»   » ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್

ಮರಾಠಿ 'ಸೈರಟ್' ಚಿತ್ರವನ್ನು ಕನ್ನಡಕ್ಕೆ ತರುತ್ತಿದ್ದಾರೆ ರಾಕ್ ಲೈನ್

Posted By:
Subscribe to Filmibeat Kannada

ಇಡೀ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿ ಮಾಡಿದ ಮರಾಠಿಯ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ಸೈರತ್' ಇದೀಗ ಕನ್ನಡ ಭಾಷೆ ಸೇರಿದಂತೆ ಇನ್ನು ಮೂರು ಭಾಷೆಗೆ ರೀಮೇಕ್ ಆಗಲಿದೆ.

ಹೌದು ರಾಷ್ಟ್ರ ಪ್ರಶಸ್ತಿ ವಿಜೇತ 'ಸೈರತ್' ಚಿತ್ರವನ್ನು ಕನ್ನಡ ನಟ ಕಮ್ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗೆ ರೀಮೇಕ್ ಮಾಡಲಿದ್ದಾರೆ.[ಮತ್ತೆರಡು ತಮಿಳು ಚಿತ್ರಗಳು ಕನ್ನಡಕ್ಕೆ ರೀಮೆಕ್]

Producer Rockline Venkatesh to remake 'Sairat' in kannada

ಈಗಾಗಲೇ ರೀಮೇಕ್ ಹಕ್ಕನ್ನು ಖರೀದಿ ಮಾಡಿರುವ ರಾಕ್ ಲೈನ್ ವೆಂಕಟೇಶ್ ಅವರು ತಮ್ಮದೇ ಮಾಲಿಕತ್ವದ ರಾಕ್ ಲೈನ್ ಎಂರ್ಟಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ನಾಲ್ಕು ಭಾಷೆಗೆ 'ಸೈರತ್' ಸಿನಿಮಾವನ್ನು ರೀಮೇಕ್ ಮಾಡಲಿದ್ದಾರೆ.

ಮರಾಠಿ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹೊಸ ದಾಖಲೆ ಹುಟ್ಟುಹಾಕಿರುವ 'ಸೈರತ್' ಸಿನಿಮಾ ಮೀನುಗಾರನ ಮಗ ಮತ್ತು ಶ್ರೀಮಂತನ ಮಗಳ ನಡುವಿನ ಲವ್ ಸ್ಟೋರಿಯಾಧರಿತ ಕಥೆಯನ್ನು ಹೊಂದಿತ್ತು.[ಗೋಲ್ಡನ್ ಸ್ಟಾರ್ ಗಣಿಗೆ 'ಭಲೇ ಭಲೇ' ಎಂದ ರಾಕ್ ಲೈನ್!]

Producer Rockline Venkatesh to remake 'Sairat' in kannada

ಇನ್ನು ರಿಮೇಕ್ ಬಗ್ಗೆ ಖುಷಿ ವ್ಯಕ್ತಪಡಿಸಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು 'ದಕ್ಷಿಣ ಭಾರತದ ಭಾಷೆಗಳಲ್ಲಿ ನಮಗೆ ರೀಮೇಕ್ ಮಾಡುವ ಅವಕಾಶ ಸಿಕ್ಕಿರುವುದು ಖುಷಿಯಾಗಿದೆ. ಜೊತೆಗೆ 'ಸೈರತ್' ಚಿತ್ರಕ್ಕೆ ಬಂದ ಅದ್ಭುತ ಪ್ರತಿಕ್ರಿಯೆ ಕಂಡು ಬಹಳ ಅಚ್ಚರಿಯಾಗಿತ್ತು. ಝೀ ಸ್ಟುಡಿಯೋ ಜೊತೆ ಮಾಡುತ್ತಿರುವ ಮೊದಲ ಒಪ್ಪಂದ ಇದು' ಎಂದಿದ್ದಾರೆ.[ಕನ್ನಡ ನಟರ ಅಸಲಿ 'ಮನಿ'ಸ್ಥಿತಿ ಬಿಚ್ಚಿಟ್ಟ ರಾಕ್ ಲೈನ್]

Producer Rockline Venkatesh to remake 'Sairat' in kannada

ಅವಿನಾಶ್ ಘಾಡ್ಗೆ ಕಥೆ ಬರೆದು, ನಿರ್ದೇಶಕ ನಾಗರಾಜ್ ಮಂಜುಳೆ ಆಕ್ಷನ್-ಕಟ್ ಹೇಳಿರುವ 'ಸೈರತ್' ಚಿತ್ರ ಇದುವರೆಗೆ ಸುಮಾರು 80 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ.

ಎಲ್ಲವೂ ಅಂದುಕೊಂಡಂತೆ ನಡೆದರೆ ಆಗಸ್ಟ್ ತಿಂಗಳಿನಲ್ಲಿ ಚಿತ್ರದ ಕೆಲಸಗಳು ಆರಂಭವಾಗಲಿವೆ. ಮೊದಲು ಕನ್ನಡ ಮತ್ತು ತೆಲುಗಿಗೆ ಮರಾಠಿಯ 'ಸೈರತ್' ರೀಮೇಕ್ ಆಗಲಿದ್ದು, ತದನಂತರ ತಮಿಳು ಮತ್ತು ಮಲಯಾಳಂ ಭಾಷೆಯಲ್ಲಿ ಸಿನಿಮಾ ತಯಾರಾಗಲಿದೆ.

English summary
Marathi blockbuster "Sairat" is all set to be remade in Kannada, Tamil, Telugu and Malayalam. The remake rights have been acquired by popular Kannada producer Rockline Venkatesh.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada