For Quick Alerts
  ALLOW NOTIFICATIONS  
  For Daily Alerts

  ಮುನಿರತ್ನಗೆ ಕೊರೊನಾ, 'ಕ್ಷೇಮವಾಗಿ ಬಂದರೆ ನಿಮ್ಮ ಸೇವೆ...ಇಲ್ಲದಿದ್ದರೆ ಕ್ಷಮಿಸಿಬಿಡಿ'

  |

  ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕ ಹಾಗೂ ರಾಜರಾಜೇಶ್ವರಿ ನಗರದ ಮಾಜಿ ಶಾಸಕ ಮುನಿರತ್ನ ಅವರಿಗೆ ಕೊರೊನಾ ವೈರಸ್ ತಗುಲಿರುವುದು ದೃಢವಾಗಿದೆ.

  ಓಂ ಆದ್ಮೇಲೆ ನಾನು ಎಂಜಾಯ್ ಮಾಡಿದ ಸಿನಿಮಾ ಇದು | Filmibeat Kannada

  ಈ ಕುರಿತು ಸ್ವತಃ ಮುನಿರತ್ನ ಅವರೇ ಮಾಹಿತಿ ನೀಡಿದ್ದು, ''ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ನನ್ನ ಎಲ್ಲಾ ಮತದಾರ ದೇವರುಗಳಿಗೆ ವಂದನೆಗಳು. 57 ವರ್ಷ ವಯಸ್ಸಿನವನಾದ ನಾನು ಇಂದು ಕೊವೀಡ್ ಪರೀಕ್ಷೆ ಮಾಡಿಸಿದಾಗ ಕೊರೋನಾ ಪಾಸಿಟಿವ್ ಬಂದಿದೆ' ಎಂದು ತಿಳಿಸಿದ್ದಾರೆ.

  ಮುನಿರತ್ನಗೆ ಶುಭಾಶಯ: ವಿವಾದದ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?ಮುನಿರತ್ನಗೆ ಶುಭಾಶಯ: ವಿವಾದದ ಕುರಿತು ನಿಖಿಲ್ ಕುಮಾರಸ್ವಾಮಿ ಹೇಳಿದ್ದೇನು?

  ಟ್ವಿಟ್ಟರ್‌ನಲ್ಲಿ ಮಾಹಿತಿ ನೀಡಿರುವ ಮುನಿರತ್ನ ಕೊನೆಯಲ್ಲಿ 'ಕ್ಷೇಮವಾಗಿ ಬಂದರೆ ನಿಮ್ಮ ಸೇವೆ....ಇಲ್ಲದಿದ್ದರೆ ಕ್ಷಮಿಸಿಬಿಡಿ...ಇಂತಿ ನಿಮ್ಮ ಸೇವಕ ಮುನಿರತ್ನ'' ಎಂದಿದ್ದಾರೆ.

  ಈ ಸಾಲುಗಳ ಬಳಕೆ ಖಂಡಿಸಿರುವ ಕೆಲವರು ''ಕೊರೊನಾ ಬಗ್ಗೆ ಜನಕ್ಕೆ ತಿಳಿ ಹೇಳಬೇಕಾದ ನೀವುಗಳೆ ಹೀಗೆ ಹೇಳಿದರೆ ಹೇಗೆ ಮುನಿರತ್ನ ಸಾರ್.?'' ಎಂದು ಪ್ರಶ್ನಿಸಿದ್ದಾರೆ. ಅನೇಕರು ಮುನಿರತ್ನ ಅವರು ಬೇಗ ಚೇತರಿಸಿಕೊಂಡು ಬರಲಿ ಎಂದು ಹಾರೈಸಿದ್ದಾರೆ.

  ಕೊನೆಯದಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ಕುರುಕ್ಷೇತ್ರ ಚಿತ್ರ ಮಾಡಿರುವ ಮುನಿರತ್ನ, ಸದ್ಯಕ್ಕೆ ರಾಜಕೀಯದ ಕಡೆ ಮಾತ್ರ ಹರಿಸಿದ್ದಾರೆ. ಆರ್ ಆರ್ ನಗರ ಉಪಚುನಾವಣೆಗಾಗಿ ಎದುರು ನೋಡುತ್ತಿದ್ದಾರೆ.

  English summary
  Kurukshtra film producer and RR nagara ex MLA Munirathna tested Corona virus positive.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X