯದ್ದು ಬೇಡ'' ಅಂತ ಹೇಳಿದೆ. ಇಮ್ರಾನ್ ಹಠ ಮಾಡಿದ್ದಕ್ಕೆ ಮಾಲಾಶ್ರೀಗೆ ಕಥೆ ಹೇಳಿ ಒಪ್ಪಿಸಿದರು'' - ಕೆ.ಮಂಜು, ನಿರ್ಮಾಪಕ

ಮಾಲಾಶ್ರೀ ಹಾಕಿದ ಕಂಡೀಷನ್ ಏನು?

''ಆಗ ಮಾಲಾಶ್ರೀ ಒಂದು ಕಂಡೀಷನ್ ಹಾಕಿದ್ರು, ''ನನಗೆ ಸಿಂಗಲ್ ಪೇಮೆಂಟ್ ಕೊಡುವ ಹಾಗಿದ್ರೆ ಮಾತ್ರ ಆಕ್ಟಿಂಗ್ ಮಾಡ್ತೀನಿ'' ಎಂದರು. ನಾನು ಆಯ್ತು ಅಂತ ಒಪ್ಪಿಕೊಂಡೆ. ಅವತ್ತೂ ಕೂಡ ಸಿಂಗಲ್ ಪೇಮೆಂಟ್ ಕೊಟ್ಟೆ. 20 ಲಕ್ಷ ರೂಪಾಯಿ'' - ಕೆ.ಮಂಜು, ನಿರ್ಮಾಪಕ [ಮಾಲಾಶ್ರೀ ನಟನೆ ಬಗ್ಗೆ ಅಂಬಿ, ಶ್ರುತಿ, ಉಮಾಶ್ರೀ ಮಾಡಿದ ಕಾಮೆಂಟ್ ಏನು?]

ಬೇರೆ ನಿರ್ಮಾಪಕರು ಬಂದರು!

''ಇಮ್ರಾನ್ ಕೂಡ 'ಉಪ್ಪು ಹುಳಿ ಖಾರ' ಮಾಡುತ್ತೇನೆ ಅಂತ ನನ್ನ ಬಳಿ 50 ಲಕ್ಷ ಬ್ಲಾಕ್ ಮಾಡಿಸಿದ್ದರು. ನಾನು ಆಗ ಲಾಸ್ ಮಾಡಿಕೊಳ್ಳಲು ಇಷ್ಟ ಇರ್ಲಿಲ್ಲ. ಬೇರೆ ನಿರ್ಮಾಪಕರು ಇದ್ದಾರೆ ಅವರ ಕೈಲಿ ಸಿನಿಮಾ ಮಾಡಿಸಿಕೊಳ್ಳಿ ಅಂತ ಇಮ್ರಾನ್ ಬಳಿ ಹೇಳಿದೆ. ನಂತರ ಮಾಲಾಶ್ರೀ ಬಳಿ ಹೋಗಿ ಹೇಳಿದೆ, ''ನಾನು 'ಉಪ್ಪು ಹುಳಿ ಖಾರ' ನಿರ್ಮಾಣ ಮಾಡಲ್ಲ'' ಅಂತ ಅದಕ್ಕೆ ''ಏನೂ ತೊಂದರೆ ಇಲ್ಲ ಮಂಜು'' ಅಂತ ಮಾಲಾಶ್ರೀ ಹೇಳಿದ್ರು'' - ಕೆ.ಮಂಜು, ನಿರ್ಮಾಪಕ

ಮುಹೂರ್ತದ ಹಿಂದಿನ ದಿನ ಆಗಿದ್ದು...

''ಉಪ್ಪು ಹುಳಿ ಖಾರ' ಚಿತ್ರದ ಮುಹೂರ್ತದ ಹಿಂದಿನ ದಿನ ಇಮ್ರಾನ್ ರವರನ್ನ ಮಾಲಾಶ್ರೀ ಅವರು ಮನೆಗೆ ಕರೆದು, ''ನನಗಿನ್ನೂ ಸಂಭಾವನೆ ಕೊಟ್ಟಿಲ್ಲ'' ಅಂತ ಕೇಳಿದ್ದಾರೆ'' - ಕೆ.ಮಂಜು, ನಿರ್ಮಾಪಕ

ದುಡ್ಡಿನ ಬಗ್ಗೆ....

