ಕೆಎಫ್ ಸಿಸಿಗೆ ನೂತನ ಸಾರಥಿಯಾಗಿ ವಿಜಯ್ ಕುಮಾರ್

By Mahesh

Vijaykumar
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಚುನಾವಣೆ ಫಲಿತಾಂಶ ಹೊರಬಿದ್ದಿದೆ. ನಿರ್ಮಾಪಕ ಬಿ.ವಿಜಯ್‌ಕುಮಾರ್ ಅವರು ವಾಣಿಜ್ಯ ಮಂಡಳಿಯ ಆಡಳಿತದ ಚುಕ್ಕಾಣಿ ಹಿಡಿದ ನೂತನ ಸಾರಥಿಯಾಗಿದ್ದಾರೆ.

ಅಧ್ಯಕ್ಷರಾಗಿ ಆಯ್ಕೆ ಆಗಿರುವ ವಿಜಯಕುಮಾರ್, ಕರ್ನಾಟಕ ರೇಷ್ಮೆ ನಿಗಮ ಮಂಡಳಿ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಿ.ಎನ್.ಗಂಗಾಧರ್, ರಾಜೇಂದ್ರಸಿಂಗ್ ಬಾಬು ಅಧ್ಯಕ್ಷ ಸ್ಥಾನದ ಪ್ರತಿಸ್ಪರ್ಧಿಗಳಾಗಿದ್ದರು.

ವಿಜಯ್ ಕುಮಾರ್ 360, ಗಂಗಾಧರ್ 255 ಹಾಗೂ ರಾಜೇಂದ್ರಸಿಂಗ್ ಬಾಬು 173 ಮತಗಳನ್ನು ಪಡೆದಿದ್ದಾರೆ. 105 ಮತಗಳಿಂದ ಬಿ.ವಿಜಯ್‌ಕುಮಾರ್
ತಮ್ಮ ಹತ್ತಿರದ ಪ್ರತಿಸ್ಪರ್ಧಿ ಗಂಗಾಧರ್ ಅವರನ್ನು ಪರಾಭವಗೊಳಿಸಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಉಮೇಶ್ ಬಣಕಾರ್ (ನಿರ್ಮಾಪಕರ ವಲಯ), ಎನ್.ಕುಮಾರ್ (ವಿತರಕರ ವಲಯ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಎಂ.ನರಸಿಂಹಲು (ಪ್ರದರ್ಶಕರ ವಲಯ), ಕಾರ್ಯದರ್ಶಿ ಸ್ಥಾನಕ್ಕೆ ಎ.ಗಣೇಶ್ (ನಿರ್ಮಾಪಕರ ವಲಯ), ಕೆ.ರಾಜಶೇಖರ್ (ವಿತರಕರ ವಲಯ), ಜಿ.ಕೆ.
ಕುಟ್ಟಿ (ಪ್ರದರ್ಶಕರ ವಲಯ)ಗಳಿಂದ ಆಯ್ಕೆ ಆಗಿದ್ದಾರೆ. ಖಜಾಂಚಿ ಸ್ಥಾನಕ್ಕೆ ಚಿನ್ನೇಗೌಡರ ಆಯ್ಕೆ ಆಗಿದ್ದಾರೆ.

ನಿರ್ಮಾಪಕರು, ವಿತರಕರು, ಪ್ರದರ್ಶಕರು ಈ ಮೂರು ವಲಯದ ಪ್ರತಿನಿಧಿಗಳಷ್ಟೇ ವಾಣಿಜ್ಯ ಮಂಡಳಿಯ ಸದಸ್ಯರಾಗಲು ಅರ್ಹರು. ಒಂದೊಂದು ವರ್ಷ ಒಂದೊಂದು
ವಲಯಕ್ಕೆ ಪ್ರಾತಿನಿಧ್ಯ ಒದಗಿಸಿ ಅಧ್ಯಕ್ಷರನ್ನ ಆಯ್ಕೆ ಮಾಡುವುದು ಸಂಪ್ರದಾಯ.

ಕಳೆದ ವರ್ಷ ಪ್ರದರ್ಶಕರ ವಲಯದಿಂದ ಕೆ.ವಿ.ಚಂದ್ರಶೇಖರ್ ಅಧ್ಯಕ್ಷ ಸ್ಥಾನಕ್ಕೆ ಆರಿಸಿ ಬಂದಿದ್ದರು. ಈ ಬಾರಿ ನಿರ್ಮಾಪಕರ ವಲಯದಿಂದ ಬಿ.ವಿಜಯ್‌ಕುಮಾರ್ ಆಯ್ಕೆಯಾಗಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ಈ ಬಾರಿ ನಿರ್ಮಾಪಕರ ವಲಯದಿಂದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಸಲಾಗಿತ್ತು. ಫಿಲ್ಮಂ ಚೇಂಬರ್ ನ ಸದಸ್ಯರು ಮತದಾನ ಮಾಡುವ ಮೂಲಕ ವಾಣಿಜ್ಯ ಮಂಡಳಿಯ 38ನೇ ಅಧ್ಯಕ್ಷರಾಗಿ ನಿರ್ಮಾಪಕ ಬಿ.ವಿಜಯಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.

ಎಲ್ಲರಿಗೂ ಗೊತ್ತಿರುವಂತೆ ವಿಜಯ್‌ಕುಮಾರ್ ಹತ್ತಾರು ಯಶಸ್ವಿ ಚಿತ್ರಗಳನ್ನ ನಿರ್ಮಿಸಿದ್ದಾರೆ. ಮೌನಗೀತೆ, ಲಯನ್ ಜಗಪತಿ ರಾವ್, ಜಗದೇಕ ವೀರ, ಅವತಾರ ಪುರುಷ, ಸಿಂಹಾದ್ರಿಯ ಸಿಂಹ... ಅವುಗಳಲ್ಲಿ ಪ್ರಮುಖವಾದ ಕೆಲವು. ಟೂರಿಂಗ್ ಟಾಕೀಸ್ ಮಾಡಿ ಕೊಂಡು ಪ್ರದರ್ಶನಕಾರರಾಗಿ ಕಾರ್ಯ ನಿರ್ವಹಿಸಿದ ಇತಿಹಾಸ ಕೂಡಾ ಅವರ ಬೆನ್ನಿಗಿದೆ. ಇದಲ್ಲದೆ ಸುಮಾರು ನೂರಕ್ಕೂ ಹೆಚ್ಚು ಚಿತ್ರಗಳನ್ನ ವಿತರಣೆ ಮಾಡಿದ್ದಾರೆ.

ಫಿಲಂ ಚೇಂಬರ್‌ನ ಒಟ್ಟು 1,292 (659 ನಿರ್ಮಾಪಕರು, 360 ವಿತರಕರು, 273 ಪ್ರದರ್ಶನಕರು) ಮಂದಿ ಸದಸ್ಯರು ಮತದಾನ ಮಾಡುವ ಮೂಲಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಿದ್ದಾರೆ.

More from Filmibeat

English summary
Kannada Film producer B Vijaykumar elected as new president of the Karnataka Film Chamber of Commerce (KFCC) on Saturday(Sept.30) Umesh banakar as his deputy.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X