''ಆಗ ಮಾಲಾಶ್ರೀ ಅವರು ''ನನಗೆ 34 ಲಕ್ಷ ಕೊಟ್ಟಿದ್ದೀರಾ'' ಅಂತ ನನಗೆ ಹೇಳಿದರು. ನಾನು ಕೊಟ್ಟಿರುವುದರಲ್ಲಿ 10-11 ಲಕ್ಷ ಕಡಿಮೆ ಹೇಳಿದರು. ಅಗ್ರೀಮೆಂಟ್ ಮಾಡಿಕೊಳ್ಳದೇ ಇದದ್ದು ನನ್ನ ತಪ್ಪು. ತೊಂದರೆ ಇಲ್ಲ, ಪರ್ವಾಗಿಲ್ಲ ಅಂತ ನಾನು ಸುಮ್ಮನಾದೆ'' - ಕೆ.ಮಂಜು, ನಿರ್ಮಾಪಕ

ನಂಬಿದ್ದೇ ತಪ್ಪಾ?

''ನಾನು ಇಲ್ಲಿಯವರೆಗೂ ಸುಮಾರು 47 ಸಿನಿಮಾ ಮಾಡಿದ್ದೇನೆ. ಯಾರೊಂದಿಗೂ ಅಗ್ರೀಮೆಂಟ್ ಮಾಡಿಕೊಂಡಿಲ್ಲ. ಒಬ್ಬ ನಿರ್ಮಾಪಕನ ಪತ್ನಿ ಅವರು. ದೊಡ್ಡ ಕಲಾವಿದರು ಅನ್ನೋ ಗೌರವ ಇತ್ತು ನನಗೆ ಅವರ ಮೇಲೆ. ಮೊದಲ ಬಾರಿ ಅವರೊಂದಿಗೆ ನಾನು ವ್ಯವಹಾರ ಮಾಡಿದ್ದು. ನಾನು ಅವರನ್ನ ನಂಬಿದ್ದೇ ತಪ್ಪಾ?'' - ಕೆ.ಮಂಜು, ನಿರ್ಮಾಪಕ

ಮಾಲಾಶ್ರೀ ಬೇಡಿಕೆ

''ಹೊಸ ಸಂಭಾವನೆ ಮಾಡಿ, ನಾನು ಹೊಸ ಮನೆ ತೆಗೆದುಕೊಳ್ಳುತ್ತಿದ್ದೇನೆ. ಮನೆ ಆಲ್ಟರೇಷನ್ ಇದೆ, ರಿಜಿಸ್ಟ್ರೇಷನ್ ಮಾಡಿಸಬೇಕು' ಅಂತ ಮಾಲಾಶ್ರೀ ಹೇಳಿದರು'' - ಕೆ.ಮಂಜು, ನಿರ್ಮಾಪಕ

ರಾಮು ಕಾಸು ಕೊಡಲ್ವಂತೆ!

''ಈ ಮಾತನ್ನ ನಾನು ಹೇಳಬಾರದು, ಆದರೂ ಹೇಳುತ್ತಿದ್ದೇನೆ, ''ರಾಮು ಅವರು ನನಗೆ ಕಾಸು ಕೊಡುತ್ತಿಲ್ಲ. ನನಗೆ ದುಡ್ಡು ಬೇಕೇ ಬೇಕು'' ಅಂತ ಮಾಲಾಶ್ರೀ ಹೇಳಿದರು. ನನಗೆ ದುಡ್ಡು ಸಮಸ್ಯೆ ಇತ್ತು. ಇಮ್ರಾನ್ ಏನು ಬೇಕಾದರೂ ಮಾಡಿಕೊಳ್ಳಿ ಅಂತ ವಾಪಸ್ ಬಂದುಬಿಟ್ಟೆ'' - ಕೆ.ಮಂಜು, ನಿರ್ಮಾಪಕ

ನಾಲ್ಕು ವರ್ಷ ಆಗಿದೆ ದುಡ್ಡು ಕೊಟ್ಟು.!

''ನನಗೆ ಅವರು ನಾಲ್ಕು ವರ್ಷ ಆಗಿದೆ ದುಡ್ಡು ಕೊಟ್ಟು. ಯಾವತ್ತಾದರೂ ನಾನು ಅವರ ಬಳಿ ದುಡ್ಡು ಕೊಡಿ ಕೇಳಿದ್ದೇನಾ? ರಾಮು ಅವರ ಶ್ರೀಮತಿ ಎನ್ನುವ ಒಂದೇ ಗೌರವಕ್ಕೆ ನಾನು ಇಲ್ಲಿಯವರೆಗೂ ಸುಮ್ಮನಿದ್ದೆ'' - ಕೆ.ಮಂಜು, ನಿರ್ಮಾಪಕ

ಇಮ್ರಾನ್ ಗೆ ಬ್ಲಾಕ್ ಮೇಲ್!

''ಇಷ್ಟದಾದರೂ, ಮೊದಲನೇ ದಿನ ದುಡ್ಡು ಕೊಟ್ಟರೆ ಮಾತ್ರ ಬರ್ತೀನಿ ಅಂತ ಇಮ್ರಾನ್ ಗೆ ಬ್ಲಾಕ್ ಮೇಲ್ ಮಾಡುತ್ತಾರೆ. ಇಮ್ರಾನ್ ಪರಿಸ್ಥಿತಿ ಏನಾಗಬೇಕು.? ಹೊಸ ನಿರ್ಮಾಪಕನ ಗತಿ ಏನಾಗಬೇಕು?'' - ಕೆ.ಮಂಜು, ನಿರ್ಮಾಪಕ

ನಿರ್ಮಾಪಕರಿಗೆ ತೊಂದರೆ!

''ಶೂಟಿಂಗ್ ಗೆ ಲೇಟ್ ಆಗಿ ಬರ್ತಿದ್ದಾರೆ, ರಿಹರ್ಸಲ್ ಮಾಡಿಲ್ಲ ಅಂತ ಇಮ್ರಾನ್ ಹೇಳಿದರು. ಇನ್ನೂ ಒಂದು ಸೀನ್ ಕೂಡ ಸರಿಯಾಗಿ ಬಂದಿಲ್ಲ. ಆಗಲೇ ನಾಲ್ಕುವರೆ ಲಕ್ಷ ಖರ್ಚಾಗಿದೆ. ಅದಕ್ಕೆ ನಾನು ಇಮ್ರಾನ್ ಬಳಿ ಹೇಳಿದೆ, ''ಕೂಲಂಕುಷವಾಗಿ ತಿಳಿದುಕೊಂಡು ಸಿನಿಮಾ ಮಾಡು, ಇಲ್ಲಾಂದ್ರೆ ಮಾಡಬೇಡ. ದಯವಿಟ್ಟು ಸ್ಟಾಪ್ ಮಾಡು. ನಿರ್ಮಾಪಕರಿಗೆ ತೊಂದರೆ ಆಗುತ್ತಿದೆ'' ಅಂತ. ಇದನ್ನ ಬಿಟ್ಟು ನಾನು ಬೇರೇನೂ ಮಾತನಾಡಲಿಲ್ಲ'' - ಕೆ.ಮಂಜು, ನಿರ್ಮಾಪಕ

ನನಗೆ ಸ್ಟುಪಿಡ್ ಅಂದಿದ್ದಾರೆ!

''ಮಾಲಾಶ್ರೀ ಮೇಡಂ ನನಗೆ ಸ್ಟುಪಿಡ್ ಅಂದಿದ್ದಾರೆ, ನಾನೇನು ಇವರ ಬಳಿ ಸಾಲ ಮಾಡಿದ್ದೀನಾ? ನಾನು ಇವರ ಮನೆ ಕೆಲಸಗಾರನಾ? ಇವರು ಕಷ್ಟ ಅಂತ ಹೇಳಿದ ತಕ್ಷಣ ನಾನು ದುಡ್ಡು ತೆಗೆದುಕೊಂಡು ಹೋಗಿ ಕೊಟ್ಟಿದ್ದು ತಪ್ಪಾ? ಮಾಲಾಶ್ರೀ ಅವರಿಗೆ ದುಡ್ಡು ಅವಶ್ಯಕತೆ ಇಲ್ಲ ಅಂತ ಇವತ್ತು ಯಾರೋ ನಟಿ ಹೇಳ್ತಾರೆ. ನನಗೇನು ಹುಚ್ಚು ನಾಯಿ ಕಡಿದಿದ್ಯಾ? ಅವರ ಮನೆಗೆ ಹೋಗಿ ದುಡ್ಡು ಕೊಟ್ಟು ಬರುವುದಕ್ಕೆ?'' - ಕೆ.ಮಂಜು, ನಿರ್ಮಾಪಕ

ಕೊಬ್ರಿ ಮಾರಿ ಕಷ್ಟ ಪಟ್ಟಿದ್ದೇನೆ.!

''ನಾನು ಶೋಕಿಗೆ ಸಿನಿಮಾ ಮಾಡುತ್ತಿಲ್ಲ. ಆಟೋ ರಿಕ್ಷಾ ಓಡಿಸಿ, ಕೊಬ್ರಿ ಗಾಡಿ ತಳ್ಳಿ, ಕಷ್ಟ ಪಟ್ಟು, ರಕ್ತ ಸುರಿಸಿ ನಾನು ಇವತ್ತು ಈ ಮಟ್ಟಕ್ಕೆ ಬಂದಿದ್ದೇನೆ. ನಮಗೆ ಬೆಲೆ ಇಲ್ವಾ? ನಾವೇನು ಗುಲಾಮರಾ? ಕೊಬ್ರಿ ಮಾರ್ತಿದ್ದೆ. ಕಳ್ಳತನ ಮಾಡಿಲ್ಲ. ಕಷ್ಟಪಟ್ಟು ದುಡಿದಿದ್ರೆ ಬೆಲೆ ಗೊತ್ತಾಗುತ್ತೆ. ನಾನು ಅವಿವೇಕಿನಾ? ಥರ್ಡ್ ಕ್ಲಾಸಾ?'' - ಕೆ.ಮಂಜು, ನಿರ್ಮಾಪಕ

ಕಲ್ಚರ್ ಇರಬೇಕು!

''ಅವರಿಗೆ ದುಡ್ಡು ಬೇಕಾದಾಗ 'ಮಂಜು ಸರ್, ಮಂಜು ಜೀ'. ಆಮೇಲೆ ಸ್ಟುಪಿಡ್. ಮಾಲಾಶ್ರೀ ದೊಡ್ಡ ಆರ್ಟಿಸ್ಟ್ ಆಗಿರ್ಬಹುದು. ಅದರ ಜೊತೆ ಕಲ್ಚರ್ ಕೂಡ ಇರಬೇಕು. ಅವರ ಬಗ್ಗೆ ನಮಗೆ ಅಪಾರ ಗೌರವ ಇರುವುದು ರಾಮು ಅವರ ಹೆಂಡತಿ ಅಂತ'' - ಕೆ.ಮಂಜು, ನಿರ್ಮಾಪಕ

ನಾನೂ ಕಣ್ಣೀರು ಹಾಕ್ಲಾ?

''ದೊಡ್ಡ ನಟಿ ಕಣ್ಣೀರು ಹಾಕುತ್ತಾರೆ ಅಂತ ಸುಮ್ನೆ ಆಗ್ಬೇಕಾ? ನಾನೂ ಕಣ್ಣೀರು ಹಾಕ್ಲಾ? ಕ್ಯಾಮರಾ ಮುಂದೆ ನಟಿಸುವುದಕ್ಕೆ ನನಗೆ ಬರಲ್ಲ. ಸತ್ಯ ಬೇಕು'' - ಕೆ.ಮಂಜು, ನಿರ್ಮಾಪಕ

ಕ್ಷಮೆ ಕೇಳಲ್ಲ!

''ನಾನು ಯಾಕೆ ಕ್ಷಮೆ ಕೇಳ್ಬೇಕು? ಕ್ಷಮೆ ಕೇಳುವ ತಪ್ಪು ನಾನು ಮಾಡಿಲ್ಲ'' - ಕೆ.ಮಂಜು, ನಿರ್ಮಾಪಕ

ಸಿನಿಮಾ ಮುಂದುವರಿಯುತ್ತಾ?

''ಸಿನಿಮಾ ಮಾಡೋದು ಬಿಡೋದು ಇಮ್ರಾನ್ ಗೆ ಬಿಟ್ಟ ವಿಚಾರ. ಅದರ ಬಗ್ಗೆ ನಾನು ತಲೆ ಹಾಕುವುದಿಲ್ಲ'' - ಕೆ.ಮಂಜು, ನಿರ್ಮಾಪಕ

English summary
Producer K.Manju hit back against Kannada Actress Malashri while addressing the press meet today in Green House, Bengaluru over 'Uppu Huli Khara' Controversy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada